ಚನ್ನಪಟ್ಟಣ: ವಿಕಾಸಪರ್ವ ಸಮಾ
ವೇಶದ ಅಂಗವಾಗಿ ಮಂಗಳವಾರ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಈ ಮೂಲಕ ಜೆಡಿಎಸ್ ತನ್ನ ಶಕ್ತಿ ಪ್ರದರ್ಶಿಸಿತು.

ಹೆಲಿಕಾಪ್ಟರ್ ಮೂಲಕ ಪೊಲೀಸ್‌ ತರಬೇತಿ ಶಾಲೆ ಆವರಣದಲ್ಲಿ ಬಂದಿಳಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಅಲ್ಲಿಂದ ಕೆಂಗಲ್‌ ಆಂಜನೇಯನ ಸನ್ನಿಧಿಗೆ ತೆರಳಿ ಪತ್ನಿ ಅನಿತಾ ಜೊತೆ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು. ಬಳಿಕ ವಿಕಾಸವಾಹಿನಿಯ ತೆರೆದ ವಾಹನದಲ್ಲಿ ಚನ್ನಪಟ್ಟಣದತ್ತ ಮೆರವಣಿಗೆ ಹೊರಟುಬಂತು.

ವಾಹನದ ಮುಂಭಾಗ ಸಾವಿರಾರು ಕಾರ್ಯಕರ್ತರು ಬೈಕುಗಳಲ್ಲಿ ಜೆಡಿಎಸ್ ಬಾವುಟ ಕಟ್ಟಿಕೊಂಡು ಮೆರವಣಿಗೆ ಮುನ್ನಡೆಸಿದರು. ದಾರಿಯುದ್ದಕ್ಕೂ ಹೂವು ಎರಚುತ್ತಾ ಸ್ವಾಗತಿಸಲಾಯಿತು.

ಅಲ್ಲಲ್ಲಿ ವಿವಿಧ ಸಮುದಾಯಗಳ ಮುಖಂಡರು ಹಾರ ಹಾಕಿ ಶುಭಾಶಯ ಕೋರಿದರು. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಎಚ್‌ಡಿಕೆ ಮಾಲಾರ್ಪಣೆ ಮಾಡಿದರು.

 

ಕೆಂಗಲ್‌ನಿಂದ ದೊಡ್ಡಮಳೂರು ಮೈದಾನದವರೆಗೆ ಸುಮಾರು ನಾಲ್ಕು ಗಂಟೆ ಕಾಲ ಮೆರವಣಿಗೆಯು ನಡೆಯಿತು. ಕಾರ್ಯಕ್ರಮ ಆರಂಭ
ಗೊಂಡಾಗ ಮಧ್ಯಾಹ್ನ 4 ಗಂಟೆಯಾಗಿತ್ತು. ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಎಚ್‌ಡಿಕೆ ಬಿಸಿಲಿನಿಂದ ಬಳಲಿದ್ದು, ವೇದಿಕೆಯಲ್ಲಿ ಕೊಂಚ ಚೇತರಿಸಿಕೊಂಡರು.

ವೇದಿಕೆಗೆ ಧಾವಿಸಿದ ಎಚ್‌ಡಿಕೆ ಅವರಿಗೆ ಅಭಿಮಾನಿಗಳು ಕ್ರೇನ್ ಮೂಲಕ ರೇಷ್ಮೆಗೂಡಿನ ಹಾರ ಹಾಕಿದರು. ಈ ಸಂದರ್ಭ ನೂಕು
ನುಗ್ಗಲು ಉಂಟಾಗಿ ಪೊಲೀಸರು ಲಘುವಾಗಿ ಲಾಠಿ ಬೀಸಿದರು.

ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಂದಲೂ ಸಾವಿರಾರು ಜನರು ಬಂದಿದ್ದರು. ಬೆಳಿಗ್ಗೆ 11ರಿಂದಲೇ ಕಾಯತೊಡಗಿದ್ದು, ಕೆಲವರು ಬೇಸತ್ತು ವಾಪಸ್‌ ನಡೆದರು.

By R

You missed