Welcome to Janata Dal (Secular) Official Website
Welcome to Janata Dal (Secular) Official Website
ಜೆ.ಡಿ.ಸ್ 2018ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ 24ಗಂಟೆಯಲ್ಲಿ ರೈತ ಸಾಲ ಮನ್ನಾ.
ಬಯಲು ಸೀಮೆ ಶಾಶ್ವತ ಕುಡಿಯುವ ನೀರು ವ್ಯವಸ್ಥೆ.

ನವಲಗುಂದ: ‘ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಮತ್ತು ಬಿಜೆಪಿ ರೈತರ ಮೇಲೆಯೇ ದೌರ್ಜನ್ಯ ಎಸಗಿವೆ. ರೈತರ ಪರ ಕಾಳಜಿ ಹೊಂದಿರುವ ನಿಜವಾದ ಪಕ್ಷವೆಂದರೆ ಜೆಡಿಎಸ್‌. ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಶಂಕರ ಕಲಾ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಬೇರೆ ಪಕ್ಷದವರು ಈಗ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಆದರೆ, ನಾವು ಇನ್ನೊಬ್ಬರತ್ತ ಬೊಟ್ಟು ಮಾಡುವ ಬದಲು ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆ ರೂಪಿಸುವಲ್ಲಿ ತಲ್ಲೀನರಾಗಿದ್ದೇವೆ’ ಎಂದರು.

‘ಎಲ್ಲ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದು. ರೈತರ ನೆಮ್ಮದಿಯ ಜೀವನಕ್ಕೆ ಯೋಜನೆಗಳನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನೀವೆಲ್ಲರೂ ಕೋನರಡ್ಡಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿ. ನಾನು, ಸಚಿವರನ್ನಾಗಿ ಮಾಡುತ್ತೇನೆ. ಪಕ್ಷದ ಬೆಳವಣಿಗೆಗೆ ನವಲಗುಂದದ ಜನ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಿಮ್ಮೆಲ್ಲರ ಋಣ ತೀರಿಸಲು ಕೋನರಡ್ಡಿ ಅವರನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಅವರ ಭಾಷಣ ಆರಂಭವಾಗುತ್ತಿದ್ದಂತೆ ಜಿಟಿ ಜಿಟಿ ಮಳೆ ಶುರುವಾಯಿತು. ಸಮಾವೇಶ ಆರಂಭಕ್ಕೂ ಮೊದಲು ನಡೆದ ಮೆರವಣಿಗೆಯ ವೇಳೆಯೂ ಮಳೆ ಬಂದಿತ್ತು. ಇದರ ಬಗ್ಗೆ ಪ್ರಸ್ತಾಪಿಸಿದ ಅವರು ‘ನಾವಳ್ಳಿ ಗ್ರಾಮದಲ್ಲಿ ವಾಸ್ತ್ಯವ್ಯ ಮಾಡಿದ್ದಾಗಲೂ ಮಳೆ ಸುರಿದಿತ್ತು. ಆಗ ಮಳೆಯಲ್ಲಿಯೇ ಎಲ್ಲ ಕಡೆಯೂ ಓಡಾಡಿದ್ದೆ’ ಎಂದು ನೆನಪಿಸಿಕೊಂಡರು.

ಶಾಸಕ ಕೋನರಡ್ಡಿ ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷವೆಂದರೆ ಎಲ್ಲರಿಗೂ ಮೊದಲು ನೆನಪಾಗುವುದು ನವಲಗುಂದ ಕ್ಷೇತ್ರ. ಈ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸವೇನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನನ್ನ ಬದುಕು ತೆರೆದ ಪುಸ್ತಕವಿದ್ದಂತೆ, ಟೀಕಿಸುವವರು ಕ್ಷೇತ್ರಕ್ಕೆ ಬಂದರೆ, ಜನರೇ ನನ್ನ ಸಾಧನೆ ಬಗ್ಗೆ ಹೇಳುತ್ತಾರೆ’ ಎಂದರು.

‘198 ಚಕ್ಕಡಿ ರಸ್ತೆ, 3,000 ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇನೆ. ರಾಜ್ಯದ ಎಲ್ಲ ಜನ ಸ್ವಂತ ಸೂರು ಹೊಂದಬೇಕು ಎಂಬುದು ಕುಮಾರಸ್ವಾಮಿ ಅವರ ಆಶಯ. ಆದ್ದರಿಂದ, ಎಲ್ಲರೂ ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಬೇಕು’ ಎಂದು ಮನವಿ ಮಾಡಿಕೊಂಡರು.

ಪ್ರಮುಖರಾದ ರಾಜಣ್ಣ ಕೊರವಿ, ಅಲ್ತಾಫ್‌ ಕಿತ್ತೂರ, ಗಂಗಾಧರ ಪಾಟೀಲ ಕುಲಕರ್ಣಿ, ಶಿವಣ್ಣ ಹುಬ್ಬಳ್ಳಿ, ಪ್ರೇಮನಾಥ ಚಿಕ್ಕತುಂಬಳ, ರಾಜಣ್ಣ ಕೊರವಿ, ಗುರುರಾಜ ಹಣಸಿಮರದ, ಫಕ್ಕೀರಪ್ಪ ನಾಯಕ, ಫರೀದಾ ರೋಣದ ಇದ್ದರು.

Share with Your Friends and Family

Press Briefings

ಚನ್ನಪಟ್ಟಣ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಚನ್ನಪಟ್ಟಣ ವಿಧಾನಸಭಾ ಕೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ...

ಬೆಂಗಳೂರು:‘ಈ ಬಾರಿ ನನ್ನ ಇಮೇಜನ್ನು ವೋಟ್ ಆಗಿ ಪರಿವರ್ತನೆ ಮಾಡಿಕೊಳ್ಳುವ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸ್ವಂತ ಬಲದ...

ಹುಣಸೂರು: ರಾಜಕೀಯ ಏಳು–ಬೀಳಿನ ಆಟದಲ್ಲಿ ಬೀದಿಪಾಲಾಗಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದೆ. ಆದರೆ, ನನ್ನನ್ನೇ ಪಕ್ಷದಿಂದ ಹೊರಬರುವಂತೆ...

ಮೈಸೂರು, ಏ.14- ರಾಷ್ಟ್ರೀಯ ಪಕ್ಷಗಳು ಟಿಕೆಟ್ ಹಂಚಿಕೆ ಮಾಡಲು ಒಡೆದಾಡುತ್ತಿವೆ. ಇನ್ನೂ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಆದರೆ, ನಾವು ಈಗಾಗಲೇ...