ಬೆಂಗಳೂರು: ‘ಸರ್ಕಾರ ಉರುಳುತ್ತದೆ ಎಂದು ಭಾವಿಸಿರುವ ಕೆಲವು ಅಧಿಕಾರಿಗಳು ತಮಗೆ ತಿಳಿದಂತೆ ಕೆಲಸ ಮಾಡುತ್ತಿದ್ದಾರೆ. ಒಂದು ವಾರದಲ್ಲಿ ಅವರು ಬದಲಾಗದಿದ್ದರೆ ಚಾಟಿ ಬೀಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುಡುಗಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ನ 100ನೇ ರಾಜ್ಯ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಇದುವರೆಗೆ ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಂಡಿದ್ದೇನೆ. ಅವರಿಗೆ ಒಂದು ಮುಖ ಮಾತ್ರ ತೋರಿಸಿದ್ದೇನೆ. ಆದರೆ, ಕೆಲವರು ಸರ್ಕಾರ ಕೊಟ್ಟ ಹಣದ ಸದ್ಬಳಕೆ ಮಾಡಿಕೊಂಡಿಲ್ಲ. ಇದು ಸರಿಯಲ್ಲ’ ಎಂದು ಎಚ್ಚರಿಸಿದರು.

‘ನನಗೆ ಸರ್ಕಾರವನ್ನು ಹೇಗೆ ಉಳಿಸಿ
ಕೊಳ್ಳಬೇಕು ಎಂದು ಗೊತ್ತಿದೆ. ನಾನು ಪ್ರವಾಹದ ನಡುವೆ ಈಜುತ್ತಿದ್ದೇನೆ. ಅದೇನೇ ಇದ್ದರೂ 5 ವರ್ಷ ಸರ್ಕಾರ
ಉಳಿಸಿಕೊಳ್ಳುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ. ಆದರೆ ಬಹುಮತಕ್ಕೆ 113 ಸ್ಥಾನ ಬೇಕು’ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದರು.

By R

You missed