ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನೆಡಸಲಾಗುತ್ತದೆ. ಯಾವ ಪಕ್ಷದಿಂದ ಅಭ್ಯರ್ಥಿ ಹಾಕಬೇಕು ಎಂದು ಹಿರಿಯರು ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಎಸ್. ಮಧುಬಂಗಾರಪ್ಪ ಹೇಳಿದ್ದಾರೆ.

ಆಪರೇಷನ್ ಕಮಲಕ್ಕೆ ಅಮಿತ್​ ಷಾ ಸೂತ್ರಧಾರಿ. ಮೋದಿ ಹಣ ನೀಡುವವರು ಹಾಗೂ ಬಿಎಸ್​ವೈ ಪಾತ್ರಧಾರಿ ಎಂದ ಅವರು, ಆಪರೇಷನ್ ಫ್ಲಾಪ್​ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಡಾಕ್ಟರೇಟ್ ಕೂಡಬೇಕು. ಇನ್ನು ಮೂರನೇ ಆಪರೇಷನ್ ಕಮಲದಲ್ಲಿಯೂ ಯಡಿಯೂರಪ್ಪ ಫ್ಲಾಪ್ ಆಗುತ್ತಾರೆ. ಆಪರೇಷನ್ ಫ್ಲಾಪ್​ ಎನ್ನುವ ಸರ್ಟಿಫಿಕೇಟ್ ಅನ್ನು ಕೂಡ ಅವರಿಗೆ ಕೂಡಲಿ ಎಂದು ಕಿಡಿಕಾರಿದರು.

ಆಪರೇಷನ್ ಕಮಲಕ್ಕೆ ಯಾವುದೇ ಡಿಗ್ರಿ ಸಿಗುವುದಿಲ್ಲ. ಪದೇ ಪದೆ ಆಪರೇಷನ್ ಕಮಲ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಸಿಎಂಗೆ ಎಷ್ಟು ಗೌರವ ಇರುತ್ತದೆಯೋ ಅಷ್ಟೇ ಗೌರವ ವಿರೋಧ ಪಕ್ಷದ ನಾಯಕರಿಗೆ ಇರುತ್ತದೆ. ಕುಮಾರಸ್ವಾಮಿಯವರು ಈಗಾಗಲೇ ರಾಜ್ಯದಲ್ಲಿ ಸಾಲಮನ್ನಾ ಮಾಡಿದ್ದಾರೆ. ಗುರುಗ್ರಾಮದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ರಾಜ್ಯದ ಶಾಸಕರು ಮೋದಿ ಬಳಿ ರೈತರ ಸಾಲಮನ್ನಾ ಮಾಡಿ ಎಂದು ಕೇಳಿಕೊಳ್ಳಲಿ ಎಂದು ಹೇಳಿದರು.

By R

You missed