ಉತ್ತರ ಕರ್ನಾಟಕದ ಜನರ ಅಲೆ
ದಾಟ ತಪ್ಪಿಸಲು ಕೆಲವು ಕಚೇರಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡುತ್ತೇವೆ’ ಎಂದರು.

‘ಅಹವಾಲು ಹೇಳಿಕೊಳ್ಳಲು ಬೆಂಗ
ಳೂರಿಗೆ 600–700 ಕಿ.ಮೀ. ದೂರ
ದಿಂದ ಬರುತ್ತಾರೆ. ಜನತಾ ದರ್ಶನಕ್ಕೆ ಬರುವವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದವರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮಠಾಧೀಶರು ಹಾಗೂ ಜನಪ್ರತಿನಿಧಿಗಳ ಜತೆಗೆ 15 ದಿನಗಳ ಒಳಗೆ ಸಭೆ ಕರೆಯುತ್ತೇನೆ’ ಎಂದೂ ಅಭಯ ನೀಡಿದರು.

‘ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಲು ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದಕ್ಕೆ ಮರುಳಾಗಬೇಡಿ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. 13 ಜಿಲ್ಲೆಗಳ ಪ್ರವಾಸಕ್ಕೆ ಹೆಚ್ಚಿನ ಸಮಯ ಮೀಸಲು ಇಡುತ್ತೇನೆ. ಮುಂದಿನ ವಾರದಲ್ಲಿ ಪ್ರವಾಸ ಆರಂಭಿ
ಸುತ್ತೇನೆ’ ಎಂದು ಭರವಸೆ ನೀಡಿದರು.

‘ಬೆಳಗಾವಿಯನ್ನು ಎರಡನೇ
ರಾಜಧಾನಿಯನ್ನಾಗಿ ಮಾಡುತ್ತೇನೆ ಎಂದು 10 ವರ್ಷಗಳ ಹಿಂದೆ ಪ್ರಕಟಿಸಿದ್ದೆ. ಆ ಬಳಿಕ ಬಂದವರು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಎರಡನೇ ರಾಜಧಾನಿಯನ್ನಾಗಿ ಮಾಡುವ ಬಗ್ಗೆ ಮುಕ್ತ ಮನಸ್ಸು ಹೊಂದಿದ್ದೇನೆ’ ಎಂದರು.

‘ಹೈದರಾಬಾದ್‌–ಕರ್ನಾಟಕ ಅಭಿ
ವೃದ್ಧಿ ಮಂಡಳಿಗೆ ಕಾಂಗ್ರೆಸ್‌ ಸರ್ಕಾರ ₹4500 ಕೋಟಿ ನೀಡುವುದಾಗಿ ಪ್ರಕಟಿ
ಸಿತ್ತು. ₹2,500 ಕೋಟಿ ಬಿಡುಗಡೆ ಮಾಡಿತ್ತು. ಆದರೆ, ಖರ್ಚಾಗಿದ್ದು ₹2,200 ಕೋಟಿ ಮಾತ್ರ. ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳೇ ಇಲ್ಲ ಎಂದು ಮಂಡಳಿಯ ಆಯುಕ್ತರು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು. ಪ್ರಮುಖ ಇಲಾಖೆಗಳಿಗೆ ಅಧಿಕಾರಿಗಳೇ ಇಲ್ಲ. ಹೀಗಾದರೆ, ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

By R

You missed