ಬೆಂಗಳೂರು: ಮೈತ್ರಿ ಲೋಕಸಭಾ ಚುನಾವಣೆಗೂ ಮುಂದುವರಿಯುತ್ತದೆ. ರಾಮನಗರ ಕಡೆ ನಾನು ಹೋಗಲಿಲ್ಲ. ಶಿವಮೊಗ್ಗದಲ್ಲಿ ನನ್ನ ಸರ್ವ ಪ್ರಯತ್ನ ಮಾಡಿದ್ದೇನೆ. ನಮ್ಮ ವಿರುದ್ಧ ಇರುವವರು ರಾಮನಗರದಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕುರಿತು ಮಾತನಾಡಿದ ಅವರು, ಸರ್ಕಾರ ರಚನೆಯಾಗಿ ಐದು ತಿಂಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಹಿಂದಿನ ಸರ್ಕಾರದ ಯೋಜನೆಗಳ ಫಲವೂ ಈ ಫಲಿತಾಂಶದಲ್ಲಿ ಅಡಗಿದೆ. ಡಿಕೆಶಿ ಮತ್ತು ಸುರೇಶ್ ಅವರ ಪಾತ್ರವೂ ಇದೆ ಎಂದು ಹೇಳಿದರು.

ಎರಡು ಲೋಕಸಭಾ ಕ್ಷೇತ್ರ ಗೆದ್ದಿದ್ದೀವಿ ಅಂತ ಮೈ ಮರೆಯುವ ಪ್ರಶ್ನೆ ಇಲ್ಲ. ಮುಂದೆ ಬರುವ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ. ಸರ್ಕಾರದ ಯೋಜನೆಗಳಿಂದ ಗೆಲ್ಲುತ್ತೇವೆ. ನಮ್ಮ ಜವಾಬ್ದಾರಿ ನಿರ್ವಹಿಸಲು ಜನರು ಕೊಟ್ಟ ಟಾಸ್ಕ್‌ ಇದಾಗಿದೆ ಎಂದು ತಿಳಿಸಿದರು.

By R

You missed