ರಾಮನಗರ: ಮಾಗಡಿಯ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡ ಮಾತನಾಡುತ್ತಾ,
ಜೆಡಿಎಸ್ ರಾಜ್ಯದಲ್ಲಿ ಜಾತಿಯ ಸಮಾನತೆ ಕಾಪಾಡುತ್ತಿದೆ. ಹಾಗಾಗಿ ರಾಜ್ಯಕ್ಕೆ ಜೆಡಿಎಸ್ ಅವಶ್ಯಕತೆ ಇದೆ ಎಂದರು.

ಹಾಸನದಲ್ಲಿ ರಾಹುಲ್ ಗಾಂಧಿ, ಸಿದ್ಧರಾಮಯ್ಯ ಬಳಸಿದ ಭಾಷಣ ಅವರ ಮನಸ್ಸಿನ ದುರ್ಬಲತೆ ತೋರಿಸುತ್ತದೆ.
ಮುಂದೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲಎಂದು ಸವಾಲು ಹಾಕಿದರು. ರಾಹುಲ್ ಗಾಂಧಿಗೆ ರಾಜಕೀಯದ ಪೂರ್ಣ ಅರಿವಿಲ್ಲ. ಜೆಡಿಎಸ್ ಸಂಘ ಪರಿವಾರ ಅಂತಾರೆ ಎಂದು ಲೇವಡಿ ಮಾಡಿದರು. 

ಕುಮಾರ ಪರ್ವ ಕಾರ್ಯಕ್ರಮ ಕಾಂಗ್ರೆಸ್ ಗೆ ಸೋಲಿನ ಭೀತಿ ಹುಟ್ಟಿಸಿದೆ. ಹಾಗಾಗಿ ಅತಿರೇಕದ ಮಾತುಗಳನ್ನು ಆಡಿತ್ತಿದ್ದಾರೆ. ರಾಹುಲ್ ಗಾಂಧಿ ಅವರೇ ಕಾಂಗ್ರೆಸ್ ದೇಶದಲ್ಲಿ ಎಲ್ಲಿದೆ? ಹೇಳಿ ಕೊಟ್ಟವರ ಮಾತಿಗೆ ನೀವು ಬೆಲೆ ಕೊಡಬಾರದಿತ್ತು
ಬೆಂಬಲ ಕೊಡಿ ಎಂದು ಈ ಹಿಂದೆ ಕೇಳಿಕೊಂಡಿದ್ದಿರಿ. ಅದರ ಅರಿವು ಇದೆಯಾ ? ಪರಿಜ್ಞಾನ ಇದೆಯೇ
ಜಾತ್ಯತೀತ ವ್ಯವಸ್ಥೆ ಬಗ್ಗೆ ಮಾತನಾಡಲು ಯೋಗ್ಯತೆ ಇದೆಯೇ ಎಂದು ರಾಹುಲ್ ಗೆ ಪ್ರಶ್ನೆ ಮಾಡಿದರು.

ಸಿಎಂ ಸಿದ್ದರಾಮಯ್ಯನಿಗೆ ಕುಮಾರ ಸ್ವಾಮಿ ಎಲ್ಲಿ ಮುಖ್ಯಮಂತ್ರಿ ಆಗುತ್ತಾರೋ ಅಂತಾ ಭಯವಿದ್ದು, ಹಾಗಾಗಿ ಕಿಚ್ಚು ಇದೆ. ಸಿದ್ದರಾಮಯ್ಯ ನವರೇ ಜೆಡಿಎಸ್ ನಾಶ ಮಾಡುತ್ತೇನೆ ಅಂತೀರಾ, ಮುಂದೆ ನಿಮ್ಮ ಸಂಪೂರ್ಣ ನಾಶ ಅಗುತ್ತೆ ಎಂದು ನುಡಿದರು.

By R

You missed