ಬೆಂಗಳೂರು: ಮುಂಬರುವ ಮೇ.12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಜಾತ್ಯಾತೀತ ಜನತಾ ದಳ ‘ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ’ ತನ್ನ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆಗೊಳಿಸಿದೆ. ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು ಇಂತಿವೆ.

*ಜಾತ್ಯಾತೀತತೆ ನಮ್ಮ ಬದ್ದತೆ

*ಅಭಿವೃದ್ದಿ ನಮ್ಮ ಆದ್ಯತೆ

*ಗ್ರಾಮೀಣ ಪ್ರದೇಶದ ಯುವಕರಿಗೆ ಮಾಸಿಕ 7 ರಿಂದ 8 ಸಾವಿರ ರು ವೇತನ ನೀಡಿ ಸರಕಾರಿ ಜಮೀನುಗಳಲ್ಲಿ ಅರಣ್ಯ ಬೆಳೆಸುವ ಜವಾಬ್ದಾರಿ ನೀಡಿದರೆ ನಿರುದ್ಯೋಗ ನೀಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯೂ ಆಗಲಿದೆ.

*ರೈತರ ಸಾಲವನ್ನು ಒಂದು ಬಾರಿ ಮನ್ನಾ ಮಾಡಿ, ಅವರ ಭೂಮಿಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟರೆ ಸ್ವಾವಲಂಬಿಗಳಾಗುತ್ತಾರೆ. ಈ ಮೂಲಕ ಸರಕಾರಕ್ಕೆ ಸಾಲ ನೀಡುವ ಹಂತಕ್ಕೆ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ.

*ಸಾಲ ಮನ್ನಾ: ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ 53 ಸಾವಿರ ಕೋಟಿ ರು ಸಾಲ ಮನ್ನಾ

*ದುರ್ಬಲ ವರ್ಗದ ಶ್ರೇಯೋಭಿವೃದ್ದಿಗೆ ನಮ್ಮ ಪಣ

*ಬಡ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರು, ಕುಟುಂಬ ನಿರ್ವಹಣಾ ವೆಚ್ಚ

*65 ವರ್ಷಕ್ಕೂ ಮಿಗಿಲಾದ ಹಿರಿಯ ನಾಗರಿಕರಿಗೆ ಆರು ಸಾವಿರ ರು.ಗಳ ಮಾಸಾಶನ

*ಸೇವೆ ಪಾರದರ್ಶಕ, ಜನಸಂಪರ್ಕ ಸುಲಭ

*ನ್ಯಾಯಯುತ ಆಡಳಿತ ನಮ್ಮ ಭರವಸೆ

*ಮಾಗಡಿಯಲ್ಲಿ ಕೆಂಪೇಗೌಡ ವಿವಿ

*ಕುವೆಂಪು ಸಾಹಿತ್ಯ ಅಭಿಯಾನ

*ಭ್ರಷ್ಟಾಚಾರ ನಿರ್ಮೂಲನೆ: ಲೋಕಾಯುಕ್ತ ಬಲವರ್ಧನೆ, ಎಸಿಬಿ ನಿರ್ಮೂಲನೆ

*ಭೂ ವ್ಯವಹಾರ: ಕಬಳಿಕೆದಾರರ ವಿರುದ್ದ ಪ್ರಬಲ ಅಸ್ತ್ರ

*ಬೆಳೆ ವೈವಿಧ್ಯದ ಮೂಲಕ ರೈತರ ಬದುಕು ಹಸನು ಮಾಡುವುದು ನಮ್ಮ ಉದ್ದೇಶ

*ನವೀನ ಮಾದರಿ ಅಳವಡಿಕೆಗೆ ಪ್ರೋತ್ಸಾಹ

*ಇಸ್ರೇಲಿ ಮಾದರಿಯ ಕೃಷಿಗೆ ಪ್ರೋತ್ಸಾಹ

*ಸರಕಾರಿ ಶಾಲೆಗಳು ಮೇಲ್ದರ್ಜೆಗೆ: ಡೊನೇಷನ್ ಹಾವಳಿಗೆ ಕೊನೆ ಹಾಡಲಾಗುವುದು

*8ನೇ ತರಗತಿಯಿಂದ ಕೌಶಲ್ಯ ಅಭಿವೃದ್ದಿಗೆ ಒತ್ತು

*ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು

*ಬಯಲು ಸೀಮೆಗೆ 60 ಟಿಎಂಸಿ ನೀರು

*ಜಿಲ್ಲೆಗಳಲ್ಲಿ ನಡೆಯಲಿದೆ ಕೈಗಾರಿಕಾ ಕ್ರಾಂತಿ: ವಿದೇಶಿ ಉತ್ಪನ್ನಗಳಿಗೆ ಕರ್ನಾಟಕ ಹೊಡೆಯಲಿದೆ ಸೆಡ್ಡು

*ವಿದ್ಯುತ್- ಸ್ವಾವಲಂಬಿಯಾಗಲಿದೆ ಕರ್ನಾಟಕ, ಸಮರ್ಪಕ ವಿದ್ಯುತ್ ಉತ್ಪಾದನೆಗೆ ಹಲವು ಕ್ರಮ.

*ಕರುನಾಡು ಆಗಲಿದೆ ಪ್ರವಾಸಿಗರ ಹೆಬ್ಬಾಗಿಲು

*ಪ್ರತಿಯೊಬ್ಬರಿಗೂ ಸ್ವಂತದ್ದೊಂದು ಸೂರು ಕಲ್ಪಿಸಲು ನಾವು ಬದ್ದ

*ನಗರಾಭಿವೃದ್ದಿ: ಸಮಗ್ರ ಅಭಿವೃದ್ದಿ ನಮ್ಮ ಕಲ್ಪನೆ

*ವಿಶ್ವದರ್ಜೆಗೆ ಬೆಂಗಳೂರು

*ಅಲ್ಪಸಂಖ್ಯಾತರ ಅಭಿವೃದ್ದಿ

*ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಕ್ಷೇಮಾಭಿವೃದ್ದಿ

*ಮಹಿಳಾ ಕ್ಷೇಮಾಭಿವೃದ್ದಿ: ಮಹಿಳೆ ಮೂಲಕ ಕುಟುಂಬಕ್ಕೆ ಆಸರೆ

*ಪರಿಸರ ಸಂರಕ್ಷಣೆ

*ಹಿರಿಯ ಚೇತನಗಳಿಗೆ ಅಭಯಾಶ್ರಮ

*ರೈತ ಪ್ರಣಾಳಿಕೆ: ಸಾಲಮುಕ್ತ-ಅನ್ನದಾತ

*ವಿಶೇಷ ಕೃಷಿ ವಲಯ

*ಹೈನುಗಾರಿಕೆ.

By R

You missed