Welcome to Janata Dal (Secular) Official Website
Welcome to Janata Dal (Secular) Official Website
ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಬೆಂಗಳೂರು: ಅಂಗವಿಕಲರು, ವೃದ್ಧರು, ಮಹಿಳೆಯರು, ಮಕ್ಕಳು, ಅಂಧರು, ಬಾಣಂತಿಯರು, ಮಗಳಿಗೆ ಅಳಿಯ ದಿನಾ ಹೊಡೆಯುತ್ತಾನೆ ಎಂದು ಅಲವತ್ತುಕೊಂಡ ಮಾವ, ಸರದಿಯಲ್ಲಿ ನಿಂತ ವಿಧವೆಯರು, ರೋಗಿಗಳು… ಹೀಗೆ ನೂರಾರು ದುಃಖಿತರ ಕಣ್ಣೀರ ಕಥೆಗಳಿಗೆ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರ ನೂರು ದಿನ ಪೂರೈಸಿದ ಬೆನ್ನಲ್ಲೇ ಶ್ರಾವಣ ಶನಿವಾರ ನಡೆಸಿದ ಅಧಿಕೃತ ಜನತಾ ದರ್ಶನ ಅಕ್ಷರಶಃ ಕರಳು ಕಿತ್ತು ಬರುವಂತಹ ನೋವುಗಳ ಮಹಾಪೂರದಲ್ಲಿ ಮಿಂದು ಹೋಯಿತು.

ಮಧ್ಯಾಹ್ನ 12.10ಕ್ಕೆ ಆರಂಭವಾದ ದರ್ಶನವನ್ನು ರಾತ್ರಿ 10 ಗಂಟೆಯವರೆಗೂ ನಡೆಸಿ, ದೂರು ದುಮ್ಮಾನಗಳಿಗೆ ಕಿವಿಯಾದರು. ಮಧ್ಯಾಹ್ನ ಒಂದು ಸ್ಯಾಂಡ್‌ವಿಚ್‌ ಸೇವಿಸಿದ್ದನ್ನು ಬಿಟ್ಟರೆ ಕೂತಲ್ಲಿಂದ ಕದಲದೆ ಎಲ್ಲರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.

ಹೆರಿಗೆ ಸಮಯದಲ್ಲಿ ಆಸ್ಪತ್ರೆ ಬಿಲ್‌ ಅನ್ನು ಬೇಕಾಬಿಟ್ಟಿ ಏರಿಸಿದ್ದ
ರಿಂದ ಕಂಗಾಲಾಗಿ ಹಸುಗೂಸನ್ನು ಎದೆಗವುಚಿಕೊಂಡು ಬಂದಿದ್ದ ಶಿರಾದ ನಾಗಮಣಿಗೆ ಸ್ಥಳದಲ್ಲೇ
₹ 2 ಲಕ್ಷದ ಚೆಕ್‌ ಕೊಟ್ಟ ಅವರು, ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ 11 ವರ್ಷದ ಲೋಹಿತ್‌ನ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದರಲ್ಲದೇ, ಸ್ಥಳದಲ್ಲೇ ₹ 10 ಸಾವಿರದ ಚೆಕ್‌ ನೀಡಿದರು. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಚಿಕ್ಕಬಳ್ಳಾಪುರದ ನಾಗಮಣಿಯವರ ಇಂಜೆಕ್ಷನ್‌ ಖರ್ಚು ಭರಿಸುವ ವ್ಯವಸ್ಥೆ ಮಾಡಿದರು.

ಜಗಳೂರಿನ ಅಂಗವಿಕಲರೊಬ್ಬರನ್ನು, ‘ಏನಪ್ಪಾ ನೀನು ಈ ಹಿಂದೆ ಜನತಾ ದರ್ಶನಕ್ಕೆ ಬಂದಿದ್ದೆಯಲ್ಲವಾ, ಮತ್ತೇಕೆ ಬಂದೆ, ಯಾಕೆ ಕೆಲಸ ಆಗಿಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ಆತ, ‘ಇಲ್ಲಾ ಸ್ವಾಮಿ’ ಎಂದಾಗ ಸಂಬಂಧಿಸಿದ ಅಧಿಕಾರಿಗಳಿಗೆ ಫೋನಾಯಿಸಿ, ‘ಒಮ್ಮೆ ಜನತಾ ದರ್ಶನಕ್ಕೆ ಬಂದವರು ಯಾರೂ ಮತ್ತೆ ಬರುವಂತಾಗಬಾರದು. ಇದು ಎಲ್ಲಾ ಇಲಾಖೆಗಳಿಗೂ ಅನ್ವಯವಾಗುತ್ತದೆ’ ಎಂದು ಖಡಕ್‌ ಆದೇಶ ನೀಡಿದರು.

ಹಾವೇರಿಯ ತರುಣಿ ಸಂಜನಾ ಗೋಳೋ ಎಂದು ಅಳುತ್ತಲೇ, ‘ನಾನು ಸಿವಿಲ್‌ ಎಂಜಿನಿಯರಿಂಗ್‌ ಪದವೀಧರೆ. ನಿರುದ್ಯೋಗಿ, ಸೋಮವಾರದೊಳಗೆ ನನಗೆ ನೀವು ಕೆಲಸ ಕೊಡಿಸಲೇಬೇಕು’ ಎಂದು ರಚ್ಚೆ ಹಿಡಿದಾಗ, ‘ಯಾಕೊ ಮಗಾ (ಸಂಜನಾ), ತಲೆ ಕೆಡಿಸಿಕೊಳ್ಳಬೇಡ. ಇಲ್ಲೇ ಕೂತ್ಕೊ. ನಿನಗೆ ಸೋಮವಾರದೊಳಗೆ ಕೆಲಸ ಕೊಡಿಸುವ ಜವಾಬ್ದಾರಿ ನಂದು’ ಎಂದು ಕೆಲಸ ಕೊಡಿಸುವ ವ್ಯವಸ್ಥೆ ಮಾಡಿಸಿದರು.

‘ಕೈ ಸಾಲ ಮಾಡಿದ್ದೀನಿ. ಆದರೆ, ಅಸಲಿಗಿಂತಲೂ ಹೆಚ್ಚಾಗಿ ಲಕ್ಷಗಟ್ಟಲೆ ಬಡ್ಡಿ ತೀರಿಸಿದ್ದೀನಿ’ ಎಂದು ಕನಕಪುರದ ಮಹಿಳೆಯೊಬ್ಬರು ಕಣ್ಣೀರಿಟ್ಟಾಗ ಜಿಲ್ಲಾಧಿಕಾರಿಗೆ ಫೋನಾಯಿಸಿ, ‘ಸಂತ್ರಸ್ತೆ ನಿಮ್ಮ ಬಳಿ ಬರುತ್ತಾರೆ. ಅವರಿಂದ ಕಂಪ್ಲೇಂಟ್‌ ಬರೆಸಿಕೊಳ್ಳಿ, ಸಾಲ ಕೇಳುತ್ತಿರುವವರನ್ನು ಕೂಡಲೇ ಬಂಧಿಸಿ’ ಎಂದು ತಾಕೀತು ಮಾಡಿದರು.

ಬಂದವರ ಗೋಳಿನ ಗಾಥೆಗಳನ್ನೆಲ್ಲಾ ಶಾಂತವಾಗಿ ಕೇಳಿ ಅವರ ಎದೆಭಾರ ಇಳಿಸಿದ ಕುಮಾರಸ್ವಾಮಿ, ಆಗಿಂದ್ದಾಗ್ಗೆ ತಾವು ಕೂತ ಕುರ್ಚಿಯಲ್ಲಿ ಸರಿದಾಡುತ್ತಾ ಬೆನ್ನು ನೋವನ್ನು ನುಂಗಿಕೊಳ್ಳಲು ಒದ್ದಾಡುತ್ತಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ‘ಬೆಂಗಳೂರಿನಲ್ಲಿ ಇದ್ದಾಗಲೆಲ್ಲಾ ಪ್ರತಿ ಶನಿವಾರ ತಪ್ಪದೇ ಜನತಾ ದರ್ಶನ ನಡೆಸುತ್ತೇನೆ. ಯಾರಿಗೂ ನಿರಾಸೆ ಉಂಟು ಮಾಡುವುದಿಲ್ಲ. ಈ ತನಕ ಯಾರಿಗೂ ನಿರಾಸೆ ಉಂಟು ಮಾಡಿಯೂ ಇಲ್ಲ. ಅದು ರಾತ್ರಿ 11 ಗಂಟೆಯಾದರೂ ಸರಿ,
ಒಂದು ಗಂಟೆಯೇ ಆದರೂ ಸರಿ. ಎಲ್ಲರ ಅಹವಾಲು ಆಲಿಸಿಯೇ ತೀರುತ್ತೇನೆ’
ಎಂದರು.

Press Briefings

ಬೆಂಗಳೂರು, ಜೂ.3- ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಗ್ರಾಮ ವಾಸ್ತವ್ಯವನ್ನು ಜೂನ್ 21ರಂದು ಯಾದಗಿರಿ ಜಿಲ್ಲೆಯ...