ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ರೆಸಾರ್ಟ್‌ನಲ್ಲಿ ಕುಳಿತು ಮುಂದಿನ ಚುನಾವಣೆಗೆ ಹೇಗೆ ಹಣ ಕಳುಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಶನಿವಾರ ನಡೆದ ವಿಕಾಸಪರ್ವ ಕಾರ್ಯಕ್ರ
ಮದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

‘ರೆಸಾರ್ಟ್‌ಗೆ ಕೆಲವು ಮುಖಂಡರನ್ನು ಕರೆಸಿಕೊಂಡು ಆಮಿಷವೊಡ್ಡುವ ಕೆಲಸ ನಡೆಯುತ್ತಿದೆ. ಇಷ್ಟಾದರೂ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳದೆ, ತೋರ್ಪಡಿಕೆಗಾಗಿ ಅಲ್ಲೊಂದು ಇಲ್ಲೊಂದು ದಾಳಿ ನಡೆಸಿ ಒಂದೆರಡು ಲಕ್ಷ ವಶಪಡಿಸಿಕೊಂಡಿರುವುದಾಗಿ ಹೇಳಿಕೊ
ಳ್ಳುತ್ತಿದೆ’ ಎಂದು ದೂರಿದರು.

 

ಮುಖ್ಯಮಂತ್ರಿಯ ಹಿಂದೆ ಚುನಾ
ವಣಾ ಆಯೋಗದ ಒಂದು ತಂಡವನ್ನು ಬಿಟ್ಟರೆ ಅಕ್ರಮಗಳು ಬಯಲಾಗಲಿವೆ. ಕೋಟ್ಯಂತರ ರೂಪಾಯಿ ಜಪ್ತಿ ಮಾಡಬ
ಹುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರಿಗೆ ಸಾಮೂಹಿಕ ಊಟದ ವ್ಯವಸ್ಥೆ ಮಾಡಲು ಪೊಲೀಸ್‌ ವಾಹನಗಳಲ್ಲಿ ಅಡುಗೆ ಪದಾರ್ಥಗಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

‌‘ರಾಜ್ಯದಲ್ಲಿ ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, 20 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಎಂಇಎಸ್‌ ಜತೆ ಹೊಂದಾಣಿಕೆ ಇಲ್ಲ. ಎನ್‌ಸಿಪಿ ಜತೆ ಹೊಂದಾಣಿಕೆ ಮಾತುಕತೆ ನಡೆದಿತ್ತು. ಆದರೆ, ಅವರು ಎಂಇಎಸ್‌ ಜತೆ ಕೈಜೋಡಿಸಿರುವುದರಿಂದ ಚರ್ಚೆ ಸ್ಥಗಿತವಾಗಿದೆ. ಜೆಡಿಯು ಜತೆಗಿನ ಹೊಂದಾಣಿಕೆ ಬಗ್ಗೆ ಯಾರೂ ಚರ್ಚೆಗೆ ಬಂದಿಲ್ಲ. ಬಂದರೆ, ಚರ್ಚಿಸುತ್ತೇನೆ’ ಎಂದರು.