ಬೆಂಗಳೂರು: ಸಾರ್ವಜನಿಕರ ಸಮಸ್ಯೆ ಆಲಿಸುವ ಜನತಾದರ್ಶನ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬರುತ್ತಿರುವುದರಿಂದ ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿಯೇ ನಡೆಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಶನಿವಾರ ಜನತಾದರ್ಶನ ಸುಮಾರು 11 ಗಂಟೆಗಳ ಕಾಲ ನಡೆದಿತ್ತು. ರಾಜ್ಯದ ವಿವಿಧೆಡೆಯಿಂದ ಜನ ಬಂದಿದ್ದರು. ಜಿಲ್ಲಾ ಮಟ್ಟದಲ್ಲಿಯೇ ನಡೆಸಿದರೆ ಜನರು ಬೆಂಗಳೂರಿನ ತನಕ ಬರುವುದು ತಪು್ಪತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಪ್ರವಾಸ ಕೈಗೊಳ್ಳುತ್ತಿದ್ದು, ಅಲ್ಲೇ ಚಾಲನೆ ನೀಡಲು ಉದ್ದೇಶಿಸಲಾಗಿದೆ.

ಸುಗ್ಗಿಹಬ್ಬ: ಬೆಳಗಾವಿ ಜಿಲ್ಲೆಯ ಸುಗ್ಗಿಹಬ್ಬದಲ್ಲಿ ಸಿಎಂ ಪಾಲ್ಗೊಳ್ಳಲಿ ದ್ದಾರೆ. ರೈತ ಸ್ಪಂದನ ಕಾರ್ಯಕ್ರಮ ಸಹ ಆರಂಭಿಸಲಿದ್ದು, ಅಧಿಕಾರಿ ಗಳನ್ನು ಹೋಬಳಿ ಮಟ್ಟಕ್ಕೆ ಕರೆದೊಯ್ದು ಕೃಷಿ ಸುಧಾರಣೆಗಳ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶ.

ಸಮಸ್ಯೆಗೆ 24 ಗಂಟೇಲಿ ಪರಿಹಾರ: ಬಿಲ್ಡರ್​ಗೆ -ಠಿ;65 ಲಕ್ಷ ಕೊಟ್ಟು ವಂಚನೆಗೆ ಒಳಗಾಗಿದ್ದ ಮಹಿಳಾ ಸಾಫ್ಟ್​ವೇರ್ ಇಂಜಿನಿಯರ್​ಗೆ ಸಿಎಂ ನಿರ್ದೇಶನ ಮೇರೆಗೆ ವೈಟ್​ಫೀಲ್ಡ್ ಪೊಲೀಸರು 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ. ಪೂರ್ತಿ ಹಣ ಪಾವತಿಸಿದ ನಂತರವೂ ಫ್ಲಾ್ಯಟ್ ನೋಂದಣಿ ಮಾಡಿಕೊಡದ ಬಿಲ್ಡರ್, ಬೆದರಿಕೆ ಯೊಡ್ಡಿ ತೊಂದರೆ ಕೊಡುತ್ತಿದ್ದರು. ಇದರ ವಿರುದ್ಧ ಶನಿವಾರ ನಡೆದ ಜನತಾದರ್ಶನದಲ್ಲಿ ಸಿಎಂಗೆ ಪಶ್ಚಿಮ ಬಂಗಾಳ ಮೂಲದ ವಂದನಾ ದೂರು ನೀಡಿದ್ದರು. ಪೊಲೀಸ್ ಅಧಿಕಾರಿಗೆ ಸಿಎಂ ಕರೆ ಮಾಡಿ ಬಿಲ್ಡರ್ ವಿರುದ್ಧ ವಂಚನೆ ದೂರು ದಾಖಲಿಸುವಂತೆ ಸೂಚಿಸಿದ್ದರು. ಬೆಂ.ಪೂರ್ವ ವಿಭಾಗದ ಡಿಸಿಪಿ ಪ್ರಕರಣ ದಾಖಲಿಸಿಕೊಂಡು, ವಿಕೆಸಿ ಬಿಲ್ಡರ್ ಸಂಸ್ಥೆಯವರನ್ನು ಕರೆದು ಎಚ್ಚರಿಕೆ ನೀಡಿದ್ದರು. ಇದಾದ ಎರಡೇ ದಿನಕ್ಕೆ ವಂದನಾಗೆ ಬಿಲ್ಡರ್ ಫ್ಲಾ್ಯಟ್ ನೋಂದಾಯಿಸಿದ್ದಾರೆ.

By R

You missed