ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಓವೈಸಿ ಬೆಂಬಲ ನೀಡುತ್ತಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಸಮಾಜದಲ್ಲಿ ಶಾಂತಿ ಕದಡುವುದಕ್ಕೆ ನಮ್ಮ ಪಕ್ಷ ಎಂದಿಗೂ ಆಸ್ಪದ ಕೊಡಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡರ ಪರವಾಗಿ ಮೂರನೇ ದಿನವಾದ ಸೋಮವಾರ ಕೂಡ ಭರ್ಜರಿ ಚುನಾವಣಾ ಪ್ರಚಾರ ನಡೆಸಿ, ಮತಯಾಚನೆ ಮಾಡಿದ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಓವೈಸಿ ಪಕ್ಷದವರು ಚುನಾವಣೆಯಲ್ಲಿ ನಿಲ್ಲಲು ಅವರ ಅಭ್ಯರ್ಥಿಗಳಿಗೆ ಸ್ಥಾನ ಬೇಕು ಅಂತ ಕೇಳಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಬೇಕಿದ್ದರೂ ಪ್ರಚಾರ ಮಾಡಲು ಬರುತ್ತೆವೆ ಎಂದಿದ್ದಾರೆೆಂದು ಹೇಳಿದರು.

By R

You missed