ಭೇರ್ಯ: ರಾಜ್ಯದ ಮತದಾರರ ಚಿತ್ತ ಜೆಡಿಎಸ್‌ ನತ್ತ ನೆಟ್ಟಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು  ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಸಮೀಪದ ಚಿಕ್ಕಭೇರ್ಯದಲ್ಲಿ ಪಕ್ಷದ ಎಸ್ಟಿ ಕಾರ್ಯಕರ್ತರ ಸಭೆಯಲ್ಲಿ ಕೆಲ ಹಿರಿಯ ಕಾಂಗ್ರೆಸ್‌ ಮುಖಂಡರನ್ನು  ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ತಾಲೂಕಿನ ಮತದಾರರು ಪಕ್ಷಾತೀತವಾಗಿ ಜೆಡಿಎಸ್‌ನತ್ತ ಇದ್ದು, ಸಂಪೂರ್ಣ ಬೆಂಬಲಿಸಲಿದ್ದಾರೆ. ಕೆಲ ಕಾಂಗ್ರೆಸ್‌ ಮುಖಂಡರು  ಬೆಂಬಲಿಸುತ್ತಿರುವುದು ಸ್ವಾಗತಾರ್ಹ. ಅದರಲ್ಲೂ ಕುರುಬ ಸಮಾಜದ ಮಾಜಿ ಸಂಸದ  ಎಚ್‌.ವಿಶ್ವನಾಥ್‌ ಬೆಂಬಲಿಗರು ಹೆಚ್ಚಾಗಿ ಪಕ್ಷ ಸೇರುತ್ತಿದ್ದಾರೆ.

ಅವರನ್ನೂ ಪಕ್ಷದ ಕಾರ್ಯಕರ್ತರಂತೆ ನೋಡಿಕೊಳ್ಳುತ್ತೇನೆ ಎಂದರು. ಈ ಬಾರಿ  ತಾಲೂಕಿನಲ್ಲಿ ಜಾತ್ಯತೀತವಾಗಿ ಚುನಾವಣೆ ನಡೆಯಲಿದೆ. ಹೊಸಅಗ್ರಹಾರ ಹೋಬಳಿಯ ಮಾರಗೌಡನಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 9.30ಕ್ಕೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಾಗುವುದು.

ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ  ಸಂಖ್ಯೆಯಲ್ಲಿ ಭಾಗ ವಹಿಸುವಂತೆ ಮನವಿ ಮಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಅನೀಫ್ಗೌಡ, ಮುದುಗುಪ್ಪೆ ಮಂಜೇಗೌಡ, ಸದಸ್ಯರಾದ ಪಟೇಲ್‌  ದೇವರಾಜ್‌, ಚಿದಂಬರನಾಯಕ, ಚಲುವರಾಜ್‌, ಗ್ರಾಮದ ಮುಖಂಡರಾದ ರಾಜೇಗೌಡ, ಕೃಷ್ಣರಾಜು, ಸುಬ್ಬನಾಯಕ,

ಸುಬ್ಬಚಾರ್‌, ಶಿವಣ್ಣ ನಾಯಕ, ಗಾರೆ ಸಂಘದ ಉಪಾಧ್ಯಕ್ಷ ವಸಂತಕುಮಾರ್‌, ಬಾಬು, ಅಬ್ಟಾಸ್‌ ಷರೀಫ್, ಅನೀಲ್‌. ಗುರುರಾಜ್‌, ಕುಮಾರನಾಯಕ, ಬೆಟ್ಟಯ್ಯ, ಒಬಳಯ್ಯ, ಮೊಕಬಲ್‌ ಷರೀಫ್, ಜೆಡಿಸ್‌ ಮುಖಂಡರಾದ ಶಾಂತಕುಮಾರ್‌, ಗೋವಿಂದರಾಜ್‌, ಚಿಕ್ಕಭೇರ್ಯ ಗ್ರಾಮದ ಕಾಂಗ್ರೆಸ್‌ ಮುಖಂಡರಾದ ರಾಮೇಗೌಡ, ರಮೇಶ್‌ ಇದ್ದರು.

By R

You missed