ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮಾತನಾಡಿ, ”ಮುಂದಿನ 15 ದಿನಗಳಲ್ಲಿ ಜನರು ನಿರ್ಮಾಣ ಮಾಡಲು ಹೊರಟಿರುವ ಸರಕಾರ ಹಣ ಬಲ ಮತ್ತು ಜನಶಕ್ತಿ ನಡುವಿನ ಹೋರಾಟವಾಗಿದೆ. ಹಾಗಾಗಿ ಕೆಲವು ಪಕ್ಷದವರು ಹಣ ಬಲವನ್ನು ತೋರಿಸಲು ನಿಮ್ಮ ಮುಂದೆ ಬರುತ್ತಾರೆ. ಈ ಸಂದರ್ಭದಲ್ಲಿ ನೀವು ಹಣ ಬಲಕ್ಕೆ ತಲೆಬಾಗದೆ ನಿಮ್ಮ ಮತ ಶಕ್ತಿ ಪ್ರದರ್ಶಿಸಿ,” ಎಂದರು.

ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್‌ಚಂದ್ರ ಮಿಶ್ರ, ರಾಜ್ಯ ಉಸ್ತುವಾರಿ ಅಶೋಕ್‌ಕುಮಾರ್‌ ಸಿದ್ದಾರ್ಥ್‌, ರಾಜ್ಯಾಧ್ಯಕ್ಷ ಎನ್‌.ಮಹೇಶ್‌, ಜೆಡಿಎಸ್‌ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಸೇರಿದಂತೆ ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

———

ಮೈತ್ರಿ ಮುರಿಯಲು ಪಿತೂರಿ: ಕುಮಾರಸ್ವಾಮಿ ಆರೋಪ

ಜೆಡಿಎಸ್‌ ಮತ್ತು ಬಿಎಸ್‌ಪಿ ಮೈತ್ರಿಯನ್ನು ಮುರಿಯಲು ಕೇಂದ್ರದಲ್ಲಿ ಕೆಲವರು ಪಿತೂರಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು.

”ಕೇಂದ್ರದ ಮಟ್ಟದಲ್ಲಿ ಕೆಲವು ನಾಯಕರು ಕರ್ನಾಟಕದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುತ್ತದೆ. ಹಾಗಾಗಿ ನೀವು ಜೆಡಿಎಸ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ ಎಂದು ಇಲ್ಲಸಲ್ಲದ ಕಥೆ ಹೇಳಿ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರಿಗೆ ತಪ್ಪು ಸಂದೇಶ ನೀಡಿದ್ದಾರೆ. ತನ್ಮೂಲಕ ಅತ್ಯಂತ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು.

ದಲಿತರ ಮನೋಭಾವ ಬದಲಾಗಿದೆ: ”ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಿದ್ದಲಿಂಗಪುರದ ಬಳಿ ಪ್ರಚಾರ ನಡೆಸುವ ವೇಳೆ ಮರಿಸ್ವಾಮಿ ಎಂಬ ಮುಖಂಡನನ್ನು ಸಿದ್ದರಾಮಯ್ಯ ಪಕ್ಷಕ್ಕೆ ಆಹ್ವಾನಿಸುತ್ತಾರೆ. ಆ ಸಂದರ್ಭದಲ್ಲಿ ಆತ ನಾವು ನಿಮ್ಮೊಂದಿಗೆ ಬರುವುದಿಲ್ಲ. ನೀವು ಇಲ್ಲಿಂದ ಜಾಗ ಖಾಲಿ ಮಾಡಿ ನಿಮ್ಮ ಸರಕಾರದ ಆಡಳಿತದಲ್ಲಿ ದಲಿತರಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಮರಿಸ್ವಾಮಿ ಅವರ ಈ ಭಾವನೆ ಎಲ್ಲ ದಲಿತರಲ್ಲಿಯೂ ಮೂಡಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಅದಕ್ಕಾಗಿಯೆ ಬಿಎಸ್‌ಪಿ, ಜೆಡಿಎಸ್‌ ಸಹಕಾರದೊಂದಿಗೆ ಹೊಸ ಘಟ್‌ಬಂಧನ್‌ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಇದಕ್ಕೆ ಎರಡೂ ಸರಕಾರಗಳ ನಿಷ್ಠಾವಂತ ಕಾರ್ಯಕರ್ತರ ಸಹಕಾರ ಬೇಕಾಗಿದೆ,” ಎಂದರು.

ವರುಣದಲ್ಲಿ ಯಾವ ಒಪ್ಪಂದ?

”ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳುತ್ತಿರುವವರು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಅವರನ್ನು ಕಣಕ್ಕಿಳಿಯದಂತೆ ಮಾಡಿರುವ ಹಿಂದೆ ಯಾವ ಒಪ್ಪಂದ ಕೆಲಸ ಮಾಡಿದೆ ಎಂಬುದನ್ನು ಬಹಿರಂಗ ಪಡಿಸಬೇಕು,” ಎಂದು ಟೀಕಿಸಿದರು.

”ಬಿಜೆಪಿ, ಕಾಂಗ್ರೆಸ್‌ ಹೊರತಾದ ಪರ್ಯಾಯ ರಾಜಕಾರಣಕ್ಕಾಗಿ ಜೆಡಿಎಸ್‌ ಮತ್ತು ಬಿಎಸ್‌ಪಿ ನೇತೃತ್ವದ ಸರಕಾರದ ಅಸ್ತಿತ್ವಕ್ಕೆ ಬರಲು ಸಹಕರಿಸಿ,” ಎಂದು ಮನವಿ ಮಾಡಿದದರು.

By R

You missed