Welcome to Janata Dal (Secular) Official Website
Welcome to Janata Dal (Secular) Official Website
ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ರಾಮನಗರ: ಈ ಬಾರಿ ಉಪ ಚುನಾವಣೆಯಲ್ಲಿ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದು ಮುಂದಿನ ಲೋಕಸಭೆ ಚುನಾವಣೆಯ ದಿಕ್ಕನ್ನು ಬದಲಿಸಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು.

‘ಕಳೆದ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರದ ಜನತೆಯೇ ಚುನಾವಣೆ ನಡೆಸಿದ್ದಾರೆ. ಎರಡೂ ಕಡೆ ನನ್ನನ್ನು ಗೆಲ್ಲಿಸಿ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ರಾಜೀನಾಮೆ ನೀಡುವ ಸಂದರ್ಭ ಜನರು, ನಿಮ್ಮ ಕುಟುಂಬದವರೇ ನಿಲ್ಲಬೇಕು ಎಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ನಮ್ಮ ಕುಟುಂಬದವರನ್ನೇ ನಿಲ್ಲಿಸ
ಬೇಕಾಯಿತು. ಸಾಮಾನ್ಯ ಕಾರ್ಯ
ಕರ್ತರಿಗೆ ಟಿಕೆಟ್ ನೀಡಲು ನನಗೆ ಆತಂಕವೇನು ಇರಲಿಲ್ಲ’ ಎಂದು ಸಮರ್ಥಿಸಿಕೊಂಡರು.

ಆತಂಕ ಬೇಡ: ಎರಡು ದಶಕಗಳಿಂದ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಇತ್ತು. ಇಂತಹ ಸಂದರ್ಭದಲ್ಲಿ ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಆತಂಕ ಇರುವುದು ಸಹಜ. ಆದರೆ ಈ ಮೈತ್ರಿ ಕೇವಲ ರಾಮನಗರಕ್ಕೆ ಸೀಮಿತ ಅಲ್ಲ. ಎರಡೂ ಪಕ್ಷಗಳ ಸಹಮತದಿಂದ ಈ ಮೈತ್ರಿ ಸರ್ಕಾರ ರಚನೆಯಾಗಿದೆ. ರಾಷ್ಟ್ರಮಟ್ಟದಲ್ಲಿಯೂ ಕರ್ನಾಟಕದಿಂದ ಹೊಸ ರಾಜಕೀಯ ಬದಲಾವಣೆಗೆ ಪ್ರಯೋಗಗಳಿಗೆ ಕಾರಣವಾಗಲಿದೆ. ಇಬ್ಬರೂ ಜೊತೆಗೂಡಿ ದೂರದೃಷ್ಟಿಯ ರಾಜಕಾರಣ ಮಾಡೋಣ. ನಾನು ಈ ಹಿಂದೆಯೂ ಯಾವ ಪಕ್ಷದ ಕಾರ್ಯಕರ್ತರ ಮೇಲೆ ದ್ವೇಷದ ರಾಜಕಾರಣ ಮಾಡಿಲ್ಲ. ಹೀಗಾಗಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಆತಂಕಕ್ಕೆ ಒಳಗಾಗ
ಬಾರದು’ ಎಂದು ಮನವಿ ಮಾಡಿದರು.

ಐದು ವರ್ಷ ಕಾಲ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರ ಬೀಳಿಸುವ ಬಿಜೆಪಿಯ ವ್ಯರ್ಥ ಕಸರತ್ತಿಗೆ ಈ ಐದು ಕ್ಷೇತ್ರಗಳ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್‌ನ ಎಲ್ಲ ನಾಯಕರೂ ಬರಲಿದ್ದಾರೆ. ಪರಸ್ಪರ ಒಟ್ಟಾಗಿ ಐದೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.

ಬಳಿಕ ಮಿನಿ ವಿಧಾನಸೌಧದ ಮುಂಭಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರ
ಸ್ವಾಮಿ ‘ಎರಡು ದಶಕಗಳಿಂದ ಈ ಕ್ಷೇತ್ರದ ಜನತೆ ನಮ್ಮ ಕುಟುಂಬವನ್ನು ಆಶೀರ್ವದಿಸುತ್ತಾ ಬಂದಿದ್ದೀರಿ. ಕಳೆದ ಚುನಾವಣೆಯಲ್ಲಿ ಅನಿವಾರ್ಯವಾಗಿ ಇಲ್ಲಿಗೆ ರಾಜೀನಾಮೆ ನೀಡುವ ಪ್ರಸಂಗ ಬಂದೊದಗಿತು. ಆದರೆ ನನ್ನ ಕೊನೆ ಉಸಿರಿರುವವರೆಗೂ ರಾಮನಗರವನ್ನು ಮರೆಯುವುದಿಲ್ಲ’ ಎಂದರು.

‘ಅನಿತಾ ಅಭ್ಯರ್ಥಿಯಾದರೂ ನಿಜವಾಗಿ ನೀವೇ ಅಭ್ಯರ್ಥಿಗಳು. ನೀವೇ ಪಕ್ಷದ ಮುಖಂಡರಂತೆ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

Share with Your Friends and Family

Press Briefings

ಬೀದರ್‌ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಪಶು...

ಬಹ್ರೇನ್​ನ ಮನಾಮ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನಕ್ಕೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಇಂದು ಅಡಿಗಲ್ಲು ಹಾಕಿದ್ದಾರೆ....

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ನಿಟ್ಟಿನಲ್ಲಿ ಆಂಧ್ರಮುಖ್ಯಮಂತ್ರಿ ಎಲ್ಲ ಜಾತ್ಯತೀತ ಪಕ್ಷಗಳ ನಾಯಕರನ್ನೂ ಭೇಟಿ ಮಾಡಿ...

ಬೆಂಗಳೂರು: ಮೈತ್ರಿ ಲೋಕಸಭಾ ಚುನಾವಣೆಗೂ ಮುಂದುವರಿಯುತ್ತದೆ. ರಾಮನಗರ ಕಡೆ ನಾನು ಹೋಗಲಿಲ್ಲ. ಶಿವಮೊಗ್ಗದಲ್ಲಿ ನನ್ನ ಸರ್ವ ಪ್ರಯತ್ನ ಮಾಡಿದ್ದೇನೆ....