ಶಿರಸಿ: ‘ನಾನೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಭಾವಿಸಿ, ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಅವರಿಗೆ ಮತ ನೀಡಬೇಕು’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ವಿನಂತಿಸಿದರು.

ತಾಲ್ಲೂಕಿನ ಅಜ್ಜೀಬಳದಲ್ಲಿ ಪಕ್ಷದ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ನಾನು ಸಹ ಮೊದಲೆರಡು ಚುನಾವಣೆಗಳಲ್ಲಿ ಸೋತಿ
ದ್ದೇನೆ. ನಂತರ ಮತದಾರರು ನನ್ನನ್ನು ಗೆಲ್ಲಿಸಿದರು. ಶಶಿಭೂಷಣ ಹೆಗಡೆ ಮೂರು ಬಾರಿ ಸೋತಿದ್ದಾರೆ. ಅವರಿಗೆ ಇನ್ನು ಸೋಲಿನ ಶಿಕ್ಷೆ ಬೇಡ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಬೇಕು’ ಎಂದರು.

‘ಕಾಂಗ್ರೆಸ್ ಐದು ವರ್ಷ ಆಡಳಿತ ಮಾಡಿದರೂ, ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಿಲ್ಲ. ಜೆಡಿಎಸ್ ಆಯ್ಕೆ
ಯಾದರೆ, ಒಂದು ವರ್ಷದಲ್ಲಿ ಹಕ್ಕುಪತ್ರ ನೀಡಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು. ಪ್ರಮುಖರಾದ ಬಿ.ಆರ್.ನಾಯ್ಕ, ಆರ್.ಜಿ.ನಾಯ್ಕ, ತಿಮ್ಮಪ್ಪ ಮಡಿವಾಳ, ಶ್ರೀರಾಮ ಭಟ್ ಇದ್ದರು.

ಸೌಮ್ಯ ಸಮಾಜವಾದ: ಜೆಡಿಎಸ್‌ನ ಸೌಮ್ಯ ಸಮಾಜವಾದದ ಸಿದ್ಧಾಂತಕ್ಕೆ ಒಳಪಟ್ಟ ಕಾರ್ಯಕ್ರಮವು ಪಕ್ಷದ ಅಭ್ಯರ್ಥಿಗಳನ್ನು ವಿಜಯದತ್ತ ಕೊಂಡೊಯ್ಯಲಿದೆ. ಮಧು ಬಂಗಾರಪ್ಪ ಅವರು ಕ್ಷೇತ್ರದಲ್ಲಿ ಸಂಚಲನ‌‌ ಮೂಡಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳೆರಡು ಕೆಸರೆರೆಚಾಟದಲ್ಲಿ ಆರೋಪ ಮಾಡಿಕೊಳ್ಳುತ್ತ, ಎರಡನೇ ಸ್ಥಾನಕ್ಕೆ ಹೋರಾಟ ನಡೆಸಿವೆ. ದೇಶದ ಭವಿಷ್ಯದ ದೃಷ್ಟಿಯಿಂದ ಜನತೆಗೆ ಮೋಸ ಮಾಡಿ ಮತ ಪಡೆಯುವ ಹುನ್ನಾರ ಯಾವ ರಾಜಕೀಯ ಪಕ್ಷಗಳು ಮಾಡಬಾರದು. ಫಲಿತಾಂಶ ಏನೇ ಇದ್ದರೂ ಪ್ರಾಮಾಣಿಕ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಶಿಭೂಷಣ ಹೆಗಡೆ, ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುಭಾಸ ಮಂಡೂರು, ಸಯ್ಯದ್ ಮುಜೀಬ್, ದೀಪಕ್ ರೇವಣಕರ, ರೇವತಿ ವಡ್ಡರ್ ಇದ್ದರು.