ಬೆಳಗಾವಿ: ರಾಜ್ಯದಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ. ಆದ್ದರಿಂದ ಹಲವು ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ದುಂಬಾಲು ಬಿದ್ದು ತನ್ನ ಪಕ್ಷದಿಂದ ಕಣಕ್ಕಿಳಿಸಲು ಪ್ರಯತ್ನ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸೋಮವಾರ ಖಾನಾಪುರದಲ್ಲಿ ನಡೆದ ಕುಮಾರ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಗೆ ಅಭ್ಯರ್ಥಿಗಳೆ ಸಿಗುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸ್ವತಃ ತಾವೇ ಗುರುಮಿಟ್ಕಲ್ ಜೆಡಿಎಸ್ ಕ್ಷೇತ್ರದ ಅಭ್ಯರ್ಥಿಗೆ ಬಿಜೆಪಿ ಸೇರುವಂತೆ ಒತ್ತಡ ಹಾಕಿದ್ದಾರೆ ಎಂದು ಆಪಾದಿಸಿದರು.

ಬಿಜೆಪಿಯ 150 ಮಿಷನ್ ವಿಚಾರದಲ್ಲಿ ಮೊದಲ ಪಟ್ಟಿಯಲ್ಲಿ 12 ಜನ ವಲಸಿಗರಿಗೆ ಮಣೆ ಹಾಕಿರುವ ಬಿಜೆಪಿ ಭಿನ್ನಮತದ ಪಡೆಯುವ ದುರಾಲೋಚನೆ ಮಾಡುತ್ತಿದೆ. ಹಲವು ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗಾಳ ಹಾಕುತ್ತಿರುವ ಬಿಜೆಪಿ ಮೇಲ್ನೋಟಕ್ಕೆ ಮಿಷನ್ 150 ಎಂದು ಹೇಳುತ್ತಿದೆ ಅಷ್ಟೆ ಎಂದರು.
ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿ 10 ತಿಂಗಳು ಕಳೆದಿದೆ. ಆದರೇ ಇನ್ನೂ ಸಾಲ ಮನ್ನಾದ ಪ್ರಯೋಜನ ರೈತರಿಗೆ ಮುಟ್ಟಿಲ್ಲ. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರದಿದ್ದರೆ ದುಡ್ಡು ಕೊಡುವವರು ಯಾರು ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ರೈತ ಸಾಲ ಮನ್ನಾ ಮಾಡಲು ಎನ್ನುತ್ತಾರೆ. ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

By R

You missed