ಬಹುಮತ ಸಾಬೀತುಪಡಿಸಲು ಹರಸಾಹಸ ಪಡುತ್ತಿರುವ ಬಿಜೆಪಿ ಇದಕ್ಕಾಗಿ ಹಲವು ಶಾಸಕರನ್ನು ನೇರವಾಗಿಯೂ, ಇನ್ನೂ ಕೆಲವು ಶಾಸಕರನ್ನು ಆವರ ಆಪ್ತರು, ಕುಟುಂಬಸ್ಥರ ಮೂಲಕ ಸಂಪರ್ಕಿಸಿ ತನ್ನತ್ತ ಸೆಳೆಯಲು ಪ್ರಯತ್ನ ನಡೆಸುತ್ತಿದೆ. ವಿಶ್ವನಾಥ್ ಅವರನ್ನು ಸೆಳೆಯಲು ಅವರ ಪುತ್ರನ ಮೂಲಕ ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಈ ಕುರಿತು ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿರುವ ಪೂರ್ವಜ್, ಕುದುರೆ ವ್ಯಾಪಾರವೆಲ್ಲ ಎಚ್.ವಿಶ್ವನಾಥ್ ಅವರ ಬಳಿ ನಡೆಯುವುದಿಲ್ಲ. ನಾವು ಪಕ್ಷ ನಿಷ್ಠರು. ಅವಕಾಶವಾದಿಗಳಲ್ಲ. ನಮ್ಮ ತಂದೆಯನ್ನು ಸೆಳೆಯಲು ನನ್ನ ಮೂಲಕ ಪ್ರಯತ್ನ ನಡೆಸುತ್ತಿರುವವರು ಇದನ್ನೆಲ್ಲ ನಿಲ್ಲಿಸಿ. ಅಧಿಕಾರವಿಲ್ಲದಿದ್ದರೂ ಸರಿಯೇ, ಮತ ನೀಡಿದ ಜನರ ಪರ ಶಾಸಕನಾಗಿ ನಿಲ್ಲುವುದೇ ಸರಿ ಎಂದು ಅವರು ಬರೆದುಕೊಂಡಿದ್ದಾರೆ.