Welcome to Janata Dal (Secular) Official Website
Welcome to Janata Dal (Secular) Official Website
ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಬೆಂಗಳೂರು: 2019ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮತ್ತು ಎನ್​ಡಿಎ ಹೊರತಾಗಿ ‘ಪೀಪಲ್ಸ್ ಫ್ರಂಟ್’ ಹೆಸರಿನಲ್ಲಿ ಪ್ರಾದೇಶಿಕ ಪಕ್ಷಗಳು ಒಗ್ಗ್ಗೂಡಿ, ಸೆಣಸಲು ಮುಂದಾಗಿವೆ. ಶುಕ್ರವಾರ ಪದ್ಮನಾಭನಗರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಪೀಪಲ್ಸ್ ಫ್ರಂಟ್ ಬಲವರ್ಧನೆಗೆ ಎಲ್ಲ್ಲ ರೀತಿಯ ಶ್ರಮ ಹಾಕುವ ಸಂಕಲ್ಪ ಮಾಡಿದ್ದಾರೆ. ಮಧ್ಯಾಹ್ನ 12.25ಕ್ಕೆ ಆರಂಭವಾದ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಸಂತೋಷ್​ಕುಮಾರ್, ಸಂಸದ ವಿನೋದ್​ಕುಮಾರ್ ಸೇರಿ 11 ಪ್ರಮುಖರೊಂದಿಗೆ ನಟ ಪ್ರಕಾಶ್ ರೈ ಸಹ ಇದ್ದರು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ದೇವೇಗೌಡ, ‘ದೇಶದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಮುಷ್ಠಿಯಿಂದ ಪ್ರಾದೇಶಿಕ ಪಕ್ಷಗಳು ಹೊರಬಂದು ರಾಷ್ಟ್ರವನ್ನು ರಕ್ಷಿಸಬೇಕಿದೆ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಇರುವ ಸಮಾನ ಮನಸ್ಕರು ಒಂದಾಗಬೇಕು’ ಎಂದರು.

ಕೆ.ಚಂದ್ರಶೇಖರ್ ರಾವ್ ಮಾತನಾಡಿ, ‘ಜನಪರ, ಜನ ಸಾಮಾನ್ಯರ, ರೈತ ಪರವಾದ ತೃತೀಯ ರಂಗವನ್ನು ರಚಿಸುವುದು ನಮ್ಮ ಉದ್ದೇಶ. ಇದೊಂದು ಆಂದೋಲನದ ರೀತಿ’ ಎಂದು ಹೇಳಿದರು. ‘ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಸೇರಿ ತೃತೀಯ ರಂಗ ರಚನೆ ಮಾಡುವ ಕುರಿತು ಮಾತುಕತೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಪಕ್ಷ ನಮ್ಮ ಚಿಂತನೆ ಒಪ್ಪಿ ಬಳಗ ಸೇರಿದರೂ ಅವರಿಗೆ ಸ್ವಾಗತವಿದೆ. ಈ ಬಳಗಕ್ಕೆ ಎಲ್ಲರೂ ನಾಯಕರೇ’ ಎಂದರು.

ನಟ ಪ್ರಕಾಶ್ ರೈ ಪ್ರತಿಕ್ರಿಯೆ ನೀಡಿ, ನಾನು ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ. ಆದರೆ, ತೃತೀಯ ರಂಗ ರಚನೆಗೆ ಮುಂದಾಗಿರುವ ಸಂದರ್ಭದಲ್ಲಿ ಬೆಂಬಲವಾಗಿರುತ್ತೇನೆ ಎಂದು ತಿಳಿಸಿದರು.

Press Briefings