ಮೈಸೂರು, ಏ.13-ನಗರದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆಯಿಂದ ಮೂರು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಬೇಟೆಯನ್ನು ಕೈಗೊಳ್ಳಲಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ ಪ್ರಚಾರಕ್ಕೆ ತೆರಳಿದ ಗ್ರಾಮಗಳಿಗೆ ಎಚ್.ಡಿ.ಕುಮಾರಸ್ವಮಿ ಅವರು ಮತಯಾಚನೆ ಮಾಡಲಿದ್ದಾರೆ. ಕುಮಾರಸ್ವಾಮಿ ಅವರು ನಾಳೆ ಹಿಳಕಲ್, ಹೂಟಗಳ್ಳಿ, ಡಿ.ಸಾಲುಂಡಿ ಸೇರಿದಂತೆ 27 ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. 15 ರಂದು ಲಿಂಗಾಬೂದಿ, ಹುಬ್ದೂರು ಸೇರಿದಂತೆ 33 ಗ್ರಾಮಗಳಿಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಮತ ಪ್ರಚಾರ ನಡೆಸಲಿದ್ದಾರೆ. 16 ರಂದು ರತ್ತನಹಳ್ಳಿ, ಇಲವಾಲ, ಹುಯಿಲಾಳು, ಕಿಲಾರ ಸೇರಿದಂತೆ 38 ಗ್ರಾಮಗಳಿಗೆ ಕುಮಾರಸ್ವಾಮಿ ಅವರು ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ