ಮಂಡ್ಯ: ಚಲುವರಾಯಸ್ವಾಮಿ ಸೇರಿದಂತೆ ಪಕ್ಷಕ್ಕೆ ದ್ರೋಹ ಬಗೆದಿರುವ ಎಲ್ಲರಿಗೂ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಾಭಿ ಪ್ರಾಯವನ್ನು ಬಿಟ್ಟು ಒಗ್ಗೂಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡ ಕರೆ ನೀಡಿದರು.

ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಜೆಡಿಎಸ್ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ನಮ್ಮ ಪಕ್ಷದ ಸುರೇಶ್‌ಗೌಡರನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಬಲ ತುಂಬಬೇಕು ಎಂದರು. ಕಾಂಗ್ರೆಸ್, ಬಿಜೆಪಿ ರೈತರ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದರೂ ಅವರ ಜೊತೆ ನಿಲ್ಲುತ್ತಿಲ್ಲ. ನಾನು ಬದುಕಿರು ವವರೆಗೂ ರೈತರು ಕಣ್ಣೀರು ಹಾಕಲು ಬಿಡಲ್ಲ. ಅವರ ಪರ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

2018 ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ಸ್ಥಾನ ಸಿಗಲು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾರ್ಯ ಕರ್ತರು ಎದೆಗುಂದದೆ ವೀರರಂತೆ ಹೋರಾಟ ಮಾಡಬೇಕು. ಸಮಾಜದ ಎಲ್ಲ ವರ್ಗದ, ರೈತರ ಹಿತಕಾಯಲು ಜೆಡಿಎಸ್ ಅಧಿಕಾರಕ್ಕೆ ತರಬೇಕು ಎಂದರು.

By R

You missed