ಹಿರೇಕೆರೂರ:  ‘ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಸರ್ಕಾರ ಅಗತ್ಯವಿದೆ’ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.

ಇಲ್ಲಿ ಗುರುವಾರ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿ ಅವರು, ‘ಬಡವರ, ರೈತರ ಪರವಾಗಿರುವ ಜೆಡಿಎಸ್ ಅನ್ನು ಆಶೀರ್ವದಿಸಬೇಕು. ಆ ಮೂಲಕ ರಾಜ್ಯದ ಹಾಗೂ ರೈತರ ಹಿತ ಕಾಯುವ ಸರ್ಕಾರವನ್ನು ಅಧಿಕಾರಕ್ಕೆ ತರಲು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ‘ಕೇಂದ್ರದ ಬಿಜೆಪಿ
ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ತಮ್ಮ ವೈಯಕ್ತಿಕ ಕಚ್ಚಾಟದ
ಕಾರಣ ಮೆಕ್ಕೆ ಜೋಳ ಖರೀದಿ
ಕೇಂದ್ರ ಆರಂಭಿಸಿಲ್ಲ. ಇದರಿಂದ
ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮಧ್ಯವರ್ತಿಗಳ ಲಾಭ ಮಾಡುವಂತಾಗಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಟೀಕೆ ಮಾಡುತ್ತಿದ್ದು, ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಸಾಲಮನ್ನಾ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದು ಟೀಕಿಸಿದರು.

‘ಸಾಲಾ ಮನ್ನಾ ಮಾಡುವ ಎದೆಗಾರಿಕೆ ಕುಮಾರಸ್ವಾಮಿ ಅವರಿಗೆ ಬಿಟ್ಟರೆ ಬೇರೆಯವರಿಗೆ ಇಲ್ಲ. ಜನರಿಗೆ ಕುಮಾರಸ್ವಾಮಿ ಅವರ ದಕ್ಷ ಆಡಳಿತದ ಸರ್ಕಾರ ಬೇಕಿದೆ. ಹಾಗಾಗಿ ಜೆಡಿಎಸ್ ಬೆಂಬಲಿಸಿ, ಹಿರೇಕೆರೂರ ಕ್ಷೇತ್ರದ ಅಭ್ಗರ್ಥಿ ಸಿದ್ದಪ್ಪ ಗುಡದಪ್ಪನವರ ಅವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಗರ್ಥಿ ಸಿದ್ದಪ್ಪ ಗುಡದಪ್ಪನವರ, ಮುಖಂಡರಾದ ಜಿ.ವಿ.ಕುಲಕರ್ಣಿ, ಸಿದ್ದನಗೌಡ ಪಾಟೀಲ, ಮಹೇಶ ಕೊಟ್ಟೂರ,
ಚಂದ್ರು ಜೋಗಿಹಳ್ಳಿ, ಪ್ರವೀಣ ತಳವಾರ, ವಿ.ಸಿ.ಅಂಗಡಿ
ಇದ್ದರು.

By R

You missed