ಬಹ್ರೇನ್ನ ಮನಾಮ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಇಂದು ಅಡಿಗಲ್ಲು ಹಾಕಿದ್ದಾರೆ.
ಬಹ್ರೇನ್ನಲ್ಲಿರುವ ಕನ್ನಡ ಸಂಘ ಈ ಕಟ್ಟಡವನ್ನು ನಿರ್ಮಿಸುತ್ತಿದ್ದು, ಇದರ ಶಂಕುಸ್ಥಾಪನಾ ಕಾರ್ಯಕ್ಕಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ನ.11 ರಂದು ಅವರು ಪತ್ನಿ ಸಹಿತ ದುಬೈಗೆ ತೆರಳಿದ್ದರು.
ಮಂಗಳವಾರ ಪತ್ನಿ ಚೆನ್ನಮ್ಮ ಅವರೊಂದಿಗೆ ಶಂಕುಸ್ಥಾಪನಾ ಸಮಾರಂಭದಲ್ಲಿ ದೇವೇಗೌಡರು ಭಾಗವಹಿಸಿದ್ದರು. ಜತೆಗೆ, ಬಹ್ರೇನ್ನ ಭಾರತೀಯ ರಾಯಭಾರಿ ಅಲೋಕ್ ಸಿನ್ಹಾ, ಅನಿವಾಸಿ ಕನ್ನಡಿಗರ ಸಂಘದ ಉಪಾಧ್ಯಕ್ಷೆ ಅರತಿ ಕೃಷ್ಣ ಅವರೂ ಭಾಗವಹಿಸಿದ್ದರು.