ವಿಜಯಪುರ: ಜೆಡಿಎಸ್​ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ, ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂದೆಲ್ಲ ವ್ಯಂಗ್ಯವಾಡುತ್ತಿರುವ ಸಿಎಂ ಸಿದ್ದರಾಮಯ್ಯ ಮೂಲತಃ ಎಲ್ಲಿಂದ ಬಂದವರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು. ನಾಗಠಾಣ ಮತಕ್ಷೇತ್ರದ ವಿಕಾಸಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್​ನ ಬಹುತೇಕ ಮುಖಂಡರಿಗೆ ಜೆಡಿಎಸ್ ಮೂಲಾಧಾರ. ಇಲ್ಲಿಂದಲೇ ಹೋಗಿ ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡಿದ್ದಾರೆ. ಇವತ್ತು ಮಲ್ಲಿಕಾರ್ಜುನ ಖರ್ಗೆ ಅಂಥವರ ಸ್ಥಿತಿ ಏನಾಗಿದೆ ಎಂಬುದನ್ನು ಮೂಲ ಕಾಂಗ್ರೆಸಿಗರು ಅರಿತುಕೊಳ್ಳಲಿ ಎಂದರು. ಸಿದ್ದರಾಮಯ್ಯ ರಾಮನಗರಕ್ಕೆ ಬಂದು ಪ್ರಚಾರ ಮಾಡಿದ್ರೆ ನಾನು ಗಾಬರಿಯಾಗಲ್ಲ. ಮಾತೆತ್ತಿದರೆ ಅವರಪ್ಪನಾಣೆ ಎನ್ನುವ ಸಿಎಂ, ಬಾರ್​ನಲ್ಲಿ ಕುಳಿತು ಕುಡಿದವರಂತೆ ಮಾತಾಡುತ್ತಾರೆ ಎಂದು ಟೀಕಿಸಿದರು.

By R

You missed