ಬೆಂಗಳೂರು: ‘ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಮಿತ್ತ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬ್ಯಾನರ್, ಕಟೌಟ್, ಬಂಟಿಂಗ್ಸ್‌ ಕಟ್ಟುವುದು’ ಬೇಡ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಸಂದೇಶ ನೀಡಿರುವ ಅವರು, ‘ಅಂದು ಪಟಾಕಿಗಳನ್ನು ಸಿಡಿಸು
ವುದು ಆ ಮೂಲಕ ಪರಿಸರವನ್ನು ಹಾಳು ಮಾಡುವುದು ನನಗಿಷ್ಟ
ವಿಲ್ಲ. ಕಾರ್ಯಕರ್ತರು ಈ ರೀತಿ ಮಾಡ
ಬಾರದು’ ಎಂದು ಮನವಿ ಮಾಡಿದ್ದಾರೆ.

‘ನನ್ನ ಕಾರ್ಯಕರ್ತರು ಹೋರಾಟಕ್ಕೆ, ಛಲಕ್ಕೆ ಎಷ್ಟು ಹೆಸರುವಾಸಿಯೋ ಹಾಗೆಯೇ ಪರಿಸರ ಪ್ರೇಮದಲ್ಲೂ ಮೇಲ್ಪಂಕ್ತಿ ಹಾಕಿಕೊಡಲಿದ್ದಾರೆ. ನಾವೆಲ್ಲಾ ಪರಿಸರ ಸ್ನೇಹಿಗಳಾಗೋಣ. ಪರಿಸರ ಉಳಿಸೋಣ, ರಕ್ಷಿಸೋಣ’ ಎಂದು ಅವರು ತಿಳಿಸಿದ್ದಾರೆ.

By R

You missed