ಬೆಂಗಳೂರು: ಬ್ರಾಹ್ಮಣ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆ ಕೆಲ ತಿಂಗಳ ಹಿಂದೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿತ್ತು. ಆದರೆ, ಇದೀಗ ಆ ಬಗ್ಗೆ ಸುದ್ದಿಯಿಲ್ಲ. ಎಲ್ಲ ಸಮಾಜಕ್ಕೆ ಗೌರವ ಸಲ್ಲಿಸುವುದು ಮತ್ತು ಜನರ ಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ‘ಬೆಂಗಳೂರು ವಿಪ್ರರ ಬೃಹತ್ ಸಮಾವೇಶ-2018’ ಉದ್ಘಾಟಿಸಿ ಮಾತನಾಡಿದರು.

ನಗರದಲ್ಲಿರುವ ವಿಪ್ರ ಸಮಾಜದವರಲ್ಲೂ ಶೇ.70 ಜನ ಕಷ್ಟದಲ್ಲಿದ್ದು, ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಕೇಳುವುದು ಸಮಾಜದ ಹಕ್ಕು. ವಿಪ್ರ ಸಮಾಜದ ಶಿಕ್ಷಕರೇ ನಮ್ಮನ್ನು ತಿದ್ದಿ ಬೆಳೆಸಿದ್ದಾರೆ. ನೂರಾರು ಉದ್ಯೋಗ ನೀಡಿದ ಸಮಾಜ ಇದಾಗಿದ್ದು, ಇದಕ್ಕೆ ಇನ್ಪೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಉದಾಹರಣೆ ಎಂದರು.

ತಾಯಿಯ ನೆನಪು: ದೇವಸ್ಥಾನದಲ್ಲಿರುವಾಗಲೇ ನನ್ನ ತಾಯಿ ಮೇಲೆ ಆಸಿಡ್ ಹಾಕಿದ್ದರು. ತಾಯಿ ಬದುಕುವುದೇ ಇಲ್ಲ ಎಂದು ವೈದ್ಯರು ಹೇಳುತ್ತಿದ್ದರು. ಅಂದು ಅಪ್ಪ ಹಾಕಿದ ಕಣ್ಣೀರು ಇನ್ನೂ ನೆನಪಿದೆ. ಕಂಚಿ ಶ್ರೀಗಳು ಹಣ್ಣೊಂದನ್ನು ಆಶೀರ್ವಾದ ರೂಪದಲ್ಲಿ ನೀಡಿ ನನ್ನ ತಾಯಿ ಯನ್ನು ಬದುಕಿಸಿದರು. ಭಗವಂತ ಮತ್ತು ಗುರುಗಳ ಆಶೀರ್ವಾದಿಂದ ನನ್ನ ತಾಯಿ ಪುನರ್ಜನ್ಮ ಪಡೆದರು ಎಂದು ನೆನಪಿಸಿಕೊಂಡರು.

ಅಧಿಕಾರಿಗಳಿಂದ ಸರ್ಕಾರ ನಡೆಯಲ್ಲ!: ಸ್ವತಂತ್ರ್ಯವಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಸಣ್ಣ ನಿರೀಕ್ಷೆಯೂ ಇದ್ದು, ಅಧಿಕಾರಕ್ಕೆ ಬಂದರೆ ಯಾವ ರೀತಿ ಆಡಳಿತ ನೀಡಬೇಕು ಎನ್ನುವ ಸ್ಪಷ್ಟ ಚಿತ್ರವಿದೆ

By R

You missed