ಬೆಂಗಳೂರು: ಭ್ರಷ್ಟರು, ಕಮಿಷನ್‌ ಏಜೆಂಟರು ಮತ್ತು ಲೂಟಿಕೋರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣೆ ನೀಡುತ್ತಿದ್ದಾರೆ ಎಂಬುದಕ್ಕೆ ಅಶೋಕ್‌ ಖೇಣಿ ಕಾಂಗ್ರೆಸ್‌ ಸೇರ್ಪಡೆಯೇ ಸ್ಪಷ್ಟ ನಿದರ್ಶನ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಭ್ರಷ್ಟರು ಮತ್ತು ಲೂಟಿಕೋರರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಗಲ ಮೇಲೆ ಅಶೋಕ್ ಖೇಣಿ ಕೈ ಇಟ್ಟುಕೊಂಡು ನಿಂತಿದ್ದಾರೆ. ಇವರಿಬ್ಬರು ಎಷ್ಟು ಆತ್ಮೀಯರು ಎಂಬುದನ್ನು ಅವರು (ಸಿದ್ದರಾಮಯ್ಯ) ಬಿಡುಗಡೆ ಮಾಡಿರುವ ಚಿತ್ರವೇ ಹೇಳುತ್ತದೆ ಎಂದರು.ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿನ ನೊಣದ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಬಿ.ಎಸ್‌.ಯಡಿಯೂರಪ್ಪ ಅಥವಾ ಬೇರೆಯವರ ಬಗ್ಗೆ ಮಾತನಾಡಲು ನೈತಿಕ ಅಧಿಕಾರವಿಲ್ಲ ಎಂದರು

 

 

source : Prajavani

By R

You missed