Welcome to Janata Dal (Secular) Official Website
Welcome to Janata Dal (Secular) Official Website
ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಮೀನುಗಾರಿಕಾ ಸಚಿವ ವೆಂಕಟ ರಾವ್ ನಾಡಗೌಡ ಗುರುವಾರ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಬ್ರೇಕ್ ವಾಟರ್ ಯೋಜನೆಯನ್ನು ಪರಿಶೀಲಿಸಿದರು. (ಬೈಂದೂರು ಚಿತ್ರ)

ಪ್ರಜಾವಾಣಿ ವಾರ್ತೆ

ಬೈಂದೂರು: ‘ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ಹಾಗೂ ಮೀನುಗಾರರಿಗೆ ನೆರವಾಗುವ ಉದ್ದೇಶ
ದಿಂದ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಅವರು ಗುರುವಾರ ಭೇಟಿ ನೀಡಿ, ಇಲ್ಲಿ ನಡೆಯುತ್ತಿರುವ ಬ್ರೇಕ್ ವಾಟರ್ ಕಾಮಗಾರಿ ಪರಿಶೀಲಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

‘ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ₹50 ಸಾವಿರ ಸಾಲ ನೀಡಲು ಇಲಾಖೆ ನಿರ್ಧರಿಸಿದ್ದು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಆದೇಶ ಹೊರಡಿಸಲಾಗುವುದು. ಕೇಂದ್ರ ಸರ್ಕಾರ ಸೀಮೆಎಣ್ಣೆ ಸರಬರಾಜು ಕಡಿಮೆ ಮಾಡಿರುವುದರಿಂದ ನಾಡ
ದೋಣಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು ವಿತರಿಸಲು ತೊಡಕಾಗಿದೆ. ಪರ್ಯಾಯ ವ್ಯವಸ್ಥೆ
ಯಾಗಿ ಜರ್ಮನ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ ಬೋಟ್‌ ಅನ್ನು ಮಲ್ಪೆಯಲ್ಲಿ ಪರೀಕ್ಷೆ ಮಾಡಲಾಗುತ್ತಿದ್ದು, ಇದು ಯಶಸ್ವಿಯಾದರೆ ಎಲ್ಲ ಮೀನುಗಾರರು ಇದನ್ನು ಅಳವಡಿಸಿಕೊಳ್ಳಬಹುದು. ರೈತರ ಸಾಲ ಮನ್ನಾ ಮಾಡಿದಂತೆ ಮೀನುಗಾರರ ಸಾಲ ಮನ್ನಾ ಮಾಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುರೇಂದ್ರ ಖಾರ್ವಿ, ನಾರಾಯಣ ಕೆ. ಗುಜ್ಜಾಡಿ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ಎಚ್.ಎಸ್.ವೀರಪ್ಪ ಗೌಡ, ಜಂಟಿ ನಿರ್ದೇಶಕ ಎಂ.ಎಲ್.ದೊಡ್ಡ
ಮನಿ, ಉಪನಿರ್ದೇಶಕ ಪಾರ್ಶ್ವನಾಥ, ಸಹಾಯಕ ನಿರ್ದೇಶಕಿ ಅಂಜನಾದೇವಿ, ಸಚಿವರ ಆಪ್ತ ಸಹಾಯಕ ವಿರೂಪಾಕ್ಷ, ಬಂದರು ಮತ್ತು ಒಳನಾಡು ಜಲ ಸಾರಿಗೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ, ಐಸ್‌ಪ್ಲಾಂಟ್ ಅಸೋಸಿ
ಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಬಂದರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಆರ್ಕಾಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ಇದ್ದರು.

ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಸ್ವಾಗತಿಸಿದರು. ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ರಮೇಶ ಕುಂದರ್ ನಿರೂಪಿಸಿದರು.

ಸಚಿವರನ್ನು ಮತ್ತು ಶಾಸಕರನ್ನು ನಾಡದೋಣಿ ಮೀನುಗಾರರ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

ಆದ್ಯತಾನುಸಾರ ರಸ್ತೆ ಅಭಿವೃದ್ಧಿ

‘ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪ್ರದೇಶವನ್ನು ಮೀನುಗಾರಿಕಾ ಇಲಾಖೆ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಮೀನುಗಾರಿಕಾ ರಸ್ತೆಗಳನ್ನು ಆದ್ಯತಾನುಸಾರ ಅಭಿವೃದ್ಧಿಪಡಿಸಲಾಗುವುದು. ಮೀನುಗಾರರಿಗೆ ಮನೆ ನಿರ್ಮಿಸಲು ಹೌಸಿಂಗ್ ಬೋರ್ಡ್ ಜತೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಫ್ಲೋಟಿಂಗ್ ಜೆಟ್ಟಿ ಅನುಷ್ಠಾನಕ್ಕೆ ಚಿಂತನೆ

‘ಜೆಟ್ಟಿ ನಿರ್ಮಾಣದ ತಾಂತ್ರಿಕತೆ ಬೆಳೆದಿದ್ದು, ಫ್ಲೋಟಿಂಗ್ ಜೆಟ್ಟಿ ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಗೋವಾ ರಾಜ್ಯದಲ್ಲಿ ಫ್ಲೋಟಿಂಗ್ ಜೆಟ್ಟಿ ನಿರ್ಮಿಸಲಾಗಿದ್ದು ಇದನ್ನು ಪರೀಕ್ಷಿಸಲು ಮತ್ತು ಅಧ್ಯಯನ ನಡೆಸಲು ಇಲಾಖೆಯ ಉನ್ನತ ಅಧಿಕಾರಿಗಳ ಮತ್ತು ತಂತ್ರಜ್ಞರ ತಂಡವನ್ನು ಗೋವಾಕ್ಕೆ ಕಳುಹಿಸಿಕೊಡಲಾಗುವುದು. ಫ್ಲೋಟಿಂಗ್ ಜೆಟ್ಟಿ ಯಶಸ್ವಿಯಾದರೆ ರಾಜ್ಯದ ವಿವಿಧ ಮೀನುಗಾರಿಕೆ ಬಂದರಿನಲ್ಲಿ ಫ್ಲೋಟಿಂಗ್ ಜೆಟ್ಟಿ ಅನುಷ್ಠಾನಗೊಳಿಸುವ ಪ್ರಯತ್ನ ನಡೆಸಲಾಗುವುದು’ ಎಂದು ಸಚಿವ ನಾಡಗೌಡ ಹೇಳಿದರು.

Share with Your Friends and Family

Press Briefings

ಬೆಂಗಳೂರು: 2018ರ ಜುಲೈ 10ರ ವರೆಗೆ ರೈತರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಮನ್ನಾ ಮಾಡಲು ಗುರುವಾರ ರಾಜ್ಯ ಸಚಿವ...