ಗುಳೇದಗುಡ್ಡ: ಪಟ್ಟಣದ ಅನ್ನಪೂರ್ಣ ಮಲ್ಲಪ್ಪ ಕರ್ಲಿ ಎಂಬ ಯುವತಿ ಕಾಲಿನ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನಲ್ಲಿ ಉಚಿತವಾಗಿ ಮಾಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಸಮೀಪದ ಕೋಟೆಕಲ್ಲ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದ ವೇಳೆ ಕುಮಾರಸ್ವಾಮಿ ಭೇಟಿ ಮಾಡಿದ ಯುವತಿ, ಅಪಘಾತದಲ್ಲಿ ಕಾಲಿಗೆ ಪೆಟ್ಟು ಬಿದ್ದು ಊನವಾಗಿದೆ. ಹಣಕಾಸಿನ ತೊಂದರೆ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡಳು. ಸಮಸ್ಯೆ ಆಲಿಸಿದ ಎಚ್​ಡಿಕೆ, ಮಾ.19ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿಗೆ ಬರಲು ಸೂಚಿಸಿ, ಬಸ್ ಚಾರ್ಜ್​ಗಾಗಿ 2 ಸಾವಿರ ರೂ. ನೀಡಿದರು.

By R

You missed