ಮಾನ್ವಿ (ರಾಯಚೂರು): ರಾಜ್ಯ ಸರಕಾರ, ವಾಸ್ತವಾಂಶ ತಿರುಚಿ ಸುಳ್ಳು ಮಾಹಿತಿಯುಳ್ಳ ಜಾಹೀರಾತುಗಳನ್ನೇ ನೀಡಿ ಜನರಿಗೆ ದಿಕ್ಕು ತಪ್ಪಿಸುತ್ತಿದೆ. ಇದು ಜಾಹೀರಾತು ಮತ್ತು ಶೋಕಿ ಸರಕಾರ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಇಲ್ಲಿನ ಟಿಎಪಿಸಿಎಂಎಸ್‌ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ವಿಕಾಸ ಪರ್ವ ಯಾತ್ರೆ’ ಉದ್ಘಾಟಿಸಿ ಅವರು ಮಾತನಾಡಿದರು. ”ಸಾರ್ವಜನಿಕರ ದುಡ್ಡು ಬಳಸಿ, ಸರಕಾರ ಪುಟಗಟ್ಟಲೇ ಜಾಹೀರಾತು ನೀಡಿ, ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ವಾಸ್ತವದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜ್ಯ ಸಂಚಾರ ನಡೆಸಿದ್ದಾರೆ. ಅವರು ಜನರ ಸಮಸ್ಯೆ ಆಲಿಸುವ ಬದಲಿಗೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಜನಸಮಾನ್ಯರಿಗೆ ಸ್ಪಂದಿಸುವ ಕೆಲಸ ಎರಡು ಪಕ್ಷ ಗಳಿಂದ ಆಗಿಲ್ಲ” ಎಂದು ದೂರಿದರು.

 

source:vijayakarnataka

By R

You missed