ನಾಗಮಂಗಲ: ಕಾಂಗ್ರೆಸ್ನ ಪಾಪದ ಕೊಡ ತುಂಬಿದೆ. ನಮಗೆ ನೀಡುತ್ತಿರುವ ನೋವಿನ ಫಲವಾಗಿ ಕಾಂಗ್ರೆಸ್ ಧೂಳೀಪಟ ಆಗುವುದು ಖಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಕುಮಾರಪರ್ವ ಸಮಾವೇಶದಲ್ಲಿ ಮಾತನಾಡಿ, ದೇವೇಗೌಡ ಕುಟುಂಬದವರಿಗೆ ಮತ ನೀಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ನಾವು ಮಾಡಿದ ಅಪರಾಧವೇನು ಎಂದು ಪ್ರಶ್ನಿಸಿದರು.
2004ರಲ್ಲಿ ಉಪ ಮಾಡುವಾಗ ಇದೇ ಜೆಡಿಎಸ್, ದೇವೇಗೌಡ ಮತ್ತು ಕುಮಾರಸ್ವಾಮಿ ಬೇಕಿತ್ತು. ಈಗ ಅದೇ ಜೆಡಿಎಸ್ ಮುಗಿಸುವ ಮಾತುಗಳನ್ನು ಸಿದ್ದರಾಮಯ್ಯ ಹೇಳುತ್ತಿರುವುದು ದುರಂಹಕಾರದ ಪರಮಾವಧಿ ಎಂದು ಟೀಕಿಸಿದರು. ಆಗಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಿವಾಸಕ್ಕೆ ಸಿದ್ದರಾಮಯ್ಯ ಅವರನ್ನು ಕರೆದೊಯ್ದು, ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವಂತೆ ಮನವಿ ಮಾಡಿದೆ. ಕಡೆಗೆ, ಉಪ ಮುಖ್ಯಮಂತ್ರಿ ಮಾಡಿದ್ದು ಅಪರಾಧವಾಯಿತೇ ಎಂದರು.