ರಾಮನಗರ: ಇಲ್ಲಿನ ಯಾರಬ್‌ನಗರ ದಲ್ಲಿ ಜೆಡಿಎಸ್ ಪ್ರಚಾರ ಸಭೆಯು ಭಾನುವಾರ ಸಂಜೆ ನಡೆಯಿತು.

ಉಪ ಚುನಾವಣೆಯಲ್ಲಿನ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮಾತನಾಡಿ, ‘ಈ ಹಿಂದೆ ಇದೇ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಕುಮಾರಸ್ವಾಮಿ ಶಾಸಕರಾಗಿ, ನಂತರ
ದಲ್ಲಿ ಮುಖ್ಯಮಂತ್ರಿಯೂ ಆಗಿದ್ದಾರೆ. ನನ್ನ ಮಾವ ದೇವೇಗೌಡರು ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿಯಾಗಿ, ನಂತರದಲ್ಲಿ ದೇಶದ ಪ್ರದಾನಿಯೂ ಆಗಿದ್ದಾರೆ. ಈ ಬಾರಿ ಜನತೆ ನನಗೆ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

‘ರಾಮನಗರದಲ್ಲಿ ಮತ್ತೆ ಜೆಡಿಎಸ್ ಬಾವುಟ ಹಾರಲಿರುವುದು ನಿಶ್ಚಿತ. ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವೂ ಸೇರಿದಂತೆ ಬಾಕಿ ಉಳಿದಿರುವ ಎಲ್ಲ ಯೋಜನೆ
ಗಳನ್ನೂ ಮುಖ್ಯಮಂತ್ರಿಗಳು ಪೂರ್ಣ
ಗೊಳಿಸಲಿದ್ದಾರೆ’ ಎಂದು ಭರವಸೆ ನೀಡಿದರು.

‘ಇಲ್ಲಿ ಆಗಿನಿಂದಲೂ ಹಿಂದು–ಮುಸಲ್ಮಾನರು ಅನ್ಯೋನತೆಯಿಂದ ಇದ್ದಾರೆ. ಈ ಬಾರಿಯೂ ಅಂತಹ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಕೋಮುವಾದಿ ಶಕ್ತಿಗಳಿಗೆ ಪಾಠ ಕಲಿಸಬೇಕು. ಮುಸ್ಲಿಮರು
ವದಂತಿಗಳಿಗೆ ಕಿವಿಗೊಡದೇ ಜೆಡಿಎಸ್ ಅನ್ನು ಬೆಂಬಲಿಸ ಬೇಕು’ ಎಂದು ಅವರು ಮನವಿ ‌ ಮಾಡಿದರು.