ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು, ರಾಮನಗರ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿಯವರು, ಮಾಗಡಿ ಶಾಸಕರಾದ ಶ್ರೀ ಎ.ಮಂಜುನಾಥ್ ರವರು ಇಂದು ಕೊರೋನಾ ತುರ್ತು ಸಭೆ ನಡೆಸಿದರು. ಈ ಸಂಧರ್ಭದಲ್ಲಿ DC ಶ್ರೀಮತಿ ಅರ್ಚನಾರವರು, SP ಶ್ರೀ ಅನೂಪ್ ಶೆಟ್ಟಿರವರು, CEO ಶ್ರೀ ಇಕ್ರಂರವರು, DHO ಶ್ರೀ ನಿರಂಜನ್ ರವರು, ADC ಶ್ರೀ ವಿಜಯ್ ಕುಮಾರ್, ತಹಸೀಲ್ಧಾರ್ ಟಿ.ಎನ್.ನರಸಿಂಹಮೂರ್ತಿಯವರು ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು. ಕೊರೋನಾ ತುರ್ತು ಸಂಧರ್ಭದಲ್ಲಿ ಜನತೆಗೆ ಅನಾನುಕೂಲವಾಗದಂತೆ ಯಾವ್ಯಾವ ರೀತಿ ಕ್ರಮಕೈಗೊಳ್ಳಲಾಗಿದೆ ಹಾಗೂ ಆರೋಗ್ಯ ಇಲಾಖೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಮಾಹಿತಿ ಪಡೆದರು.

By R

You missed