Welcome to Janata Dal (Secular) Official Website
Welcome to Janata Dal (Secular) Official Website
ರಾಜ್ಯದ ರೈತರಿಗೆ ಕೃಷಿ ಬಳಕೆಗಾಗಿ 24 ಗಂಟೆ 3 ಫೇಸ್ ವಿದ್ಯುತ್ ದೊರಕುವಂತೆ ಮಾಡುವುದು.
ಬಯಲು ಸೀಮೆ ಶಾಶ್ವತ ಕುಡಿಯುವ ನೀರು ವ್ಯವಸ್ಥೆ.
ಪ್ರತಿಯೊಂದು ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಮಾಡಲಾಗುವುದು. ಪ್ರತೀ ಶಾಲೆಗಳಲ್ಲೂ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗುವುದು,ಉಚಿತ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗುವುದು
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ.
ಖಾಸಗೀ ಶಾಲೆಗಳ ಡೊನೇಶನ್ ಹಾವಳಿ ತಪ್ಪಿಸಲು ಏಕರೂಪ ಶಾಲಾ ಶುಲ್ಕ ಕಾಯ್ದೆ ತರಲಾಗುವುದು.
ತಾಲೂಕು ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನಾಗಿ ಉನ್ನತೀಕರಿಸುವುದು.
ಗರ್ಭಿಣಿ ಮಹಿಳೆಯರಿಗೆ ಮಗು ಹುಟ್ಟುವ ಮೂರು ತಿಂಗಳು ಮೊದಲು ಮತ್ತು ಮಗು ಹುಟ್ಟಿದ ಮೂರು ತಿಂಗಳ ನಂತರ ತಿಂಗಳಿಗೆ 6000 ರೂಗಳಂತೆ ಒಟ್ಟು 36000 ರೂಗಳನ್ನು ನೀಡಲಾಗುವುದು.

ಬೆಂಗಳೂರು: ‘ಪ್ರಜಾ ತೀರ್ಪು’ ಬಂದ ಸರಿಸುಮಾರು ಒಂದು ತಿಂಗಳ ಬಳಿಕ ರಾಜ್ಯ ಸರ್ಕಾರ ಟೇಕಾಫ್‌ ಆಗಿದೆ. ವಿಧಾನಸಭೆ ಚುನಾವಣೆ ಕಾರಣಕ್ಕೆ ನಾಲ್ಕು ತಿಂಗಳಿಂದ ಕಳೆಗುಂದಿದ್ದ ವಿಧಾನಸೌಧ– ವಿಕಾಸಸೌಧ ಆ ಮೂಲಕ, ಮತ್ತೆ ಹಿಂದಿನ ವೈಭವಕ್ಕೆ ಮರಳಿದೆ.

ಅಧಿಕಾರ ಸೂತ್ರ ಹಿಡಿದಿರುವ ಜೆಡಿಎಸ್‌– ಕಾಂಗ್ರೆಸ್‌ ದೋಸ್ತಿ ಸಂಪುಟದ ಅರ್ಧದಷ್ಟು ಸಚಿವರು ತಮ್ಮ ಇಲಾಖೆಗಳ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದರು.

ಇದೇ ವೇಳೆ ಸಾರ್ವಜನಿಕರೂ ಸಚಿವರನ್ನು ಭೇಟಿಯಾಗಲು ‘ಆಡಳಿತ ಶಕ್ತಿ ಕೇಂದ್ರ’ಗಳತ್ತ ಎಡತಾಕುತ್ತಿದ್ದಾರೆ.

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಲ ಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ವಸತಿ ಸಚಿವ ಯು.ಟಿ. ಖಾದರ್, ಸಮಾಜ ಕಲ್ಯಾಣ ಪ್ರಿಯಾಂಕ್‌ ಖರ್ಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಕಾರ್ಮಿಕ ಸಚಿವ ವೆಂಕಟರಮಣಪ್ಪ ಅಧಿಕಾರಿಗಳ ಸಭೆ ನಡೆಸಿದರು.

ಹದಿನಾರು ವೈದ್ಯಕೀಯ ಕಾಲೇಜುಗಳ ಮತ್ತು ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯಲ್ಲಿ, ಪರಿಚಯ ಮಾಡಿಕೊಳ್ಳುವಂತೆ ಸಚಿವ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಯೊಬ್ಬರು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕ್ರೋಶಗೊಂಡ ಸಚಿವರು, ‘ಅಧಿಕಪ್ರಸಂಗ ಮಾಡಬೇಡಿ, ಎಷ್ಟು ಇದೆಯೋ ಅಷ್ಟು ಮಾತ್ರ ಹೇಳಿ’ ಎಂದರು. ಸಚಿವರ ಮಾತಿನಿಂದ ಬೆದರಿದ ಅಧಿಕಾರಿ, ಮರುಮಾತನಾಡದೆ ಕುಳಿತರು. ಇಡೀ ಸಭೆ ಕೆಲಕ್ಷಣ ಮೌನವಾಯಿತು.

ಮಳೆ, ಬಿರುಗಾಳಿಯಿಂದ ಉಂಟಾಗಿರುವ ಹಾನಿ ಕುರಿತು ಆರ್.ವಿ. ದೇಶಪಾಂಡೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಾರಿಗೆ ಅಧಿಕಾರಿಗಳ ಜೊತೆ ಡಿ.ಸಿ ತಮ್ಮಣ್ಣ ವಿಚಾರ ವಿನಿಮಯ ನಡೆಸಿದರು.

ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸಭೆ ನಡೆಸಿದರು.

Share with Your Friends and Family

Press Briefings

ಬೆಂಗಳೂರು: ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷ ಕೈಬಿಟ್ಟು, ಸೌಹಾರ್ದದ ಹಾದಿ ತುಳಿಯಲು ರಾಜ್ಯ...

ಬೆಂಗಳೂರು: ಬೈಯ್ಯಪ್ಪನಹಳ್ಳಿ- ಮೈಸೂರು ರೋಡ್‌ ಮಾರ್ಗದಲ್ಲಿ ಆರು ಬೋಗಿಗಳ ಮೆಟ್ರೊ ರೈಲು ಶುಕ್ರವಾರದಿಂದ ಸಂಚಾರ ಆರಂಭಿಸಲಿದೆ. ನೇರಳೆ ಮಾರ್ಗದ ಬೈಯ್ಯಪ್ಪನಹಳ್ಳಿ...

ಬೆಂಗಳೂರು: ಬೆಂಗಳೂರು ನಗರವನ್ನು ಮಾಲಿನ್ಯ ಮತ್ತು ವಾಹನ ದಟ್ಟಣೆಯ ನರಕದ ಕೂಪದಿಂದ ಪಾರು ಮಾಡಲು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಕೆಲವು...