ಶೇ 5ರಷ್ಟು ಹೆಚ್ಚುವರಿ ತೆರಿಗೆ: ಎಚ್‌ಡಿಕೆ ಚಿಂತನೆ

ಬೆಂಗಳೂರು: ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಅದರ ಉತ್ಪನ್ನಗಳಿಗೆ ಶೇ 4ರಿಂದ 5ರಷ್ಟು ತೆರಿಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಮತ್ತು ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದೇ ಉದ್ದೇಶಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಉತ್ಪನ್ನಗ
ಳನ್ನು ತಯಾರಿಸುವ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುವುದು ಎಂದರು.

‘ಇಂದು ಪರಿಸರ ನಾಶವಾಗುತ್ತಿರುವ ಬಗ್ಗೆ ವಿಶ್ವಮಟ್ಟದಲ್ಲಿ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಆದರೆ ಅದನ್ನು ಉಳಿಸುವ ಬಗ್ಗೆ ಯಾರೂ ಕಾರ್ಯೋನ್ಮುಖರಾಗುತ್ತಿಲ್ಲ. 1972ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಬೆಳಗಿನ ವೇಳೆ ಜಾಗಿಂಗ್‌ಗೆ ಬರಬೇಕಾದರೆ ಸ್ವೆಟರ್‌ ಧರಿಸಲೇಬೇಕಿತ್ತು. ಅಷ್ಟು ಚಳಿ ಇತ್ತು. ನಗರ ನಿರ್ಮಿಸಿದ ನಮ್ಮ ಹಿರಿಯರು ಕೆರೆಗಳನ್ನು ಕಟ್ಟಿದರು. ಇಂದಿನವರು ವ್ಯವಸ್ಥಿತವಾಗಿ ಅವುಗಳನ್ನು ನಾಶ ಮಾಡಿದ್ದಾರೆ. ಈಗ ನಗರದ ವಾತಾವರಣ ಬದಲಾಗಿದೆ. ಮೆಟ್ರೊ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಮರಗಳನ್ನು ಕಡಿದಿದ್ದೇವೆ. ಆದರೆ ಅದಕ್ಕೆ ಪರ್ಯಾಯವಾಗಿ ಗಿಡ ನೆಡುವ ಕೆಲಸ ಆಗಲೇ ಇಲ್ಲ. ಪರಿಸರ ಸಂರ
ಕ್ಷಣೆಯಲ್ಲಿ ನಾವು ಎಡವಿದ್ದೇವೆ. ಎಲ್ಲರೂ ತಮ್ಮ ಮನೆಗಳ ಕಾಂಪೌಂಡ್‌ನಲ್ಲಿ ಸಸಿ ನೆಟ್ಟು ಪೋಷಿಸಿದರೆ ಈ ದಿನ ಆಚರಣೆಗೆ ಸಾರ್ಥಕವಾಗುತ್ತದೆ’ ಎಂದರು.

‘ಅರಣ್ಯ ಬೆಳವಣಿಗೆ ಸಂಬಂಧಿಸಿ ಇಲಾಖೆಗಳು ಬರೀ ಅಂಕಿ ಅಂಶ ಕೊಡುತ್ತವೆ. ಒಂದು ವೇಳೆ ಆ ಪ್ರಕಾರ ಅರಣ್ಯ ಬೆಳೆದಿದ್ದರೆ ಈಗ ಮಳೆ ಪ್ರಮಾಣ, ಹವಾಮಾನದಲ್ಲಿ ತೀವ್ರ ವ್ಯತ್ಯಯ ಏಕೆ ಉಂಟಾಗುತ್ತದೆ’ ಎಂದು ಪ್ರಶ್ನಿಸಿದರು.

ಪರಿಸರ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಿದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ, ಪಶ್ಚಿಮಘಟ್ಟದಲ್ಲಿ ಅರಣ್ಯ ಅಭಿವೃದ್ಧಿಪಡಿಸಿದ ಪಮೇಲಾ ಮಲ್ಹೋತ್ರಾ, ಅಜಯ್‌ ಪಿ. ದೇಸಾಯಿ ಪರವಾಗಿ ಅವರ ಪುತ್ರ ಸಪ್ನಿಲ್‌ ದೇಸಾಯಿ, ಕರ್ನಾಟಕ ನವೀಕರಿಸ
ಬಹುದಾದ ಇಂಧನ ಅಭಿವೃದ್ಧಿ ನಿಗ
ಮದ ವ್ಯವಸ್ಥಾಪಕ ನಿರ್ದೇಶಕ ಡಿ.ನಾಗ
ರಾಜ್‌, ಮಲೆನಾಡು ಕರಾವಳಿ ವಿಭಾಗದ ಪರವಾಗಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ದಿನಕರ ಬಾಬು, ಬಯಲು ಶೌಚಮುಕ್ತ ಜಿಲ್ಲೆಯ ಮಾಡುವಲ್ಲಿ ಸಾಧನೆ ತೋರಿದ ಹಾವೇರಿ ಜಿಲ್ಲಾಧಿಕಾರಿ ವೆಂಕಟೇಶ್‌ ಅವರಿಗೆ ‘ಪರಿಸರ
ಪ್ರಶಸ್ತಿ’ನೀಡಿ ಗೌರವಿಸಲಾಯಿತು.