ಕೊಪ್ಪ: ರಾಜ್ಯದಲ್ಲಿ ರೈತರು ಸಮಸ್ಯೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ತೋರುತ್ತಿವೆ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕೊಪ್ಪದಲ್ಲಿ ಕುಮಾರಸ್ವಾಮಿ ಭಾಷಣ ಮಾಡಿದರು.

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ. ಸಹಕಾರಿ ಬ್ಯಾಂಕ್ ಸಾಲ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಈವರೆಗೆ ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡಿಲ್ಲ ಎಂದರು.

ಯಡಿಯೂರಪ್ಪ ಮೇ 17 ನೇ ತಾರೀಖು ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ ಅಂತಾರೆ. ಆ ನಿಟ್ಟಿನಲ್ಲಿ ಯಡಿಯೂರಪ್ಪ ದಿನಗಳನ್ನು ಲೆಕ್ಕ ಹಾಕ್ತಾ ಇದ್ದಾರೆ. ಆದ್ರೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲ್ಲ ಅಂತಾರೆ. ಇಂಥವರು ರೈತರ ಸಮಸ್ಯೆ ಯನ್ನು ಹೇಗೆ ಬಗೆಹರಿಸುತ್ತಾರೆ ಎಂದು ಎಚ್‌ಡಿಕೆ ದೂರಿದರು.