ಈ ಸರ್ಕಾರ ಐದು ವರ್ಷಗಳ ಕಾಲ ಮುಂದುವರಿಯಲಿದೆ. ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳೂ ಮುಂದುವರಿಯಲಿವೆ’ ಎಂದರು.

‘25-30 ವರ್ಷದಿಂದ ಮಂಡ್ಯ ನಗರದ ಸ್ಥಿತಿ ಬದಲಾಗಿಲ್ಲ. ಹೀಗಾಗಿ, ಅಲ್ಲಿನ ಅಭಿವೃದ್ಧಿಗೆ ₹ 50 ಕೋಟಿ ನೀಡಿದ್ದೇನೆ. ಹಾಸನ ಜಿಲ್ಲೆಯ ವರ್ತುಲ ರಸ್ತೆ ಹಳೆ ಯೋಜನೆ. ಅದಕ್ಕೆ ₹ 30 ಕೋಟಿ ಮೀಸಲಿಟ್ಟಿದ್ದೇನೆ’ ಎಂದೂ ವಿವರಣೆ ನೀಡಿದರು.

ರಾಜ್ಯದ ಎಲ್ಲ ಹಾಲು ಒಕ್ಕೂಟಗಳಲ್ಲಿ ಏಕರೂಪದ ದರವನ್ನು ಹಾಲು ಉತ್ಪಾದಕರಿಗೆ ನೀಡಬೇಕು ಎಂದು ಬಿಜೆಪಿಯ ಸಿ.ಟಿ. ರವಿ ಸಲಹೆ ಮಾಡಿದರು. ಬಿಜೆಪಿಯ ಮಾಧುಸ್ವಾಮಿ, ‘ಕೋಲಾರಕ್ಕೆ ಮೆಗಾ ಡೇರಿ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ‘ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇನೆ. ಸದ್ಯದಲ್ಲೇ ಹಾಲು ಉತ್ಪಾದಕರ ಒಕ್ಕೂಟಗಳ ಸಭೆ ಕರೆಯುತ್ತೇನೆ’ ಎಂದರು. ಎಚ್‌.ಕೆ. ಪಾಟೀಲ ಮಾತಿಗೆ ಉತ್ತರಿಸಿದ ಅವರು, ‘ಮಹದಾಯಿ ನ್ಯಾಯಮಂಡಳಿಯ ತೀರ್ಪು ಆಗಸ್ಟ್‌ನಲ್ಲಿ ಬರುವ ನಿರೀಕ್ಷೆ ಇದೆ. ತೀರ್ಪು ಬಂದ ತಕ್ಷಣ ಕೆಲಸ ಆರಂಭಿಸಲಾಗುವುದು’ ಎಂದರು.

‘ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ಸರ್ಕಾರದ ಗುರಿ’ ಎಂದು ಹೇಳಿದ ಅವರು ಬಜೆಟ್‌ಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದಾಗ, ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.

ಈ ಮಧ್ಯೆಯೇ, ಧನ ವಿನಿಯೋಗ ಮಸೂದೆ, ಕರ್ನಾಟಕ ಮೌಲ್ಯವರ್ಧಿತ ತಿದ್ದುಪಡಿ ಮಸೂದೆ, ಕರ್ನಾಟಕ ವಿದ್ಯುಚ್ಛಕ್ತಿ (ಬಳಕೆ ಅಥವಾ ಮಾರಾಟದ ಮೇಲೆ ತೆರಿಗೆ ನಿರ್ಧರಣೆ) ತಿದ್ದುಪಡಿ ಮಸೂದೆ ಮಂಡಿಸಲಾಯಿತು.

By R

You missed