Welcome to Janata Dal (Secular) Official Website
Welcome to Janata Dal (Secular) Official Website
ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಶಿವಮೊಗ್ಗ: ದೇಶದ ಇತಿಹಾಸದಲ್ಲೇ ವಿಶಿಷ್ಟ ಕಾರ್ಯವನ್ನು ಎಚ್.ಡಿ. ಕುಮಾರಸ್ವಾಮಿ ಮಾಡಿದ್ದಾರೆ. ತನ್ನ ಪಕ್ಷಕ್ಕೆ ಶಕ್ತಿ ಇಲ್ಲದಿದ್ದರೂ ರೈತರಿಗೆ ಶಕ್ತಿ ತುಂಬುವ ಕಾರ್ಯ ಹಾಗೂ ರೈತನ ಮಗನಾಗಿ ರೈತರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿರುವುದು ಮೆಚ್ಚುಗೆಗೆ ಅರ್ಹ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡತಿಳಿಸಿದ್ದಾರೆ.

ಮಲೆನಾಡು ಸೊಸೈಟಿ ರಜತ‌ ಮಹೋತ್ಸವ ಉದ್ಘಾಟಿಸಿದ ನಂತರ ಮಾಜಿ ಪ್ರಧಾನಿ ಮಾತನಾಡಿದರು.

ಹತ್ತು ಗಂಟೆಗಳ ಕಾಲ ಕೆಲಸ ಮಾಡುವ ಕಾರ್ಯ ಸಾಧಾರಣವಲ್ಲ. ವಾತ್ಸಲ್ಯದಿಂದ ಹೇಳುತ್ತಿಲ್ಲ, ಕುಮಾರಸ್ವಾಮಿ ನಡವಳಿಕೆ ಸೂಕ್ಷ್ಮವಾಗಿ ಗಮನಿಸಿ ಹೇಳುತ್ತಿದ್ದೇನೆ. ಕೇವಲ 37 ಶಾಸಕರನ್ನು ಇಟ್ಟುಕೊಂಡು ರೈತರ ಬೃಹತ್ ಸಾಲ ಮನ್ನ ಮಾಡುವ ಸ್ಥೈರ್ಯ ಮೆಚ್ಚಬೇಕು. ದೊಡ್ಡ ಮಟ್ಟದ ಸಾಲ‌ ಮನ್ನಾದಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗಬಾರದು ಎಂದರು.

ಕಾಂಗ್ರೆಸ್ ದೊಡ್ಡಪಕ್ಷ, ಅವರಲ್ಲೂ ಸಮಸ್ಯೆ ಇವೆ. ಆದರೆ, ರೈತರ ಸಮಸ್ಯೆಗೆ ಸ್ಪಂದಿಸಲು ಹೊರಟಾಗ ಕಾಂಗ್ರೆಸ್ ಸಹಕರಿಸಬೇಕು. ಈ ಜವಾಬ್ದಾರಿ ಮೈತ್ರಿ ಸರ್ಕಾರದ ಮೇಲಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಒಂದು ಸಮುದಾಯ ಈ ಸರ್ಕಾರ ಯಾವಾಗ ಬೀಳುತ್ತೆ ಎಂದು ಕಾಯ್ತಿದೆ. ಈ ಸರ್ಕಾರ ಬೀಳಿಸಲು ಮಹೂರ್ತ ಫಿಕ್ಸ್ ಮಾಡಿದವರು ಮತ್ತೊಮ್ಮೆ ನಿರಾಶರಾಗುತ್ತಾರೆ. ಮೈತ್ರಿ ಸರಕಾರದಲ್ಲಿ ಸಣ್ಣ ಪುಟ್ಟ ದೋಷಗಳಿವೆ. ಆದರೆ, ಸರಕಾರ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗುರು ಹಾಗೂ ದೈವ ಬಲ ನಮಗಿದೆ‌‌. ಹೀಗಾಗಿ, ಸರಕಾರ ಬೀಳುವ ಪ್ರಶ್ನೆಯೇ ಇಲ್ಲ. ಈ ಹಿಂದಿನ ಸರಕಾರಗಳು ಹಾಗೂ ಕುಮಾರಸ್ವಾಮಿ ಅವರ ಆಡಳಿತ ಗಮನಿಸಿದ್ದೀರಿ‌. ಹಲವು ಜನಪರ ಕಾರ್ಯಕ್ರಮಗಳನ್ನು ನೀಡಲಾಗಿದೆ‌. ನಿತ್ಯ 10 ಗಂಟೆ ನಿರಂತರ ಕೆಲಸ ಮಾಡುತ್ತಿದ್ದಾರೆ. ಇನ್ನು 15 ದಿನಗಳಲ್ಲಿ ಬಡವರು ಹಾಗೂ ರೈತರ ಅನುಕೂಲಕ್ಕಾಗಿ ಮೊಬೈಲ್ ಬ್ಯಾಂಕ್ ಯೋಜನೆ ನೀಡಲಿದ್ದಾರೆ ಎಂದು ದೇವೇಗೌಡ ತಿಳಿಸಿದರು.

Share with Your Friends and Family

Press Briefings

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನೆಡಸಲಾಗುತ್ತದೆ. ಯಾವ...

ಬಿಡದಿ: ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಮಹತ್ತರವಾದ ಶಾಶ್ವತ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ...

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿದ್ದ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಶವಂತಪುರದ ಎಪಿಎಂಸಿಯಲ್ಲಿ ಗುರುವಾರ ಚಾಲನೆ ನೀಡಿದರು....