Welcome to Janata Dal (Secular) Official Website
Welcome to Janata Dal (Secular) Official Website
ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಮೈಸೂರು: ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಚಾರ ಬಸ್‌ನಲ್ಲಿ ನಿಂತು ಕೈಬೀಸುತ್ತಿದ್ದಾಗ ಬೆಂಬಲಿಗರ ಮೈಮನಗಳಲ್ಲಿ ಪುಳಕ. ‘ಕುಮಾರಸ್ವಾಮಿಗೆ ಜಯವಾಗಲಿ’, ‘ಜೆಡಿಎಸ್‌ಗೆ ಜಯವಾಗಲಿ’ ಎಂಬ ಘೋಷಣೆ ಕೂಗಿ ನೆಚ್ಚಿನ ನಾಯಕನನ್ನು ಸ್ವಾಗತಿಸಿದರು.

ಇಡೀ ರಾಜ್ಯದ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶನಿವಾರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರು ಕೈಗೊಂಡ ಪ್ರಚಾರದ ವೇಳೆ ಕಂಡು ಬಂದ ದೃಶ್ಯವಿದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಾಗಲೇ ಒಂದು ಹಂತದ ಪ್ರಚಾರ ಕೊನೆಗೊಳಿಸಿದ್ದಾರೆ. ಇದೀಗ ಕುಮಾರಸ್ವಾಮಿ ಕೂಡಾ ಅಖಾಡಕ್ಕೆ ಇಳಿದು ತೊಡೆತಟ್ಟಿರುವ ಕಾರಣ ಚುನಾವಣೆಯ ಕಾವು ಹೆಚ್ಚಿದೆ.

ಹಿನಕಲ್‌ನ ನನ್ನೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಪೂಜೆ ನೆರವೇರಿಸಿ ಮೂರು ದಿನಗಳ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು. ಮೊದಲ ದಿನ 27 ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿದರು. ಕೆಲವೆಡೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಜಿ.ಟಿ.ದೇವೇಗೌಡ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.

ಕುಮಾರಸ್ವಾಮಿ ಅವರಿದ್ದ ಪ್ರಚಾರ ಬಸ್‌ ನನ್ನೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟು ಹುಣಸೂರು ರಸ್ತೆಯಲ್ಲಿ ಮುಂದೆ ಸಾಗಿತು. ಈ ವೇಳೆ ಅಭಿಮಾನಿಗಳು ಪ್ರಚಾರ ಬಸ್ಸಿನ ಸುತ್ತ ನೆರೆದು ಹೂವಿನ ಮಳೆಗೆರೆದರು, ಕೆಲವರು ಬೈಕುಗಳಲ್ಲಿ ಬಸ್ಸನ್ನು ಹಿಂಬಾಲಿಸಿದರು.

ಕುಮಾರಸ್ವಾಮಿ ಅವರು ಹಿನಕಲ್‌ನಿಂದ ನೇರವಾಗಿ ಕೋಟೆಹುಂಡಿಗೆ ಬಂದರು. ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಪ್ರಚಾರ ಬಸ್ಸಿನಲ್ಲೇ ನಿಂತುಕೊಂಡು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಮತ್ತು ಸ್ತೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಯುವಕರಿಗೆ ಉದ್ಯೋಗಾವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಅಭಿಮಾನಿಗಳತ್ತ ಕೈಬೀಸಿ ಮುಖ್ಯರಸ್ತೆಯಿಂದಲೇ ಮುಂದಿನ ಗ್ರಾಮಕ್ಕೆ ತೆರಳಲು ಮುಂದಾದರು. ಆದರೆ ಬಸ್ಸಿಗೆ ಅಡ್ಡ ನಿಂತ ಬೆಂಬಲಿಗರು ಊರಿನ ಒಳಗೆ ಬಂದು ಪ್ರಚಾರ ನಡೆಸುವಂತೆ ಒತ್ತಾಯಿಸಿದರು.

‘ಸಮಯದ ಅಭಾವವಿದೆ. ಇನ್ನೂ 25 ಗ್ರಾಮಗಳಿಗೆ ತೆರಳಬೇಕಿದೆ. ಚುನಾವಣೆಯಲ್ಲಿ ಗೆದ್ದು ನಾನು ಮುಖ್ಯಮಂತ್ರಿಯಾಗುತ್ತೇನೆ. ಜಿ.ಟಿ.ದೇವೇಗೌಡ ಅವರು ಉಸ್ತುವಾರಿ ಸಚಿವರಾಗುತ್ತಾರೆ. ಆ ಬಳಿಕ ಇಬ್ಬರೂ ಇಲ್ಲಿಗೆ ಭೇಟಿ ನೀಡುತ್ತೇವೆ’ ಎಂದು ಕುಮಾರಸ್ವಾಮಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

ಆದರೆ ಗ್ರಾಮಸ್ಥರು ಪಟ್ಟುಬಿಡದ ಕಾರಣ ಅವರ ಒತ್ತಡಕ್ಕೆ ಮಣಿಯಬೇಕಾಯಿತು. ಗ್ರಾಮದ ರಸ್ತೆ ಕಿರಿದಾಗಿರುವ ಕಾರಣ ಕುಮಾರಸ್ವಾಮಿ ಅವರು ಪ್ರಚಾರ ಬಸ್‌ನಿಂದ ಇಳಿದು ವ್ಯಾನ್‌ ಏರಿದರು. ಬಸ್‌ನಿಂದ ಇಳಿದ ಸಂದರ್ಭ ಅಭಿಮಾನಿಗಳು ಕೈಲುಕಿದರಲ್ಲದೆ, ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಪ್ರಚಾರದ ವ್ಯಾನ್‌ ಊರಿನ ಬೀದಿಗಳಲ್ಲಿ ಸಾಗಿತು.

ಕೋಟೆಹುಂಡಿಯಿಂದ ಕೆಂಚಲಗೂಡು ಮತ್ತು ಡಿ.ಸಾಲುಂಡಿ ಗ್ರಾಮಗಳಿಗೆ ಭೇಟಿ ನೀಡಿ ದಾರಿಪುರಕ್ಕೆ ತೆರಳಿದರು. ಅಲ್ಲೂ ಕೆಲ ಹೊತ್ತು ಮಾತನಾಡಿ ಬರಡನಪುರಕ್ಕೆ ಭೇಟಿಕೊಟ್ಟರು. ನಂದಿಕೋಲು ಕುಣಿತದ ಕಲಾವಿದರು ಸಾಂಪ್ರದಾಯಿಕ ಸ್ವಾಗತ ನೀಡಿದರು.

ಮಾವಿನಹಳ್ಳಿ, ಜಯಪುರ, ಹಾರೋಹಳ್ಳಿ, ಗುಜ್ಜೇಗೌಡನಪುರ, ಮಂಡನಹಳ್ಳಿಗೆ ಭೇಟಿ ನೀಡಿ ನೇರವಾಗಿ ಎಚ್‌.ಡಿ.ಕೋಟೆಗೆ ತೆರಳಿ ‘ವಿಕಾಸ ಪರ್ವ’ ಸಮಾವೇಶದಲ್ಲಿ ಪಾಲ್ಗೊಂಡರು.

ಸಮಾವೇಶದಿಂದ ಸಂಜೆ ವಾಪಸಾಗುವ ವೇಳೆ ಮದ್ದೂರು, ಚುಂಚರಾಯನಹುಂಡಿ, ಕಲ್ಲಹಳ್ಳಿ, ಮಾರ್ಬಳ್ಳಿ, ಟಿ.ಕಾಟೂರು, ಕೆಲ್ಲಹಳ್ಳಿ, ದೇವಗಳ್ಳಿ, ಗೋಪಾಲಪುರ, ಮಾದಹಳ್ಳಿ, ಬೀರಿಹುಂಡಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.

Share with Your Friends and Family

Press Briefings

ಬೆಂಗಳೂರು: ‘ಸರ್ಕಾರ ಉರುಳುತ್ತದೆ ಎಂದು ಭಾವಿಸಿರುವ ಕೆಲವು ಅಧಿಕಾರಿಗಳು ತಮಗೆ ತಿಳಿದಂತೆ ಕೆಲಸ ಮಾಡುತ್ತಿದ್ದಾರೆ. ಒಂದು ವಾರದಲ್ಲಿ ಅವರು...

    ಬೆಂಗಳೂರು: ಸಿಗಡಿ ರಫ್ತು ಸಂದರ್ಭದಲ್ಲಿ ಅವುಗಳಲ್ಲಿರುವ ಜೀವಪ್ರತಿರೋಧಕ ಅಂಶಗಳನ್ನು ಪತ್ತೆ ಹಚ್ಚಿ ನಿಯಂತ್ರಣ ಹೇರುವ ವಿಚಾರಕ್ಕೆ...

ಶಿವಮೊಗ್ಗ: ದೇಶದ ಇತಿಹಾಸದಲ್ಲೇ ವಿಶಿಷ್ಟ ಕಾರ್ಯವನ್ನು ಎಚ್.ಡಿ. ಕುಮಾರಸ್ವಾಮಿ ಮಾಡಿದ್ದಾರೆ. ತನ್ನ ಪಕ್ಷಕ್ಕೆ ಶಕ್ತಿ ಇಲ್ಲದಿದ್ದರೂ ರೈತರಿಗೆ ಶಕ್ತಿ ತುಂಬುವ ಕಾರ್ಯ ಹಾಗೂ...

ಎಚ್‌.ಡಿ. ಜೀವನಚರಿತ್ರೆ ಆಧರಿಸಿ ಉಪನ್ಯಾಸಕ ಫಯಾಜ್‌ ಪಾಷಾ ಬರೆದಿರುವ ‘ನಮ್ಮೂರ ದ್ಯಾವಪ್ಪ’ ಪುಸ್ತಕವನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ...