ಜಂಬೂರು (ಕೊಡಗು ಜಿಲ್ಲೆ): ಕೊಡಗು ಜಿಲ್ಲೆಯ ಸಂತ್ರಸ್ತರ ಮನೆ ನಿರ್ಮಾ
ಣಕ್ಕೆ ಸೋಮವಾರಪೇಟೆ ತಾಲ್ಲೂ
ಕಿನ ಜಂಬೂರು ಗ್ರಾಮದಲ್ಲಿ ಶುಕ್ರ
ವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರ
ಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಚಾಲನೆ ನೀಡಿದರು.

ಸಂತ್ರಸ್ತರಿಗೆ ₹ 9.85 ಲಕ್ಷ ವೆಚ್ಚದಲ್ಲಿ ಎರಡು ಮಲಗುವ ಕೋಣೆಯುಳ್ಳ ಮನೆ ನಿರ್ಮಿಸಿಕೊಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಜಂಬೂರು ಪುನರ್ವಸತಿ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.
ಮುಖ್ಯಮಂತ್ರಿ ಕುಮಾರಸ್ವಾಮಿ, ‘ಪರಿಹಾರ ನಿಧಿಗೆ ಇದುವರೆಗೂ ₹ 202 ಕೋಟಿಯಷ್ಟು ನೆರವು ಬಂದಿದೆ. ಕೇಂದ್ರವು ₹ 546 ಕೋಟಿ ನೆರವು ನೀಡಿದ್ದು ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 8 ಜಿಲ್ಲೆಗಳಿಗೂ ಈ ಹಣ ಬಳಕೆ ಮಾಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದ ಹಣವನ್ನು ಬೇರೆ ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಬಳಕೆ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.

‘ಜಮೀನು ಕಳೆದುಕೊಂಡ ಬೆಳೆಗಾರರಿಗೆ ಪರಿಹಾರ ನೀಡುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌ನ ₹ 2 ಲಕ್ಷ, ಸಹಕಾರಿ ಬ್ಯಾಂಕ್‌ನ ₹ 1 ಲಕ್ಷ ಸಾಲ ಮನ್ನಾ ಆಗಲಿದ್ದು, ಬೆಳೆಗಾರರಿಗೂ ನೆರವಾಗಲಿದೆ’ ಎಂದು ಹೇಳಿದರು.

‘ಸಂತ್ರಸ್ತರಿಗೆ ಬಂದಿರುವ ಆಹಾರ ಪದಾರ್ಥಗಳು ದುರುಪಯೋಗ ಆಗಿಲ್ಲ. ಅದನ್ನು ಗೋದಾಮಿನಲ್ಲಿ ಇಡಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

‘ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿರುವ ಅನುದಾನ ತೃಪ್ತಿ ತಂದಿಲ್ಲ. ರಾಜ್ಯದಲ್ಲಿ ಮಳೆಯಿಂದ ದೊಡ್ಡ ಅನಾಹುತ ಸಂಭವಿಸಿತ್ತು. ಎರಡು ಭಾರಿ ಪ್ರಧಾನಿಯನ್ನು ಭೇಟಿ ಮಾಡಿ
₹ 2 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇರಳ
ಮಾದರಿಯಲ್ಲಿ ಪ್ಯಾಕೇಜ್‌ ನಿರೀಕ್ಷೆಯಲ್ಲಿದ್ದೆವು. ಅದು ಹುಸಿಯಾಗಿದೆ’ ಎಂದು ಪರಮೇಶ್ವರ ಅಸಮಾಧಾನ
ವ್ಯಕ್ತಪಡಿಸಿದರು.

ಇದೇ ವೇಳೆ ಸಂತ್ರಸ್ತರಿಗೆ ಮಾಸಿಕ ಬಾಡಿಗೆ ಭತ್ಯೆ ಚೆಕ್‌ (₹ 10 ಸಾವಿರ), ಮನೆ ನಿರ್ಮಾಣದ ಪತ್ರ ವಿತರಣೆ ಮಾಡಲಾಯಿತು.

By R

You missed