ಶಿವಮೊಗ್ಗ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವಿಗಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ತಮ್ಮ ಹಿರಿಯ ಸ್ನೇಹಿತ ಕಾಗೋಡು ತಿಮ್ಮಪ್ಪ ಸೇರಿ ಉಭಯ ಪಕ್ಷಗಳ‌ ನಾಯಕರನ್ನು ಭಾನುವಾರ ಭೇಟಿ ಮಾಡಿದರು.

ಪ್ರಜಾವಾಣಿ ವಾರ್ತೆ

ಶಿವಮೊಗ್ಗ: ‘ಕಾಶ್ಮೀರದಲ್ಲಿ ಶಾಂತಿ ಹಾಗೂ ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧ ಸಾಧ್ಯವಾಗಿದ್ದರೆ ಅದು ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಮಾತ್ರ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.

ಇಲ್ಲಿನ ಲಗಾನ್ ಕಲ್ಯಾಣ ಮಂದಿ
ರದಲ್ಲಿ ಜಿಲ್ಲಾ ಜೆಡಿಎಸ್‌ನಿಂದ ಭಾನುವಾರ ಏರ್ಪಡಿಸಿದ್ದ ಪಕ್ಷದ ಚುನಾಯಿತ ಪ್ರತಿನಿಧಿಗಳ, ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘13 ಪಕ್ಷಗಳ ಜತೆ ಸೇರಿ ಸರ್ಕಾರ ನಡೆಸಿದವನು ಈ ಬಡ ರೈತನ ಮಗ. ನಾನು 10 ತಿಂಗಳು ಪ್ರಧಾನಿ ಆದಾಗ ದೇಶದಲ್ಲಿ ಯಾವ ದುರ್ಘಟನೆಯೂ ನಡೆದಿಲ್ಲ. ಯಾವ ವಿಮಾನವೂ ಹೈಜಾಕ್ ಆಗಲಿಲ್ಲ. ಯಾವೊಬ್ಬ ಯೋಧನೂ ಸಾಯಲಿಲ್ಲ. ಹಿಂದಿನ ಪ್ರಧಾನಿಗಳು ಪ್ರಾಣಕ್ಕೆ ಅಪಾಯ ಇದೆ ಎಂದು 10 ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿರಲಿಲ್ಲ. ಆದರೆ, ನನ್ನ ಪ್ರಾಣವನ್ನು ಲೆಕ್ಕಿಸದೆ ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೆ. ನನಗೆ ಅಧಿಕಾರದ ವ್ಯಾಮೋಹ ಇದ್ದಿದ್ದರೆ ಬೇರೆ ರೀತಿಯ ರಾಜಕಾರಣ ಮಾಡುತ್ತಿದ್ದೆ. ಆದರೆ ಯುದ್ಧದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನೆರೆಯ ರಾಷ್ಟ್ರಗಳೊಡನೆ ಸೌಹಾರ್ದ ಸಂಬಂಧ ಬೆಳೆಸಿದ್ದೆ. ಈಗಿನ ಪ್ರಧಾನಿ ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕು’ ಎಂದರು.

ನಾವೆಲ್ಲರೂ ಭಾರತಾಂಬೆಯ ಮಕ್ಕಳಲ್ವಾ?: ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಮೇಲೆ ದೌರ್ಜನ್ಯ ನಡೆಸಿದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬುದನ್ನೇ ಮರೆತಿದೆ. ಈ ಹಿಂದೆ 282 ಸ್ಥಾನ ಪಡೆದರೂ ಜನರ ಇಚ್ಛಾನುಸಾರವಾಗಿ ಅಧಿಕಾರ ನಡೆಸದ ಕೇಂದ್ರ ಬಿಜೆಪಿ ಸರ್ಕಾರ ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡು ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಹೋಗಿ ಮೈತ್ರಿಗೆ ಹಾತೊರೆಯುತ್ತಿದೆ’ ಎಂದು ಟೀಕಿಸಿದರು.

ಮೊಮ್ಮಕ್ಕಳನ್ನು ಗೆಲ್ಲಿಸುವಂತೆ ಮಧು ಬಂಗಾರಪ್ಪನ ಗೆಲ್ಲಿಸುವೆ: ‘ನಾನು ಸಾಕಷ್ಟು ನೊಂದಿದ್ದೇನೆ. ಇಳಿವಯಸ್ಸಿನಲ್ಲಿ ನಾನೇಕೆ ಪ್ರಚಾರ ಮಾಡುತ್ತಿದ್ದೇನೆ ಎಂಬ ಅನಿವಾರ್ಯತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಆಗುತ್ತಿರುವ ಅನಾಹುತ ತಪ್ಪಿಸಲಿಕ್ಕೆ ನಾವೆಲ್ಲರೂ ಹೋರಾಡಲೇಬೇಕು. ಶಿವಮೊಗ್ಗದಲ್ಲಿ ಮಧು ಬಂಗಾ ರಪ್ಪ ಗೆಲುವಿಗೆ‌ ಶಕ್ತಿ‌ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

By R

You missed