[TABS_R id=7465] [TABS_R id=7469] [TABS_R id=7473] [TABS_R id=7475] Post navigation ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಇಂದು ಭಿನ್ನವಾಗಿ ಆರಂಭಿಸಲಾದ ಜನತಾದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿಗಳನ್ನು ನೋಡಲು ಬರುವವರಿಗೆ ತೊಂದರೆಯಾಗದಂತೆ ಅನುಕೂಲಗಳನ್ನು ಕಲ್ಪಿಸಿಕೊಡಲಾಗಿತ್ತು. ಎಲ್ಲರಿಗೂ ನೆರಳಿರುವಂತೆ ನೋಡಿಕೊಳ್ಳಲಾಗಿತ್ತಲ್ಲದೆ ಕುಳಿತುಕೊಳ್ಳಲು ಖುರ್ಚಿ ವ್ಯವಸ್ಥೆ ಮಾಡಲಾಗಿತ್ತು. ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಗಮನ ಸೆಳೆಯುವಂತಿತ್ತು. ಎಲ್ಲರಿಗೂ ಕುಡಿಯುವ ನೀರು, ಉಪಾಹಾರದ ವ್ಯವಸ್ಥೆ ಇತ್ತು. ಪ್ರತಿಯೊಬ್ಬರಿಗೂ ಟೋಕನ್ ನೀಡಿದ ಕಾರಣ ವ್ಯವಸ್ಥಿತವಾಗಿ ಜನತಾದರ್ಶನ ಜರುಗಿತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮೈಸೂರು ದಸರಾ ಉತ್ಸವಕ್ಕೆ ಜಿಲ್ಲಾಡಳಿತ ಅಧಿಕೃತ ಆಹ್ವಾನವನ್ನು ನೀಡಿತು. ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರು ಜಿಲ್ಲಾಡಳಿತದ ಪರವಾಗಿ ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಚಿವ ಸಾ ರಾ ಮಹೇಶ್, ಶಾಸಕ ಹೆಚ್ ವಿಶ್ವನಾಥ್, ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಉಪಸ್ಥಿತರಿದ್ದರು.