ಕಾವೇರಿ ತೀರ್ಪು ಪೂರ್ಣ ತೃಪ್ತಿ ತಂದಿಲ್ಲ

40 ಟಿಎಂಸಿಗೂ ಹೆಚ್ಚು ನೀರು ಸಿಗಬೇಕಿತ್ತು: ದೇವೇಗೌಡ

‘ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ 40 ಟಿಎಂಸಿ ಅಡಿಗಳಿಗೂ ಹೆಚ್ಚು ನೀರು ಲಭಿಸಬೇಕಿತ್ತು’ ಎಂದು ಸಂಸದ ಎಚ್‌.ಡಿ.ದೇವೇಗೌಡ ಮಂಗಳವಾರ ಅಭಿಪ್ರಾಯಪಟ್ಟರು.

40 ಟಿಎಂಸಿಗೂ ಹೆಚ್ಚು ನೀರು ಸಿಗಬೇಕಿತ್ತು: ದೇವೇಗೌಡ

ಚನ್ನರಾಯಪಟ್ಟಣ: ‘ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ 40 ಟಿಎಂಸಿ ಅಡಿಗಳಿಗೂ ಹೆಚ್ಚು ನೀರು ಲಭಿಸಬೇಕಿತ್ತು’ ಎಂದು ಸಂಸದ ಎಚ್‌.ಡಿ.ದೇವೇಗೌಡ ಮಂಗಳವಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಎ.ಕಾಳೇನಹಳ್ಳಿಯಲ್ಲಿ ಜೀರ್ಣೋದ್ಧಾರಗೊಂಡ ಆಂಜನೇಯಸ್ವಾಮಿ ದೇಗುಲ ಉದ್ಘಾಟಿಸಿ ಮಾತನಾಡಿದರು.

‘ಸುಪ್ರೀಂ ಕೋರ್ಟ್‌ ನೀಡಿರುವ ಅಂತಿಮ ತೀರ್ಪು ನನಗೆ ತೃಪ್ತಿ ತಂದಿಲ್ಲ. ನಮ್ಮ ಜನರಿಗೆ ಆಗಿರುವ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು’ ಎಂದರು.

‘ತಮಿಳುನಾಡಿಗೆ ನಾವು ಮೋಸ ಮಾಡಿಲ್ಲ. ಕಾವೇರಿ ನೀರು ಹಂಚಿಕೆ ಕುರಿತು ಅವರು ತಕರಾರು ಮಾಡಿದರೆ ಪ್ರತಿರೋಧ ತೋರಲು ನಮ್ಮಲ್ಲೂ ಅಸ್ತ್ರಗಳಿವೆ’ ಎಂದರು.

‘ಈಗ ಕೇವಲ 14.50 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇವರಿಗೆ ಏನಾದರೂ ವಿವೇಚನೆ ಇದೆಯೆ? ’ ಎಂದು ಪ್ರಶ್ನಿಸಿದರು.