ಸರಳ ವಿವಾಹ: ಜಾತ್ರಾಮಹೋತ್ಸವದಲ್ಲಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ನಡೆದ ಉಚಿತ ಸರಳ ಸಾಮೂಹಿಕ ವಿವಾಹ ನಡೆದಿದ್ದು, 15 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ‌

ನಟ ನಿಖಿಲ್‌ ಕುಮಾರಸ್ವಾಮಿ ನವ ಜೋಡಿಗಳಿಗೆ ಮಾಂಗಲ್ಯ ವಿತರಿಸಿದರು. ಗಟ್ಟಿಮೇಳದ ನಂತರ, ಅಲ್ಲಿ ಸೇರಿದ್ದ ಜನರು ನವ ಜೋಡಿಗಳಿಗೆ ಅಕ್ಷತೆ ಹಾಕಿ ಹರಸಿದರು.

ಹಿಂದೆ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ಮದುವೆ ನಡೆಯುತ್ತಿರಲಿಲ್ಲ. ನಾನು ಶಾಸಕನಾಗಿದ್ದಾಗ 1996ರಲ್ಲಿ ’ಉಚಿತ ಸರಳ ಸಾಮೂಹಿಕ ವಿವಾಹ’ಕಾರ್ಯಕ್ರಮ ರೂಪಿಸಿದೆ. ಅಲ್ಲಿಂದ ನಿರಂತರ ನಡೆಯುತ್ತಿದೆ. ಜತೆಗೆ ಈ ಬಾರಿ ತಿರುಪತಿ ತಿರುಮಲ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ನಿಖಿಲ್‌ಗೆ ಆಶೀರ್ವದಿಸಿ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನತೆ ಬೆಂಬಲಿಸಬೇಕು ಎಂದು ಅವರು ಇದೆ ಸಂದರ್ಭದಲ್ಲಿ ಕೋರಿದರು.

By R

You missed