ಜೆಡಿ(ಎಸ್) , ಎಂದು ಕರೆಯಲ್ಪಡುವ ಜನತಾದಳ (ಜಾತ್ಯತೀತ), ಒಂದು ಪ್ರಾದೇಶಿಕ ಪಕ್ಷವಾಗಿದೆ. ಪ್ರಜಾಪ್ರಭುತ್ವದ ಸಿದ್ಧಾಂತಗಳು ಹಾಗು ಜಾತ್ಯತೀಯತೆಯೇ ಪಕ್ಷದ ಭದ್ರ ಬುನಾದಿ.

ಸರ್ವ ಧರ್ಮ ಸಮನ್ವಯತೆ, ಸಾಮರಸ್ಯ, ಜಾತ್ಯತೀಯತೆ, ಪ್ರಜಾಪ್ರಭುತ್ವ, ಸಾಂವಿಧಾನಿಕ ನಿಷ್ಠೆ ಇವೆಲ್ಲವೂ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನೆಲೆಸಿವೆ.


ಪಕ್ಷದ ಚಿಹ್ನೆ ಮತ್ತು ಅದರ ಮಹತ್ವ..!

ಜನತಾ ದಳ (ಜಾತ್ಯತೀತ) ಪಕ್ಷದ ಚಿಹ್ನೆಯು "ತೆನೆ ಹೊತ್ತ ರೈತ ಮಹಿಳೆ". ಜೆಡಿ (ಎಸ್) ಪಕ್ಷವು ರೈತರ ಹಾಗೂ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತದೆ ಎನ್ನುವುದನ್ನು ಈ ಚಿಹ್ನೆಯು ಸಾರುತ್ತದೆ. ಜೆಡಿ (ಎಸ್) ತನ್ನ ಸಂವಿಧಾನದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ರೈತ ಹಕ್ಕುಗಳು ಹಾಗೂ ಸವಲತ್ತುಗಳು ಮತ್ತು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವುದಾಗಿ ಹೇಳುತ್ತದೆ.

ಜೆಡಿ (ಎಸ್) ಪಕ್ಷವು ಆರಂಭದಿಂದಲೂ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು , ತನ್ನ ಎಲ್ಲಾ ಕಾರ್ಯಕಲ್ಪಗಳಲ್ಲಿ ರೈತರಿಗಾಗಿ ಮೀಸಲಾತಿಯನ್ನು ನೀಡುತ್ತಾ ಬಂದಿದೆ. ಮಹಿಳೆಯರ ಏಳಿಗೆಯೂ ಪಕ್ಷದ ಗುರಿಯಾಗಿದ್ದು, ಮಹಿಳೆಯರ ಸಬಲೀಕರಣ ದೇಶದ ಅಭಿವೃದ್ಧಿಗೆ ಕಾರಣವೆಂದು ಪಕ್ಷವು ಬಲವಾಗಿ ನಂಬಿದೆ.

#ನಮ್ಮ ಹೆಮ್ಮೆ

ಶ್ರೀ ಹೆಚ್ ಡಿ ದೇವೇಗೌಡರು, ಒಬ್ಬ ದಣಿವರಿಯದ ವ್ಯಕ್ತಿತ್ವದವರು ಹಾಗೂ ದೇಶ ಕಂಡ ಅದ್ವಿತೀಯ ದಾರ್ಶನಿಕ. ಇವರ ಅಧಿಕಾರಾವಧಿ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯನ್ನೇ ಗುರಿಯಾಗಿಸಿತ್ತು. ಮಣ್ಣಿನ ಮಗನೆಂದೇ ಖ್ಯಾತನಾಮರಾದ ಇವರು ಭಾರತ ಕಂಡ ಮುತ್ಸದ್ದಿ ರಾಜಕಾರಣಿ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಎಲ್ಲಾ ಮಜಲುಗಳನ್ನು ಕಂಡಿರುವ ಇವರ ಕಾರ್ಯ ವೈಖರಿ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ.

ಇನ್ನಷ್ಟು ತಿಳಿಯಿರಿ

ನಡೆದು ಬಂದ ಹಾದಿ

Card Image

1977

ಜನತಾ ಪಕ್ಷದ ಪರ್ವದ ಆರಂಭ....


ಇನ್ನಷ್ಟು ತಿಳಿಯಿರಿ
Card Image

1988

ಜನತಾ ಪಕ್ಷ ಹಾಗೂ ಇತರೇ ಪಕ್ಷಗಳು ಸೇರಿ ಜನತಾದಳವು ಹೊರಹೊಮ್ಮಿತು...

ಇನ್ನಷ್ಟು ತಿಳಿಯಿರಿ
Card Image

1996

ಶ್ರೀ ದೇವೇಗೌಡರು ಪ್ರಧಾನಿಯಾದ ಈ ವರ್ಷವು ಜನತಾದಳ ತನ್ನ ಉತ್ತುಂಗದಲ್ಲಿದ್ದ....

ಇನ್ನಷ್ಟು ತಿಳಿಯಿರಿ
Card Image

1999

ದೇವೇಗೌಡರ ನಾಯಕತ್ವದಲ್ಲಿ ಜನತಾ ದಳ (ಜಾತ್ಯಾತೀತ) ರಚನೆ....


ಇನ್ನಷ್ಟು ತಿಳಿಯಿರಿ
Card Image

2006

ಕರ್ನಾಟಕದ ೧೮ನೇ ಮುಖ್ಯ ಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕಾರ....

ಇನ್ನಷ್ಟು ತಿಳಿಯಿರಿ
Card Image

2018

ಎರಡನೇ ಬಾರಿಗೆ ಕುಮಾರಸ್ವಾಮಿಯವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿ...


ಇನ್ನಷ್ಟು ತಿಳಿಯಿರಿ

ವಿಶ್ವಾಸಾರ್ಹ ನಾಯಕ

ದೂರದೃಷ್ಟಿಯುಳ್ಳ ನಾಯಕತ್ವವು ಎಂದಿಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ.
ಕರ್ನಾಟಕ ರಾಜ್ಯದ ಜನರು ಇಂದಿಗೂ ತಮ್ಮ ನೋವುಗಳಿಗೆ ಸ್ಪಂದಿಸುವ ನಾಯಕನ ಹುಡುಕಾಟದಲ್ಲಿದ್ದು, ತನ್ನ ಜನರ ನಂಬಿಕೆಗೆ ಅರ್ಹರಾದ ನಾಯಕನನ್ನು ಚುನಾಯಿಸುವ ಸಮಯ ಇದೀಗ ಬಂದಿದೆ.

ಇನ್ನಷ್ಟು ತಿಳಿಯಿರಿ

ನಮ್ಮ ನಾಯಕರು

"ಧೃಢ ಆತ್ಮವಿಶ್ವಾಸ ಹಾಗೂ ಪ್ರಬಲ ಇಚ್ಛಾಶಕ್ತಿ ಇರುವ ನಾಯಕರು ಸಮಾಜದ ಏಳಿಗೆಗೆ ಶ್ರಮಿಸುತ್ತಾರೆ."

ನಿಜವಾದ ನಾಯಕರು ತಮ್ಮಂತೆ ತಮ್ಮ ಜನರನ್ನೂ ಪ್ರೋತ್ಸಾಹಿಸಿ ಬೆಳೆಸುತ್ತಾರೆ. ನಮ್ಮ ಪಕ್ಷದಸರ್ವ ನಾಯಕರ ಗುರಿಯೂ ಇದೆ ಆಗಿದೆ.

ಪಂಚರತ್ನ ಯೋಜನೆ

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಚುನಾವಣಾ ಪ್ರಣಾಳಿಕೆ ಜನತಾ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ ಎಂ ಫಾರೂಕ್, ಪಕ್ಷದ ಕಾರ್ಯಾಧ್ಯಕ್ಷ ಅಲ್ಕೋಡ್ ಹನುಮಂತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

ಇರುವುದೊಂದೇ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ

ಗೆಲುವಿನ ನಡೆ

" ಎಲ್ಲರ ಸಹಕಾರ ಹಾಗೂ ಶ್ರಮದಿಂದ ಮುನ್ನಡೆಯೋಣ "

ಜನತೆಯ ಯಶಸ್ಸಿಗಾಗಿ ದುಡಿಯುವ ನಾಯಕರಿಗೆ ಶಕ್ತಿ ತುಂಬುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕಾಗಿದೆ.
ಸರ್ವ ಧರ್ಮ ಸಮನ್ವಯತೆಯನ್ನು ಪ್ರೋತ್ಸಾಹಿಸುವ ನಮ್ಮ ಪಕ್ಷವು ಸರ್ವಾಂಗೀಣ ಏಳಿಗೆಯನ್ನು ತನ್ನ ಪ್ರಬಲ ಗುರಿಯಾಗಿಸಿದೆ.



ಸಹಬಾಳ್ವೆಯಿಂದಲೇ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ