ಜೆಡಿ(ಎಸ್) , ಎಂದು ಕರೆಯಲ್ಪಡುವ ಜನತಾದಳ (ಜಾತ್ಯತೀತ), ಒಂದು ಪ್ರಾದೇಶಿಕ ಪಕ್ಷವಾಗಿದೆ. ಪ್ರಜಾಪ್ರಭುತ್ವದ ಸಿದ್ಧಾಂತಗಳು ಹಾಗು ಜಾತ್ಯತೀಯತೆಯೇ ಪಕ್ಷದ ಭದ್ರ ಬುನಾದಿ.
ಸರ್ವ ಧರ್ಮ ಸಮನ್ವಯತೆ, ಸಾಮರಸ್ಯ, ಜಾತ್ಯತೀಯತೆ, ಪ್ರಜಾಪ್ರಭುತ್ವ, ಸಾಂವಿಧಾನಿಕ ನಿಷ್ಠೆ ಇವೆಲ್ಲವೂ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನೆಲೆಸಿವೆ.
ಪಕ್ಷದ ಚಿಹ್ನೆ ಮತ್ತು ಅದರ ಮಹತ್ವ..!

ಜನತಾ ದಳ (ಜಾತ್ಯತೀತ) ಪಕ್ಷದ ಚಿಹ್ನೆಯು "ತೆನೆ ಹೊತ್ತ ರೈತ ಮಹಿಳೆ". ಜೆಡಿ (ಎಸ್) ಪಕ್ಷವು ರೈತರ ಹಾಗೂ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತದೆ ಎನ್ನುವುದನ್ನು ಈ ಚಿಹ್ನೆಯು ಸಾರುತ್ತದೆ. ಜೆಡಿ (ಎಸ್) ತನ್ನ ಸಂವಿಧಾನದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ರೈತ ಹಕ್ಕುಗಳು ಹಾಗೂ ಸವಲತ್ತುಗಳು ಮತ್ತು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವುದಾಗಿ ಹೇಳುತ್ತದೆ.
ಜೆಡಿ (ಎಸ್) ಪಕ್ಷವು ಆರಂಭದಿಂದಲೂ ರೈತರ ಏಳಿಗೆಗಾಗಿ ಶರ್ಮಿಸುತ್ತಿದ್ದು, ತನ್ನ ಎಲ್ಲಾ ಕಾರ್ಯಕಲ್ಪಗಳಲ್ಲಿ ರೈತರಿಗಾಗಿ ಮೀಸಲಾತಿಯನ್ನು ನೀಡುತ್ತಾ ಬಂದಿದೆ. ಮಹಿಳೆಯರ ಏಳಿಗೆಯೂ ಪಕ್ಷದ ಗುರಿಯಾಗಿದ್ದು, ಮಹಿಳೆಯರ ಸಬಲೀಕರಣ ದೇಶದ ಅಭಿವೃದ್ಧಿಗೆ ಕಾರಣವೆಂದು ಪಕ್ಷವು ಬಲವಾಗಿ ನಂಬಿದೆ.
ನಡೆದು ಬಂದ ಹಾದಿ






ನಮ್ಮ ನಾಯಕರು
"ಧೃಢ ಆತ್ಮವಿಶ್ವಾಸ ಹಾಗೂ ಪ್ರಬಲ ಇಚ್ಛಾಶಕ್ತಿ ಇರುವ ನಾಯಕರು ಸಮಾಜದ ಏಳಿಗೆಗೆ ಶ್ರಮಿಸುತ್ತಾರೆ."

ನಿಜವಾದ ನಾಯಕರು ತಮ್ಮಂತೆ ತಮ್ಮ ಜನರನ್ನೂ ಪ್ರೋತ್ಸಾಹಿಸಿ ಬೆಳೆಸುತ್ತಾರೆ. ನಮ್ಮ ಪಕ್ಷದಸರ್ವ ನಾಯಕರ ಗುರಿಯೂ ಇದೆ ಆಗಿದೆ.
ಪಂಚರತ್ನ ಯೋಜನೆ
ನಮ್ಮ ಪ್ರಣಾಳಿಕೆಯ ಅಂಶಗಳು
ಶಿಕ್ಷಣ, ಆರೋಗ್ಯ, ರೈತರ ಸರ್ವಾಭಿವೃದ್ಧಿ, ವಸತಿಯ ಆಸರೆ, ಯುವ ಶಕ್ತಿ ಹಾಗೂ ಮಹಿಳಾ ಸಬಲೀಕರಣ.
ಇರುವುದೊಂದೇ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ


ಗೆಲುವಿನ ನಡೆ
" ಎಲ್ಲರ ಸಹಕಾರ ಹಾಗೂ ಶ್ರಮದಿಂದ ಮುನ್ನಡೆಯೋಣ "
ಜನತೆಯ ಯಶಸ್ಸಿಗಾಗಿ ದುಡಿಯುವ ನಾಯಕರಿಗೆ ಶಕ್ತಿ ತುಂಬುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕಾಗಿದೆ.
ಸರ್ವ ಧರ್ಮ ಸಮನ್ವಯತೆಯನ್ನು ಪ್ರೋತ್ಸಾಹಿಸುವ ನಮ್ಮ ಪಕ್ಷವು ಸರ್ವಾಂಗೀಣ ಏಳಿಗೆಯನ್ನು ತನ್ನ ಪ್ರಬಲ ಗುರಿಯಾಗಿಸಿದೆ.