© 2021 JANATA DAL (SECULAR). All rights reserved
ಹೆಚ್.ಡಿ ರೇವಣ್ಣ, ಜಾತ್ಯಾತೀತ ಜನತಾ ದಳದಲ್ಲಿ ತನ್ನದೇ ವರ್ಚಸ್ಸು ಹೊಂದಿರುವ ಅಪರೂಪ ನಾಯಕ. ಇಟ್ಟ ಗುರಿಯಿಂದ ಹಿಂದಕ್ಕೆ ಸರಿಯದೆ ನೆಟ್ಟಗೆ ಗುರಿಯತ್ತ ಸಾಗುವ ಛಲಗಾರ. ಜೆಡಿಎಸ್ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಸಿ ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನೇ ಕಟ್ಟುವಲ್ಲಿ ಯಶಸ್ಸು ಗಳಿಸಿದ ದೂರದೃಷ್ಟಿತ್ವದ ನಾಯಕ. ಮಾಜಿ ಪ್ರಧಾನಿ ದೇವೇಗೌಡರು ಹಾಕಿದ ಗೆರೆಯನ್ನು ದಾಟದೆ ಅಪ್ಪನ ರಾಜಕೀಯ ನೆರಳಲ್ಲೇ ಬೆಳೆದ ನಿಷ್ಠಾವಂತ ನಾಯಕ.
ಹೆಚ್.ಡಿ ರೇವಣ್ಣ, ಹುಟ್ಟಿದ್ದು ಡಿಸೆಂಬರ್ ೧೭ ೧೯೫೭ರಲ್ಲಿಮ ಹಾಸನದ ಹರದನಹಳ್ಳಿಯಲ್ಲಿ. ಇವರ ಓದಿದ್ದು ಎಸ್‌ಎಸ್‌ಎಲ್. ಅಪ್ಪ ದೇವೇಗೌಡರಿಂದ ರಾಜಕೀಯದ ಪಟ್ಟುಗಳನ್ನ ಕಲಿತ ರೇವಣ್ಣ ಅವರು ಧಾರ್ಮಿಕ ಶ್ರದ್ಧೆ, ಪೂಜೆ, ಪುನಸ್ಕಾರಗಳನ್ನು ತಾಯಿ ಚೆನ್ನಮ್ಮರಿಂದ ಕಲಿತರು. ರೇವಣ್ಣ ಅವರಿಗೆ ಬಾಲ್ಯದಲ್ಲೇ ರಾಜಕೀಯದತ್ತ ಒಲವಿತ್ತು. ಎಲ್ಲರೊಂದಿಗೆ ಬೆರೆಯುವ. ಅನ್ಯಾಯವಾದಾಗ ಸಿಡಿದೇಳುವ ಗುಣಗಳಿಂದ ಅವರು ನಾಯಕನಾಗಿ ರೂಪುಗೊಂಡರು. ಹಲವು ಹೋರಾಟಗಳು, ಹಿರಿಯ ಮಾರ್ಗದರ್ಶ ಪಡೆದು ಇವರು ಹಂತ ಹಂತವಾಗಿಯೇ ರಾಜಕೀಯದ ಮೆಟ್ಟಿಲುಗಳನ್ನೇರಿದರು.
೧೯೯೪ರಲ್ಲಿ ಹೆಚ್.ಡಿ ರೇವಣ್ಣ ಚುನಾವಣಾ ಕಣಕ್ಕಿಳಿದರು. ಹೊಳೆನರಸೀಪುರ ವಿಧಾನ ಸಭಾಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಜಯಸಾಧಿಸಿದರು. ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನದಂದು ನಾನಾ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡರು. ಇದರ ಫಲದಿಂದಲೇ ೧೯೯೯ರಲ್ಲೂ ಮತ್ತೊಮ್ಮೆ ಹೊಳೆನರಸೀಪುರದಿಂದಲೇ ಸ್ಪರ್ಧಿಸಿ ಗೆದ್ದರು. ೨೦೦೪ರಲ್ಲಿ ಮತ್ತೆ ಚುನಾವಣಾ ಕಣಕ್ಕಿಳಿದು ಗೆಲುವಿನ ಹ್ಯಾಟ್ರಿಕ್ ಸಾಧನೆ ಮಾಡಿದ್ರು. ೨೦೦೪ರಲ್ಲಿ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿತು. ಧರಂಸಿAಗ್ ಅವರ ನೇತೃತ್ವದ ಸರ್ಕಾರದಲ್ಲಿ ಪಿಡಬ್ಲುö್ಯ ಸಚಿವರು ಕಾರ್ಯನಿರ್ವಹಿಸಿದರು. ಅಲ್ಲದೆ ೨೦೦೪ ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲೂ ರೇವಣ್ಣ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದರು.
ರೇವಣ್ಣ ಅವರು ಒಂಭತ್ತು ವರ್ಷಗಳ ಕಾಲ ರಾಜ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕಾರ್ಯಹಿಸಿ ಕೆಎಂಎಫ್‌ನಲ್ಲಿ ಸಾಕಷ್ಟು ಬದಲಾವಣೆ ತಂದ್ರು. ರೈತರ ಪರ ನಾನಾ ಯೋಜನೆಗಳನ್ನು ಹಮ್ಮಿಕೊಂಡ್ರು. ನಷ್ಟದಲ್ಲಿದ್ದ ಕೆಎಂಎಫ್ ಅನ್ನು ಲಾಭದತ್ತ ಕೊಂಡೊಯ್ದ ಕೀರ್ತಿ ರೇವಣ್ಣ ಅವರುಗೆ ಸಲ್ಲುತ್ತೆ., ಜೆಡಿಎಸ್ ಪಕ್ಷಕ್ಕೆ ಸಂಕಷ್ಟ ಬಂದಾಗಲೆಲ್ಲಾ ತನ್ನ ಹೆಗಲುಕೊಟ್ಟು ಅದರ ನಿವಾರಣೆ ಅವಿರತವಾಗಿ ಶ್ರಮಿಸಿದ್ದಾರೆ.