© 2021 JANATA DAL (SECULAR). All rights reserved
(FORMER PRIME MINISTER OF INDIA)
ದೇವೇಗೌಡರು ಕರ್ನಾಟಕ ಕಂಡ ರಾಜಕಾರಣಿಗಳಲ್ಲೆಲ್ಲಾ ವಿಶಿಷ್ಠ ವ್ಯಕ್ತಿತ್ವದ ರಾಜಕಾರಣಿ. ಅಪ್ಪಟ ಗ್ರಾಮೀಣ ಪರಿಸರದಿಂದ ಬೆಳೆದು ಬಂದ ಈ ರೈತನ ಮಗ ಸರಳತೆಯೊಂದಿಗೆ ಮೈಗೂಡಿಸಿಕೊಂಡಿದ್ದು ಹಠ ಮತ್ತು ಛಲಗಾರಿಕೆ. ರೈತ ಕುಟುಂಬದ ಕೂಸಾಗಿ, ಹಳ್ಳಿಯ ಹೊಲಗದ್ದೆಗಳಲ್ಲಿ ಅಡ್ಡಾಡಿಕೊಂಡು ಬೆಳೆದ ಗೌಡರು 50ರ ದಶಕದಲ್ಲಿಯೇ ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಅಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಜನಪ್ರತಿನಿಧಿಯಾದವರು. ರಾಜ್ಯ ರಾಜಕಾರಣಕ್ಕೆ ಅವರ ಪ್ರವೇಶ ವಿಧಾನ ಸಭೆಯ ಸದಸ್ಯರಾಗಿ 1962 ರಲ್ಲಿ. ಅಂದಿನಿAದ ಇಲ್ಲಿಯವರೆವಿಗೆ ರಾಜ್ಯ ಮತ್ತು ರಾಷ್ಟç ರಾಜಕಾರಣದಲ್ಲಿ ಅವರು ತಮ್ಮದೇ ಹೆಜ್ಜೆಗುರುತುಗಳನ್ನು ಮೂಡಿಸುತ್ತಾ ಆನೆ ನಡೆದದ್ದೇ ದಾರಿ ಎಂಬAತೆ ನಡೆಯುತ್ತಿರುವವರು.
50 ವರ್ಷಗಳ ಅವರ ಒಟ್ಟಾರೆ ಸಾರ್ವಜನಿಕ ಶಾಸಕಾಂಗದ ಬದುಕಿನಲ್ಲಿ ಅವರು ಅಧಿಕಾರದಲ್ಲಿದ್ದದ್ದು ಅತ್ಯಂತ ಅಲ್ಪ ಅವಧಿ. 1983 ರಿಂದ 1988 ರವರೆಗೆ ಸುಮಾರು 4 ವರ್ಷಗಳ ಕಾಲ ಮಂತ್ರಿಯಾಗಿ, 1994-96 ರ ಅವಧಿಯಲ್ಲಿ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ಮತ್ತು 1996 ರಲ್ಲಿ 10 ತಿಂಗಳು ದೇಶದ ಪ್ರಧಾನಿಯಾಗಿ ಅವರು ಅಧಿಕಾರ ಅನುಭವಿಸಿದ ಒಟ್ಟು ಅವಧಿ ಸುಮಾರು 6 ವರ್ಷ 4 ತಿಂಗಳು. 50 ವರ್ಷಗಳ ನಿರಂತರ ರಾಜಕೀಯ ಬದುಕಿನಲ್ಲಿ 6 ವರ್ಷ 4 ತಿಂಗಳು ಹೊರತುಪಡಿಸಿದರೆ ಅವರು ಜೀವನದುದ್ದಕ್ಕೂ ನಡೆಸಿಕೊಂಡು ಬಂದದ್ದು, ನಡೆಸಿಕೊಂಡು ಬರುತ್ತಿರುವುದು ಹೋರಾಟದ ಬದುಕನ್ನೇ. ಅದೂ ಕೂಡ ಪ್ರವಾಹಕ್ಕೆ ವಿರುದ್ಧವಾಗಿಯೇ ಸಾಗುವ ಹೋರಾಟದ ಬದುಕು. ಹಳ್ಳಿಯ ಯುವಕನೊಬ್ಬ 29ನೇ ವಯಸ್ಸಿಗೆ ಶಾಸಕನಾಗಿ, 39ನೇ ವಯಸ್ಸಿಗೆ ವಿರೋಧ ಪಕ್ಷದ ನಾಯಕನಾಗಿ, 50ನೇ ವಯಸ್ಸಿಗೆ ಮಂತ್ರಿಯಾಗಿ, 58ನೇ ವಯಸ್ಸಿಗೆ ಸಂಸದನಾಗಿ, 61ನೇ ವಯಸ್ಸಿಗೆ ಮುಖ್ಯಮಂತ್ರಿಯಾಗಿ, 63ನೇ ವಯಸ್ಸಿಗೆ ರಾಷ್ಟ್ರದ ಪ್ರಧಾನಿಯಾಗಿ, ಈಗ 89ರ ಇಳಿವಯಸ್ಸಿನಲ್ಲಿಯೂ ಜನರ ಮಧ್ಯದ ಹೋರಾಟಗಾರನಾಗಿ ಏರಿಳಿದ ಪರಿ ಜನತಂತ್ರದ ಸೊಗಸಷ್ಟೇ ಅಲ್ಲ ; ಅದೊಂದು ರೋಚಕ ಸಾಹಸಗಾಥೆ.
ನರ್ಮದೆಯನ್ನು ದಾಟಿ ಹರ್ಷಮಹಾರಾಜನನ್ನು ಸೋಲಿಸಿದ ಕನ್ನಡಿಗರ ದೊರೆ ಇಮ್ಮಡಿ ಪುಲಿಕೇಶಿಯ ನಂತರ ದಕ್ಷಿಣ ಭಾರತದ ಗಡಿಯನ್ನು ದಾಟಿ ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಏಕೈಕ ಕನ್ನಡಿಗ ಪ್ರಧಾನಿ ದೇವೇಗೌಡರು ಎಂಬುದು ಐತಿಹಾಸಿಕವಾಗಿ ಮತ್ತು ಭಾವನಾತ್ಮಕವಾಗಿ ಕನ್ನಡಿಗರಿಗೆ ಹೆಮ್ಮೆ ತರುವ ಸಂಗತಿ.
ಪ್ರಾದೇಶಿಕ ನಾಯಕನೊಬ್ಬ ದೇಶದ ಪ್ರಧಾನಿಯಾದರೆ ರಾಷ್ಟಿçÃಯ ಏಕತೆ ಮತ್ತಿತರ ರಾಷ್ಟಿçÃಯ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬAತೆ ವಾದಿಸುವ ರಾಷ್ಟಿçÃಯ ಪಕ್ಷಗಳಿಗೆ ಸಂಯುಕ್ತ ರಂಗ ಸರ್ಕಾರದ ಪ್ರಧಾನಿಯಾಗಿ ಪ್ರಾದೇಶಿಕ ಪಕ್ಷಗಳ ಬೆಂಬಲದೊAದಿಗೆ ಹತ್ತು ತಿಂಗಳು ಅಧಿಕಾರ ನಡೆಸಿದ ದೇವೇಗೌಡರು ಪ್ರಾದೇಶಿಕತೆ ಮತ್ತು ರಾಷ್ಟಿçÃಯ ಏಕತೆಯನ್ನು ಅತ್ಯಂತ ಚಮತ್ಕಾರಿಕವಾಗಿ ಸಮನ್ವಯಗೊಳಿಸಿ ಇಡೀ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾದೇಶಿಕ ಅಸ್ಮಿತೆಯ ಸೊಗಡಿನ ಜೊತೆಗೆ ರಾಷ್ಟಿçÃಯ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿದರು. ಇದಕ್ಕೆ ಬೇಕಾಗಿದ್ದದ್ದು ಹಿಂದಿ ಭಾಷೆಯ ಜ್ಞಾನವಲ್ಲ ! ಬದಲಿಗೆ ದಟ್ಟ ವಾಸ್ತವ ಅನುಭವದ ಬುದ್ಧಿ. ದೇವೇಗೌಡರು ಬಳಸಿದ್ದು ತಮ್ಮ ಅನುಭವವನ್ನೆ.
ಸಹಜವಾಗಿ ಕನ್ನಡಿಗರಿಗೆ ತಮ್ಮವನೊಬ್ಬ ಪ್ರಧಾನಿಯಾಗಿದ್ದರ ಬಗ್ಗೆ ಭಾವನಾತ್ಮಕವಾಗಿ ಹೆಮ್ಮೆ ಇದ್ದರೂ ಆತನಿಂದ ಕರ್ನಾಟಕಕ್ಕಾದ ಉಪಕಾರವೇನು ಎಂಬುದು ಕೂಡ ಕನ್ನಡಿಗರಿಗೆ ಮುಖ್ಯವಾಗುತ್ತದೆ. ದೇವೇಗೌಡರು ಪ್ರಧಾನಿಯಾಗಿ 25 ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ 10 ತಿಂಗಳ ದೇವೇಗೌಡರ ಪ್ರಧಾನಿಯ ಅವಧಿಯಲ್ಲಿ ಅವರು ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳ ಪಟ್ಟಿಯನ್ನು ಆರು ಕೋಟಿ ಕನ್ನಡಿಗರ ಗಮನಕ್ಕೆ ತರಬಯಸುತ್ತೇವೆ.
1. ಕರ್ನಾಟಕಕ್ಕೆ ಪ್ರತ್ಯೇಕ ರೈಲ್ವೆ ವಲಯ ಮತ್ತು ಹುಬ್ಬಳ್ಳಿ ರೈಲ್ವೆ ವರ್ಕ್ಶಾಪ್‌ಗೆ ಕಾಯಕಲ್ಪ
ಸರೋಜಿನಿ ಮಹಿಷಿ ವರದಿ ಕನ್ನಡಿಗರ ಪಾಲಿಗೆ ಒಂದು ರೀತಿಯ ಬೈಬಲ್ ಇದ್ದಂತೆ 1984 ರಲ್ಲಿ ನೇಮಿಸಲ್ಪಟ್ಟ ಈ ವರದಿ ಮಾಡಿದ ಎರಡು ಪ್ರಮುಖ ಶಿಫಾರಸ್ಸುಗಳೆಂದರೆ ಕರ್ನಾಟಕ್ಕೆ ಬೆಂಗಳೂರು ಕೇಂದ್ರವಾಗಿರುವ ಪ್ರತ್ಯೇಕ ನೈರುತ್ಯ ವಲಯ ಬೇಕು ಮತ್ತು ಹುಬ್ಬಳ್ಳಿಯ ಶತಮಾನದಷ್ಟು ಹಳೆಯದಾದ ವರ್ಕ್ಶಾಪ್‌ನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸದಂತೆ ಅದನ್ನು ಕಾಯಕಲ್ಪಗೊಳಿಸಬೇಕು ಎಂಬುದು. ದೇವೇಗೌಡರು ಪ್ರಧಾನಿಯಾದ ನಾಲ್ಕೇ ತಿಂಗಳಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ರೈಲ್ವೆ ವಲಯವನ್ನು ಮಂಜೂರು ಮಾಡಿ ನವೆಂಬರ್ 1, 1996 ರಂದು ಅದನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲ ಹುಬ್ಬಳ್ಳಿ ವರ್ಕ್ಶಾಪ್‌ನ್ನು ಹುಬ್ಬಳ್ಳಿಯಲ್ಲೇ ಉಳಿಸಿ ಅದನ್ನು ಕಾಯಕಲ್ಪಗೊಳಿಸಲು 50 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದರು. ಹೀಗೆ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಿದ ಕೀರ್ತಿ ದೇವೇಗೌಡರದು.
2. ಹತ್ತು ತಿಂಗಳಲ್ಲಿ ರಾಜ್ಯದಲ್ಲಿ ಬಿತ್ತನೆಯಾದ ರೈಲು ಮಾರ್ಗ 1000 ಕಿ.ಮೀ.
ದೇವೇಗೌಡರು ಪ್ರಧಾನಿಯಾಗುವ ಮುನ್ನ ಅಂದರೆ 1956ರಿಂದ 1995ರ ವರೆಗಿನ ಸುಮಾರು 40 ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಇದ್ದ ರೈಲು ಮಾರ್ಗದ ಉದ್ದ ಸುಮಾರು 3000 ಕಿ.ಮೀ. ಆದರೆ ದೇವೇಗೌಡರು ಪ್ರಧಾನಿಯಾದ 10 ತಿಂಗಳಲ್ಲಿ ಹಸಿರು ನಿಶಾನೆ ತೋರಿಸಿದ ಹೊಸ ರೈಲು ಮಾರ್ಗಗಳ ಉದ್ದ ಸುಮಾರು 1000 ಕಿ.ಮೀ. ಕೊಟ್ಟೂರು-ಹರಿಹರ ಹರಪನಹಳ್ಳಿ, ಕಡೂರು-ಚಿಕ್ಕಮಗಳೂರು-ಸಕಲೇಶಪುರ, ಹಾಸನ-ಶ್ರವಣಬೆಳಗೊಳ-ಬೆಂಗಳೂರು, ಧರ್ಮಾವರಂ-ಪುಟ್ಟಪರ್ತಿ-ಪೆನಗೊAಡ, ಬೆಂಗಳೂರು-ಕನಕಪುರ-ಸತ್ಯಮAಗಲ, ಮುನಿರಾಬಾದ್-ಮೆಹಬೂಬ್ ನಗರ, ಹುಬ್ಬಳ್ಳಿ-ಅಂಕೋಲ-ಕಾರವಾರ ಈ ಮೇಲ್ಕಂಡ ಏಳು ಯೋಜನೆಗಳ ಒಟ್ಟು ಉದ್ದ 1043 ಕಿ.ಮೀ. ಒಟ್ಟು ಅಂದಾಜು ವೆಚ್ಚ 1304 ಕೋಟಿ ರೂಪಾಯಿ. ಇವುಗಳು ಆರಂಭಗೊAಡು ಇವುಗಳ ಪೈಕಿ ಸಾಕಷ್ಟು ಯೋಜನೆಗಳು ಮುಗಿದು ಸಂಚಾರಕ್ಕೆ ಲಭ್ಯವಾಗಿವೆ.
3. ಉತ್ತರ ಕರ್ನಾಟಕಕ್ಕೆ 17 ಹೊಸ ಸಕ್ಕರೆ ಕಾರ್ಖಾನೆಗಳು.
ದೇವೇಗೌಡರು ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಕಷ್ಟವನ್ನು ಅರಿತಿದ್ದರು. ಸಕ್ಕರೆ ಕಾರ್ಖಾನೆಗಳು ತಮಗೆ ಇರುವ ಸೀಮಿತ ಕಬ್ಬು ಅರೆಯುವ ಸಾಮರ್ಥ್ಯದಿಂದಾಗಿ ರೈತರು ಬೆಳೆದ ಎಲ್ಲಾ ಕಬ್ಬನ್ನು ಕೊಂಡುಕೊಳ್ಳಲು ಸಾಧ್ಯವಾಗದೇ ಹೋಗಿದ್ದರಿಂದ ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬಿಗೆ ತಾವೇ ಬೆಂಕಿ ಇಡುವಂತಾಗಿತ್ತು. ಇದನ್ನು ಕಂಡ ದೇವೇಗೌಡರು ಪ್ರಧಾನಿಯಾದ ತಕ್ಷಣವೇ ತುಮಕೂರು, ಬಳ್ಳಾರಿ, ಬೆಳಗಾಂ, ಬಿಜಾಪುರ, ಹಾಸನ, ಧಾರವಾಡ, ಶಿವಮೊಗ್ಗ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಸುಮಾರು 20 ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿದರು. ಅಷ್ಟೇ ಅಲ್ಲ ಹಾಲೀ ಅಸ್ತಿತ್ವದಲ್ಲಿದ್ದ 9 ಖಾಸಗಿ, 7 ಸಹಕಾರಿ ಮತ್ತು ಒಂದು ಸಾರ್ವಜನಿಕ ವಲಯದ ಸಕ್ಕರೆ ಕಾರ್ಖಾನೆಗಳ ವಿಸ್ತರಣೆಗೂ ಅನುಮತಿ ನೀಡಿದರು.
4. ರಾಜ್ಯದ ಯುಕೆಪಿಗೆ ಹರಿದು ಬಂದ ಕೇಂದ್ರದ ಹಣ.
ರಾಜ್ಯದ ನೀರಾವರಿ ಯೋಜನೆಗಳಿಗೆ ಕರ್ನಾಟಕ ಏಕೀಕರಣವಾದಾಗಿನಿಂದ ದೇವೇಗೌಡರು ಪ್ರಧಾನಿಯಾಗುವ ವರೆಗೆ ಕೇಂದ್ರದ ಬಿಡಿಗಾಸೂ ಬಂದಿರಲಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಯುಕೆಪಿಗೆ ಹಣ ನೀಡಿ ಎಂದು ಬಿಜಾಪುರದಲ್ಲಿ ಅಂದಿನ ಪ್ರಧಾನಿ ಇಂದಿರಾಗಾAಧಿಯವರನ್ನು ಕರೆಸಿ ಚಿನ್ನದಲ್ಲಿ ತುಲಾಭಾರ ಮಾಡಿದರೂ ಹಣ ಬಂದಿರಲಿಲ್ಲ. ಆದರೆ ದೇವೇಗೌಡರು ಪ್ರಧಾನಿಯಾದೊಡನೆಯೇ ಯುಕೆಪಿಗೆ ಮತ್ತು ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರದ ಹಣ ಒದಗಿಬರುವಂತೆ ಮಾಡಲು ತಮ್ಮ ಮೆದುಳಿನ ಕೂಸಾಗಿ ಒಂದು ಹೊಸ ರಾಷ್ಟಿçÃಯ ನೀರಾವರಿ ಯೋಜನೆಯನ್ನೇ ಘೋಷಿಸಿದರು. ಅದೇ ಎ.ಐ.ಬಿ.ಪಿ. ಯೋಜನೆ (Accelerated irrigation Benifit Programme) ಈ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ 1996 ರಿಂದ ಹರಿದು ಬಂದಿರುವ ಹಣ ಸುಮಾರು 20 ಸಾವಿರ ಕೋಟಿ ರೂಪಾಯಿಗಳು.
5. ಆಲಮಟ್ಟಿ ಎತ್ತರ
ಆಲಮಟ್ಟಿ ಅಣೆಕಟ್ಟಿನ ಎತ್ತರದ್ದೊಂದು ದೊಡ್ಡ ಕಥೆ. ನಮ್ಮ ಪಾಲಿನ ನೀರಿನ ಹಕ್ಕಿಗನ್ವಯವಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಆಲಮಟ್ಟಿ ಅಣೆಕಟ್ಟೆಯ ಎತ್ತರ 524 ಮೀಟರ್ ಇರಬೇಕೆಂಬುದು ತಂತ್ರಜ್ಞರ ಅಭಿಮತವಾಗಿತ್ತು. ಅದರಂತೆಯೇ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ದೂರದೃಷ್ಟಿಯಿಂದ ಆಲಮಟ್ಟಿ ಅಣೆಕಟ್ಟಿನ ಎತ್ತರ 524 ಮೀಟರ್ ಇರುವಂತೆ ಹೆಡ್‌ವರ್ಕ್ ಡಿಸೈನ್ ಮತ್ತು ಅದಕ್ಕೆ ತಕ್ಕಂತೆ ಇರಬೇಕಾದ 13.7 ಮೀಟರ್ ಎತ್ತರದ ಗೇಟಿನ ಡಿಸೈನ್ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಆಂಧ್ರದ ಒತ್ತಡದಿಂದಾಗಿ ಅದಕ್ಕಿನ್ನೂ ವಿಮೋಚನೆ ಸಿಕ್ಕಿತ್ತಿಲ್ಲ. ಅದೃಷ್ಟವಶಾತ್ ದೇವೇಗೌಡರೇ ಪ್ರಧಾನಿಯಾದರು. ಆದರೆ ಅದು ಸಂಯುಕ್ತ ರಂಗ ಸಮ್ಮಿಶ್ರ ಸರ್ಕಾರ. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಸಂಯುಕ್ತ ರಂಗ ಸರ್ಕಾರದಲ್ಲಿ ಪ್ರಮುಖ ಪಾಲುದಾರ ಪಕ್ಷ. ದೇವೇಗೌಡರು ಇಂತಹ ಪಕ್ಷಗಳ ಮರ್ಜಿಯಲ್ಲಿ ಇರಬೇಕಾಗಿದ್ದ ಪರಿಸ್ಥಿತಿ. ಆದರೆ ದೇವೇಗೌಡರ ರಾಜಕೀಯ ಧೈರ್ಯವನ್ನು ಮೆಚ್ಚಿಕೊಳ್ಳಲೇ ಬೇಕು. ಪ್ರಧಾನಿಯಾದ ಕೆಲವೇ ದಿನಗಳಲ್ಲಿ ಅವರು ಮಾಡಿದ ಮೊದಲ ಕೆಲಸವೆಂದರೆ ಆಲಮಟ್ಟಿ ಅಣೆಕಟ್ಟಿನ ಎತ್ತರದ ಡಿಸೈನ್ ಮತ್ತು ಗೇಟ್ ಡಿಸೈನ್‌ಗಳಿಗೆ ಅನುಮೋದನೆ ನೀಡಿಬಿಟ್ಟರು. ಇದು ದೇವೇಗೌಡರ ಧಾಷ್ಟö್ರ್ಯ.
6. ಬೆಂಗಳೂರು ನಗರಕ್ಕೆ ಭಗೀರಥರಾದ ದೇವೇಗೌಡರು.
ಬೆಂಗಳೂರು ನಗರದ ಜನತೆ ಕುವೆಂಪು ಹೇಳಿದಂತೆ ‘ನಾವ್ ಕುಡಿಯುವ ನೀರ್ ಕಾವೇರಿ’ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು. ಆದರೆ ಈ ವಿಷಯದಲ್ಲಿ ತಲೆದೋರಿದ್ದ ದೊಡ್ಡ ಅಡ್ಡಿಯೊಂದನ್ನು ದೇವೇಗೌಡರು ನಿಭಾಯಿಸಿದ ರೀತಿ ನಿಜಕ್ಕೂ ಭಗೀರಥ ಯತ್ನವೇ ಸರಿ. ದೇವೇಗೌಡರು ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಇಲ್ಲಿ ಇದ್ದದ್ದು, ಕಾಂಗ್ರೆಸ್ ಸರ್ಕಾರ. ಸಾಲದೆಂಬAತೆ ಕೇಂದ್ರದಲ್ಲಿ ಆಗ ಇದ್ದದ್ದು ಕಾಂಗ್ರೆಸ್ ಸರ್ಕಾರವೇ. ಆದರೆ ಕಾವೇರಿ 4ನೇ ಹಂತದ ಕುಡಿಯುವ ನೀರಿನ ಯೋಜನೆಯಲ್ಲಿ ಕರ್ನಾಟಕ 9 ಟಿ.ಎಂ.ಸಿ.ಯಷ್ಟು ನೀರನ್ನು ಬಳಕೆ ಮಾಡಿಕೊಳ್ಳಲು ಆಗಿನ ಕೇಂದ್ರ ಸರ್ಕಾರದ ಅಧಿಕಾರಿಗಳು ಎತ್ತಿದರು. ಕಾವೇರಿ ವಿವಾದ ನ್ಯಾಯ ಮಂಡಳಿಯ ಮುಂದೆ ಇರುವುದರಿಂದ ಇದಕ್ಕೆ ಅನುಮತಿ ನೀಡಲು ಸಾಧ್ಯವಾಗದು ಎಂಬ ವಾದ ಅವರಿಂದ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡು ಕಾಂಗ್ರೆಸ್ ಸರ್ಕಾರಗಳೇ ಆಗಿದ್ದರೂ, ಅವರಿಂದ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಲಿಲ್ಲ. ಮುಂದೆ ದೇವೇಗೌಡರು ಮುಖ್ಯಮಂತ್ರಿಯಾದರು. ದೇವೇಗೌಡರು ಈ ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರಿನ ಯೋಜನೆಗೆ ಹಣವನ್ನು ವ್ಯವಸ್ಥೆ ಮಾಡಿದರೂ, ಕಾವೇರಿ ನೀರಿನ ಬಳಕೆಗೆ ಅಡ್ಡಿ ಎಂಬAತಹ ಸ್ಥಿತಿ ನಿರ್ಮಾಣವಾಯಿತು. ದೇವೇಗೌಡರು ಕಾಂಗ್ರೆಸ್ಸಿನ ಕೇಂದ್ರ ಸರ್ಕಾರದ ಮುಂದೆ ಪರಿಪರಿಯಾಗಿ ಅನೇಕ ಬಾರಿ ಮೊರೆಯಿಟ್ಟರೂ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಲಿಲ್ಲ. ಅದೃಷ್ಟವಶಾತ್ ದೇವೇಗೌಡರೇ ಪ್ರಧಾನಿಯಾಗಿದ್ದರಿಂದ ಬೆಂಗಳೂರಿನ ಜನರು ಬದುಕಿದರು. ಸ್ವಯಂ ದೇವೇಗೌಡರಿಂದ ಸಂಬAಧಿಸಿದ ಉನ್ನತಾಧಿಕಾರಿಗಳಿಗೆ ಬುಲಾವ್. ಕಡತಗಳ ಸಮೇತ ಅಧಿಕಾರಿಗಳು ಹಾಜರ್, ಅವರು ಎತ್ತಿದ ಆಕ್ಷೇಪಗಳಿಗೆಲ್ಲಾ ಗೌಡರಿಂದ ಮನವರಿಕೆಯಾಗುವಂತಹ ಉತ್ತರ. ನ್ಯಾಯಮಂಡಳಿ, ನೀರಾವರಿ ಇಲಾಖೆ, ಜನಸಂಪನ್ಮೂಲ ಇಲಾಖೆ – ಇವುಗಳಿಗೆಲ್ಲಾ ಸ್ಪಷ್ಟ ತಿಳುವಳಿಕೆಯ ಮಾರ್ಗದರ್ಶನ ಗೌಡರಿಂದ. ಪರಿಣಾಮವಾಗಿ ಕಾವೇರಿ 4ನೇ ಹಂತದ ಬೆಂಗಳೂರು ನಗರದ ಕುಡಿಯುವ ನೀರು ಸರಬರಾಜು ಯೋಜನೆಯ ಕಡತಕ್ಕೆ ಮುಕ್ತಿ. ಇದು ನಮ್ಮಲ್ಲಿ ಎಷ್ಟು ಜನಕ್ಕೆ ತಾನೇ ಗೊತ್ತು ?
7 ಭದ್ರಾವತಿ ಉಕ್ಕಿನ ಕಾರ್ಖಾನೆ ಉಳಿಸಿದ್ದು
ಸರ್. ಎಂ .ವಿಶ್ವೇಶ್ವರಯ್ಯನವರು ಸ್ಥಾಪಿಸಿದ್ದ ಚಾರಿತ್ರಿಕ ಭದ್ರಾವತಿ ಉಕ್ಕಿನ ಕಾರ್ಖಾನೆ ನಷ್ಟಕ್ಕೆ ಒಳಗಾಗಿ ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಆಗ ಈ ಐತಿಹಾಸಿಕ ಕಾರ್ಖಾನೆಯನ್ನು ಉಳಿಸಲು ಮತ್ತು ಕಾರ್ಮಿಕರು ಬೀದಿ ಪಾಲಾಗದಂತೆ ಮಾಡಲು ಅದನ್ನು ಭಾರತ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್)ಗೆ ಸೇರಿಸುವ ಮಹತ್ವದ ತೀರ್ಮಾನವನ್ನು ಮಾಡಿದ್ದು ದೇವೇಗೌಡರೇ.
8. ರಕ್ಷಣಾ ಇಲಾಖೆಯ ಬೆಂಗಳೂರು ನಗರದ ಅಮೂಲ್ಯ 80 ಎಕರೆ ಜಾಗ ಬೆಂಗಳೂರಿನ ಸಾರ್ವಜನಿಕರಿಗೆ ಲಭ್ಯವಾದದು.
ಬೆಂಗಳೂರು ಮಹಾನಗರದಲ್ಲಿ ಅಲ್ಲಲ್ಲೇ ವಿವಿಧ ಬಡಾವಣೆಗಳಲ್ಲಿ ಸುಮಾರು 80 ಎಕರೆ ಜಾಗ ರಕ್ಷಣಾ ಇಲಾಖೆಗೆ ಸೇರಿತ್ತು. ಅವರು ಅದನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿದ್ದರಿಂದ ಯಾವುದೇ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯನ್ನು ಬೆಂಗಳೂರು ನಗರದಲ್ಲಿ ಕೈಗೊಳ್ಳಲು ಇದು ಅಡ್ಡಿಯಾಗಿತ್ತು. ಕೇಂದ್ರದಲ್ಲಿ ಜಾಫರ್ ಷರೀಫ್, ಕೆಂಗಲ್ ಹನುಮಂತಯ್ಯನವರAತಹ ಘಟಾನುಘಟಿಗಳು ಇದ್ದರೂ ಈ ಪ್ರದೇಶಗಳನ್ನು ರಕ್ಷಣಾ ಇಲಾಖೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಧಾನಿಯಾದ ತಕ್ಷಣವೇ ದೇವೇಗೌಡರು ಈ ಅಮೂಲ್ಯ 80 ಎಕರೆ ಜಾಗವನ್ನು ರಕ್ಷಣಾ ಇಲಾಖೆಯಿಂದ ಬಿಡಿಸಿ ಬಿಬಿಎಂಪಿಗೆ ಸ್ಥಳಾಂತರಿಸಿದರು.
9. ಕೇಂದ್ರೋದ್ಯಮಗಳು ಮತ್ತು ಕಾರ್ಮಿಕರು
ಬೆಂಗಳೂರಿನ ಐಟಿಐ ಕಾರ್ಖಾನೆ, ಹೆಚ್.ಎಂಟಿ. ಕಾರ್ಖಾನೆ, ಬಿಇಎಂಎಲ್, ಕಾರ್ಖಾನೆ – ಇವುಗಳು ನಷ್ಟದಲ್ಲಿವೆ ಎಂಬ ಕಾರಣದಿಂದ ಇವುಗಳನ್ನು ಮುಚ್ಚುವ ಇಲ್ಲವೇ ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರಗಳು ನಡೆಸಿದ್ದವು. ಬಡ ಕನ್ನಡ ಕಾರ್ಮಿಕರು ಬೀದಿ ಪಾಲಾಗಬೇಕಾಗಿತ್ತು. ಆದರೆ ದೇವೇಗೌಡರು ಪ್ರಧಾನಿಯಾದೊಡನೆಯೇ ಇವುಗಳಿಗೆ ಹಣ ಬಿಡುಗಡೆ ಮಾಡಿ ಕಾಯಕಲ್ಪಗೊಳಿಸಿ ಕಾರ್ಮಿಕರ ಹಿತರಕ್ಷಣೆ ಮಾಡಿದರ. ಅಷ್ಟೇ ಅಲ್ಲ ನಗರದ ಹೆಮ್ಮೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ಸುಮಾರು 30 ಕೋಟಿ ರೂಪಾಯಿಗಳನ್ನು ನೀಡಿದರು.
10. ಬೆಂಗಳೂರು ನಗರಕ್ಕೆ ಮೂಲಭೂತ ಸೌಕರ್ಯ
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ತಪ್ಪಿಸಲು ತಾವು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ನಗರದರ್ಶನದಲ್ಲಿ ಕಂಡ ಸಮಸ್ಯೆಗಳಿಗೆ ಪರಿಹಾರವೆಂಬAತೆ ದೇವೇಗೌಡರು ಪ್ರಧಾನಿಯಾದೊಡನೆಯೇ ಕೃಷ್ಣರಾಜಪುರಂ ಬಳಿಯ ತಂತಿಕಮಾನು ಸೇತುವೆ, ವರ್ತುಲ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಇವುಗಳಿಗೆ ಚಾಲನೆ ನೀಡಿದರು.
11. ಸೀಬರ್ಡ್, ಒಪೆಕ್ ಆಸ್ಪತ್ರೆ ಇತ್ಯಾದಿ
ರಾಜ್ಯದ ಪ್ರಮುಖ ಯೋಜನೆಗಳಲ್ಲೊಂದಾದ ಸೀಬರ್ಡ್ ಯೋಜನೆಗೆ 1996-97ನೇ ಸಾಲಿನಲ್ಲಿ 4.65 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು. 1997-98ನೇ ಸಾಲಿಗೆ 27.50 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಸೀಬರ್ಡ್ ಯೋಜನೆಯನ್ನು ಪೂರ್ಣಗೊಳಿಸಲು ಈ ಮೊತ್ತದ ಹಣ ಸಾಕಾಗಿತ್ತು ಎಂಬುದು ಪರಿಣತರ ಅಭಿಪ್ರಾಯ.
ರಾಯಚೂರಿನಲ್ಲಿ ಸ್ಥಾಪಿತವಾಗುತ್ತಿರುವ ಒಪೆಕ್ ಆಸ್ಪತ್ರೆಗೆ 30 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿ ಹೈದರಾಬಾದ್ ಕರ್ನಾಟಕ ಭಾಗದ ಜನರ ಮೂಲಭೂತ ಅವಶ್ಯಕತೆಯೊಂದನ್ನು ಪೂರೈಸಿದ ಯಶಸ್ಸು ದೇವೇಗೌಡರಿಗೆ ಸಲ್ಲುತ್ತದೆ.
ಹುಡ್ಕೋ ನೆರವಿನಿಂದ ರಾಜ್ಯದ 32 ಪಟ್ಟಣಗಳ ಅಭಿವೃದ್ಧಿಗೆಂದು (ಕುಡಿಯುವ ನೀರು ಸರಬರಾಜು, ವಸತಿ ನಿರ್ಮಾಣ.... ಇತ್ಯಾದಿ) 150 ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ಬಿಡುಗಡೆ ಮಾಡುವ ಮೂಲಕ ದೇವೇಗೌಡರು ರಾಜ್ಯದ ಅಭಿವದ್ಧಿ ಪಥದಲ್ಲಿ ಇನ್ನೊಂದು ಮೈಲಿಗಲ್ಲನ್ನು ಸ್ಥಾಪಿಸಿದರು.
12. ಗ್ರಾಮೀಣಾಭಿವೃದ್ಧಿಗೆ ವಿಶೇಷ ಆದ್ಯತೆ
'ಚಪ್ಪಲಿ ಮೆಟ್ಟಿದವನಿಗೆ ಮಾತ್ರ ಗೊತ್ತು ಅದು ಎಲ್ಲಿ ಕಚ್ಚುತ್ತದೆ' ಎಂಬುದು ಇಂಗ್ಲೀಷ್ ಗಾದೆಯ ಮಾತು. ಬಂಜೆ ಹೆರಿಗೆ ಬೇನೆಯನ್ನು ಅರಿಯಳು ಎಂಬ ಮಾತೂ ಈ ಅರ್ಥದ್ದೇ. ಹಳ್ಳಿಗರ ಪಾಡನ್ನು ಹಳ್ಳಿಗನಲ್ಲದೆ ಬೇರೆಯವರು ಹೇಗೆ ಬಲ್ಲರು? ಈ ದೇಶಕ್ಕೊಬ್ಬ ಹಳ್ಳಿಗಾಡಿನಿಂದ ಬಂದವನು ಪ್ರಧಾನಿಯಾಗಿದ್ದರ ಫಲ ಹಳ್ಳಿಗರಿಗೆ ದೊರೆಯದಿದ್ದರೆ ಅಂತಹ ಪದವಿ ಇದ್ದರೆಷ್ಟು ಹೋದರೆಷ್ಟು ಎಂದು ಯೋಚಿಸಿದವರು ದೇವೇಗೌಡರು. ಒಟ್ಟಾರೆ ರಾಷ್ಟçದ ಎಲ್ಲ ಹಳ್ಳಿಗರ ಅಭಿವೃದ್ಧಿಗೆ, ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಗಂಭೀರ ಗಮನ ಹರಿಸಿದರು. ಇದರಲ್ಲಿ ಕರ್ನಾಟಕವೂ ಸೇರದೇ ಇರಲಿಲ್ಲ. ಹೀಗಾಗಿ 'ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಧಿ' (Rural Infrastructure Development Fun ) ಯಿಂದ ನಮ್ಮ ರಾಜ್ಯದ ಹಳ್ಳಿಗಳಿಗೆ ಕುಡಿಯುವ ನೀರು, ಶೌಚಾಲಯ, ರಸ್ತೆ ಇತ್ಯಾದಿ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು 1996-97ನೇ ಸಾಲಿಗೆ 172 ಕೋಟಿ ಮತ್ತು 1997-98ನೇ ಸಾಲಿಗೆ 634 ಕೋಟಿ ರೂಪಾಯಿಗಳನ್ನು ನಬಾರ್ಡ್ನಿಂದ ಸಾಲ ರೂಪದಲ್ಲಿ ಕೊಡಿಸಿಕೊಡುವಲ್ಲಿ ದೇವೇಗೌಡರು ಯಶಸ್ವಿಯಾದರು.
13. ವಿದ್ಯುತ್ : ಗೌಡರ ಕೊಡುಗೆ ಏನು ?
ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿದೆಯಷ್ಟೆ. ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸದ ಹೊರತು ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂಬುದಿಲ್ಲ. ಅಪಸ್ವರಗಳು ಏನೇ ಇರಲಿ, ಟೀಕೆಗಳು ಏನೇ ಬರಲಿ ರಾಜ್ಯದಲ್ಲಿ ಜನರು ಬೆಳಕು ಕಾಣುವಂತಾಗಬೇಕಾದರೆ ಕೊಜೆಂಟ್ರಿಕ್ಸ್ ಮತ್ತು ಕೈಗಾ ಸ್ಥಾವರಗಳು ಕಾರ್ಯಪ್ರವೃತ್ತವಾಗಲೇಬೇಕು ಎಂಬುದು ದೇವೇಗೌಡರ ದಿಟ್ಟನಿಲುವು. ಆದುದರಿಂದಲೇ ಕೊಜೆಂಟ್ರಿಕ್ಸ್ ವಿಷಯದಲ್ಲಿ ದೇವೇಗೌಡರು ಅಂತಿಮ ಮಂಜೂರಾತಿ ನೀಡುವ ಕೆಚ್ಚು ತೋರಿ ತಮ್ಮ ವಿರುದ್ಧದ ಟೀಕೆಗಳನ್ನೆಲ್ಲಾ ತಾವೇ ಸಹಿಸಿಕೊಂಡರು. ಏಕೆಂದರೆ ಅವರಿಗೆ ಮುಖ್ಯವಾಗಿದ್ದುದು ಒಂದು ಬೃಹತ್ ವಿದ್ಯುತ್ ಉತ್ಪಾದನಾ ಘಟಕದ ತುರ್ತು ಕಾರ್ಯತಂತ್ರವೇ ಹೊರತು ಕೀಳ್ಮಟ್ಟದ ರಾಜಕೀಯ ಕುತಂತ್ರಗಾರಿಕೆಯಲ್ಲ. ಮುಂದೆ ನ್ಯಾಯಾಲಯ ಕೊಜೆಂಟ್ರಿಕ್ಸ್‌ಗೆ ಅನುಮತಿ ನೀಡಿದರೂ ರಾಜ್ಯ ಸರ್ಕಾರದ ಅಸಹಕಾರದಿಂದ ಆ ಕಂಪನಿಯೇ ಆಸಕ್ತಿ ಕಳೆದುಕೊಂಡು ವಾಪಸಾಯಿತು.
ಹಾಗೆಯೇ ಕೈಗಾ ವಿಷಯದಲ್ಲೂ ಕೂಡ. ಕೈಗಾ ಸ್ಥಾವರದ ಎರಡು ಗುಮ್ಮಟಗಳು ಬಿರುಕುಬಿಟ್ಟಾಗಿನಿಂದ ಅದರ ಬಗ್ಗೆ ಯಾರು ಆಸಕ್ತಿಯನ್ನೇ ತೋರಿಸಿರಲಿಲ್ಲ. ಆದರೆ ದೇವೇಗೌಡರು ಪ್ರಧಾನಿಯಾದ ಬಳಿಕ ಕೈಗಾ ವಿದ್ಯುತ್ ಸ್ಥಾವರ ಕರ‍್ಯಾರಂಭಕ್ಕೆ ಅಗತ್ಯವಾದ 574ಕೋಟಿ ರೂಪಾಯಿಗಳನ್ನು ಎರಡು ಕಂತುಗಳಲ್ಲಿ ಅಂದರೆ 1996-97ನೇ ಸಾಲಿಗೆ 306 ಕೋಟಿ, 1997-98 ನೇ ಸಾಲಿಗೆ 268 ಕೋಟಿ ರೂಪಾಯಿ ಮಂಜೂರು ಮಾಡಿದರು. ಹೀಗಾಗಿ ಕೈಗಾದ ಕರ‍್ಯಾರಂಭಕ್ಕೆ ಹಣಕಾಸಿನ ಮುಗ್ಗಟ್ಟು ಅಡ್ಡಿಯಾಗದಂತೆ ನೋಡಿಕೊಂಡ ಕೀರ್ತಿ ದೇವೇಗೌಡರದ್ದು. ಇಷ್ಟೇ ಅಲ್ಲದೆ ಬೇರೆ ಬೇರೆ ಬ್ರೂಯರಿಗಳು ಹಾಗೂ ಮತ್ತಿತರ ಘಟಕಗಳಿಂದ 1966 ಮೆಗಾವಾಟ್‌ನಷ್ಟು ಶಕ್ತಿ ಉತ್ಪಾದನೆಗೆ ಅಗತ್ಯವಾದ ಪ್ರಮಾಣದಲ್ಲಿ ದ್ರವ ಇಂಧನವನ್ನು (ನ್ಯಾಫ್ತಾ) ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸುವಲ್ಲಿಯೂ ಗೌಡರು ಯಶಸ್ವಿಯಾದರು.
14. ದೆಹಲಿಯಲ್ಲಿ ಕನ್ನಡಿಗರಿಗೆ ಸಿಕ್ಕ ಬೆಲೆ
ಸಾಮಾನ್ಯವಾಗಿ ದೆಹಲಿಯ ರಾಜಕಾರಣ ಹಿಂದಿ ಪ್ರಭಾವೀ ವಲಯದ್ದೇ. ಅದೊಂದು ಆರ್ಯ ಸಂಸ್ಕೃತಿ. ಅದರಲ್ಲಿ ದಕ್ಷಿಣ ಭಾರತದ ದ್ರಾವಿಡರು, ಅದರಲ್ಲೂ ಕನ್ನಡಿಗರಿಗೆ ಪ್ರಾತಿನಿಧ್ಯ ಸಿಗಬೇಕೆಂದರೆ ಕಷ್ಟ ಎಷ್ಟೆಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ದೇವೇಗೌಡರು ಪ್ರಧಾನಿಯಾದೊಡನೆಯೇ ಡಾ.ರಾಜ್‌ಕುಮಾರ್‌ರವರಿಗೆ ರಾಷ್ಟಿçÃಯ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು, ಕೇಂದ್ರ ಯೋಜನಾ ಆಯೋಗದಲ್ಲಿ ಕನ್ನಡಿಗ ಆರ್ಥಶಾಸ್ತçಜ್ಞರು ನೇಮಕಗೊಂಡದ್ದು, ಕೇಂದ್ರ ಲೋಕಸೇವಾ ಆಯೋಗದಲ್ಲಿ ಕನ್ನಡಿಗನೊಬ್ಬ ಸದಸ್ಯನಾದದ್ದು, ರೈಲ್ವೇ ನೇಮಕಾತಿ ಮಂಡಳಿಯ ಅಧ್ಯಕ್ಷನಾಗಿ ಕನ್ನಡಿಗನೊಬ್ಬ ನೇಮಕಗೊಂಡದ್ದು – ಇಂತಹವುಗಳೆಲ್ಲಾ ಸಾಧ್ಯವಾದದ್ದಕ್ಕೆ ಕಾರಣ ಕನ್ನಡಿಗನೊಬ್ಬ ಪ್ರಧಾನಿಯಾದದ್ದು.
15. ದೇಶದ ಬಡವರಿಗೆಲ್ಲಾ ಪಡಿತರ ಮತ್ತು ಕರ್ನಾಟಕದ ಅನ್ನಭಾಗ್ಯಕ್ಕೆ ಅಂಕುರ
ರಾಜ್ಯದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಅನ್ನಭಾಗ್ಯ ಯೋಜನೆಗೆ ಒಂದು ರೀತಿಯಲ್ಲಿ ಅಂಕುರಾರ್ಪಣೆಯಾದದ್ದು ದೇವೇಗೌಡರು ಮುಖ್ಯಮಂತ್ರಿಯಾದಾಗ ಮತ್ತು ನಂತರ ಪ್ರಧಾನಿಯಾದಾಗ. ಮುಖ್ಯಮಂತ್ರಿಯಾದಾಗ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯನ್ನು ನಗರದ ಬಡವರಿಗೂ ವಿಸ್ತರಿಸಿದರು. ನಂತರ ಪ್ರಧಾನಿಯಾದ ಮೇಲೆ ಇದನ್ನು ದೇಶದ ಎಲ್ಲಾ ಬಡವರಿಗೂ ವಿಸ್ತರಿಸಿದರು. ಆ ಸಂದರ್ಭದಲ್ಲಿ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಗೆಂದೇ ಆಹಾರ ಧಾನ್ಯಗಳನ್ನು ಧಾರಾಳವಾಗಿ ಕರ್ನಾಟಕ್ಕೆ ಬಿಡುಗಡೆ ಮಾಡಿದರು. ಅದೇ ವ್ಯವಸ್ಥೆ ಈಗಲೂ ಮುಂದುವರೆದಿದೆ. ಅದರಿಂದಲೇ ಅನ್ನಭಾಗ್ಯ ಯಶಸ್ವಿಯಾಗಿದೆ. ಅಂದಮೇಲೆ ಇದರ ಹಿಂದಿನ ಪ್ರೇರಕ ಶಕ್ತಿ ದೇವೇಗೌಡರಲ್ಲವೇ?
16. ದೇವೇಗೌಡರ ಕೊಡುಗೆಗೆ ಏಕಿಷ್ಟು ಮಹತ್ವ ?
ಪ್ರಧಾನಿಯಾಗಿದ್ದ ಹತ್ತೇ ತಿಂಗಳಲ್ಲಿ ಉತ್ತರ ಕರ್ನಾಟಕಕ್ಕೆ ಹರಿದು ಬಂದ ಹಣ ಸುಮಾರು 1600 ಕೋಟಿ ರೂಪಾಯಿ. ಅದರಲ್ಲೂ ಹಿಂದೆಲ್ಲಾದರೂ ಇಷ್ಟು ಬೃಹತ್ ಮೊತ್ತದ ನೆರವನ್ನು ಹತ್ತೇ ತಿಂಗಳಲ್ಲಿ ಪಡೆದುಕೊಳ್ಳಲು ಹಿಂದೆಲ್ಲಾದರೂ ಸಾಧ್ಯವಿತ್ತೇ ಎಂಬುದನ್ನು ನಾವೆಲ್ಲರೂ ನಿರ್ವಿಕಾರ ಮನಸ್ಸಿನಿಂದ ಯೋಚಿಸಬೇಕು. ಕೇಂದ್ರದ ನೆರವು ಪಡೆಯಲು ಹಿಂದೆಲ್ಲಾ ರಾಜ್ಯ ಸರ್ಕಾರ ಭಿಕ್ಷಾಪಾತ್ರೆ ಹಿಡಿದುಕೊಂಡು ದೆಹಲಿಯ ಆಳರಸರ ಮುಂದೆ ಅಂಗಲಾಚುತ್ತಿದ್ದ ಚಿತ್ರವನ್ನು ಜ್ಞಾಪಿಸಿಕೊಳ್ಳಿ. ಆಗೆಲ್ಲಾ ದೆಹಲಿಯಲ್ಲಿ ಒತ್ತಡ ತರಲು ರಾಜ್ಯದಿಂದ ಅದೆಷ್ಟು ಬಾರಿ ದೆಹಲಿಗೆ ದಂಡಯಾತ್ರೆ ಹೋಗಬೇಕಾಗುತ್ತಿತ್ತು. ಅದೆಷ್ಟು ನಿಯೋಗಗಳನ್ನು ಕೊಂಡೊಯ್ಯಬೇಕಾಗುತ್ತಿತ್ತು. ಅದೆಷ್ಟು ಪತ್ರವ್ಯವಹಾರಗಳನ್ನು ನಡೆಸಬೇಕಾಗುತ್ತಿತ್ತು. ಅದೆಂತೆಂಥ ಷರತ್ತುಗಳನ್ನು ಪಾಲಿಸಬೇಕಾಗುತ್ತಿತ್ತು. ಅಧಿಕಾರಶಾಹಿಯ ಕೆಂಪುಪಟ್ಟಿಯಿAದ ಕಡತ ಮುಕ್ತಿಗೊಳ್ಳಲು ಅದೆಷ್ಟು ಸಮಯ ಹಿಡಿಯುತ್ತಿತ್ತು ಎಂಬುದನ್ನು ಯೋಚಿಸಿದಲ್ಲಿ ಮತ್ತು ಈಗಲೂ ಅಂತಹುದೇ ಪರಿಸ್ಥಿತಿ ಇರುವಲ್ಲಿ ದೇವೇಗೌಡರ ಕಾಲದಲ್ಲಿ ರಾಜ್ಯಕ್ಕೆ ಹರಿದು ಬಂದ ಸಾವಿರಾರು ಕೋಟಿ ರೂಪಾಯಿಗಳ ಮಹತ್ವ ಅರ್ಥವಾಗುತ್ತದೆ.