ಹೆಚ್.ಡಿ ಕುಮಾರ ಸ್ವಾಮಿ. ಕರುನಾಡು ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ಜನಪರ ಚಿಂತನೆ, ಕಾಳಜಿ, ದೂರದೃಷ್ಟಿತ್ವ ಹೊಂದಿರುವ ಅಪರೂಪದ ಜನನಾಯಕ. ಪ್ರಜೆಗಳ ನೋವು ಆಲಿಸಲು ಪ್ರಜೆಗಳ ಬಳಿಯೇ ತೆರಳಿ ಅವರ ನೋವು ನಿವಾರಿಸಿದ ಹೃದಯವಂತ ರಾಜಕಾರಣಿ. ಎರಡು ಬಾರಿ ಮುಖ್ಯಮಂತ್ರಿಯಾಗಿ (2006 ರಿಂದ 2007 ಹಾಗೂ 2018 ರಿಂದ 2019) ಕರ್ನಾಟಕ ರಾಜ್ಯವನ್ನು ಮುನ್ನಡೆಸಿದ ಧೀಮಂತ ನಾಯಕ. ಜನತಾ ದರ್ಶನದ ಹರಿಕಾರ, ಗ್ರಾಮವಾಸ್ತವ್ಯದ ಗುರಿಕಾರ. ರೈತ ಪರ ಕಾಳಜಿಯಿಂದ ರೈತರಿಗೆ ನಾನಾ ಯೋಜನೆಗಳ ಜೊತೆಗೆ ರೈತನನ್ನು ಸಾಲ ಮುಕ್ತಗೊಳಿಸಿದ ಮಣ್ಣಿನ ಮಗ. ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷನಾಗಿ ಕರುನಾಡಿನ ಪ್ರಾದೇಶಿಕ ಪಕ್ಷಕ್ಕೆ ರಾಷ್ಟç ಮನ್ನಣೆ ಗಳಿಸಿಕೊಟ್ಟ ಹೋರಾಟಗಾರ. ಅಪ್ಪನಿಗೆ ತಕ್ಕ ಮಗನೆಂಬAತೆ ಈ ದೇಶದ ಪ್ರಧಾನಮಂತ್ರಿಯಾಗಿ ದೇಶವಾಳಿದ ಹೆಚ್.ಡಿ ದೇವೇಗೌಡ ಅವರ ರಾಜಕೀಯ ಹೆಜ್ಜೆಗಳನ್ನು ಅನುಸರಿಸಿ ಪರಿಪಕ್ವ ನಾಯಕನೆನಿಸಿಕೊಂಡವರು ಹೆಚ್.ಡಿ ಕುಮಾರಸ್ವಾಮಿ.

ಕುಮಾರಸ್ವಾಮಿ ಕನಸು-ನನಸು: ಹೆಚ್.ಡಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಹೊಳೇನರಸೀಪುರದ ತಾಲ್ಲೂಕಿನ ಹರದನಹಳ್ಳಿಯಲ್ಲಿ 1959ರ ಡಿಸೆಂಬರ್ 16ರಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಚೆನ್ನಮ್ಮ ಅವರ ಪುತ್ರನಾಗಿ ಜನಿಸಿದ್ರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾಸನದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಬೆಂಗಳೂರಿನ ಎಂ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್, ವಿಜಯ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಆದ್ರೆ ಇವರು ವೃತ್ತಿ ಜೀವನದ ಆರಂಭದಲ್ಲಿ ರಾಜಕೀಯಕ್ಕಿಂತ ಚಿತ್ರೋದ್ಯಮದತ್ತ ಹೆಚ್ಚು ಒಲವು ತೋರಿದರು. ಆ ಬಳಿಕ ಚಿತ್ರ ನಿರ್ಮಾಪಕವಾಗಿ, ಚಿತ್ರ ಪ್ರದರ್ಶಕರಾಗಿ, ಚಿತ್ರ ವಿತರಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸು ಗಳಿಸಿ, ಚಂದನವನದಲ್ಲಿ ತನ್ನದೇ ಛಾಪು ಮೂಡಿಸಿದರು. ಆದ್ರೆ ಕುಮಾರಸ್ವಾಮಿಯವರನ್ನು ರಾಜಕೀಯ ತನ್ನತ್ತ ಸೆಳೆದೇ ಬಿಡ್ತು.

ಕುಮಾರಸ್ವಾಮಿ ರಾಜಕೀಯ ಏಳು ಬೀಳು: ಕುಮಾರಸ್ವಾಮಿ ಅವರು ರಾಜಕೀಯ ಪ್ರವೇಶ ಮಾಡಿದ್ದು 1996ರಲ್ಲಿ. ಕನಕಪುರ ಲೋಕಸಭಾ ಕ್ಷೇತ್ರವನ್ನು ಗೆದ್ದು ಪ್ರಪ್ರಧಮ ಬಾರಿ ಸಂಸದನಾಗಿ ಲೋಕಸಭೆ ಪ್ರವೇಶಿಸಿದರು. ಆದ್ರೆ 1998ರಲ್ಲಿ ಇದೇ ಕನಕಪುರ ಕ್ಷೇತ್ರಕ್ಕೆ ಮರುಚುನಾವಣೆಯಾದಾದ ಎಂ.ವಿ.ಚAದ್ರಶೇಖರ್ ಅವರ ಮುಂದೆ ಸೋಲನುಭವಿಸಿದರು. 1999ರಲ್ಲಿ ಸಾತನೂರು ಕ್ಷೇತ್ರದಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಡಿ.ಕೆ ಶಿವಕುಮಾರ್ ಅವರಿಗೆ ಮಣಿದರು. ಹೀಗೆ ರಾಜಕೀಯ ಜೀವನದ ಆರಂಭ ಸಿಹಿ ಕಹಿಯಿಂದ ತುಂಬಿತ್ತು. ಆದ್ರೆ ಎರಡನ್ನೂ ಸಮನಾಗಿ ಸ್ವೀಕರಿಸಿ ನವನಾಯಕನಾಗಲು ಮುನ್ನುಗಿದರು. ಅಪ್ಪನ ರಾಜಕೀಯ ಗರಡಿಯಲ್ಲಿ ಪಳಗಿದರು. 2004ರಲ್ಲಿ ರಾಮನಗರ ವಿಧಾನಸಭಾಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದ್ರು. 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಹಾಗಾಗಿ ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ಜೊತೆ ಜೆಡಿಎಸ್ ಜೊತೆ ಮೈತ್ರಿ ಮಾಡಿತು. ಆದ್ರೆ 2006ರಲ್ಲಿ ಧರಂಸಿAಗ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಮತ್ತೆ ಅತಂತ್ರತೆ ಕಾಡಿತು. ಫೆಬ್ರವರಿ 4 2006ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಜೆಡಿಎಸ್ ಮತ್ತೆ ಸರ್ಕಾರ ರಚಿಸಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಮುಖ್ಯಮಂತ್ರಿಯಾಗಿ ಸುವರ್ಣಕಾಲ: ಹೆಚ್.ಡಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಳ್ವಿಕೆಯ ಕಾಲವನ್ನು ಸುವರ್ಣ ಕಾಲ ಎಂದೇ ಬಣ್ಣಿಸಲಾಯಿತು. ರಾಜ್ಯದ ದೀನ ದಲಿತರ, ರೈತರ, ಮಹಿಳೆಯರ, ಮಕ್ಕಳ ಪರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಯಿತು. ರೈತರ ಸಾಲಮನ್ನಾದಿಂದ ಹಿಡಿದು ಹತ್ತು ಹಲವು ಸಣ್ಣ ಮತ್ತು ದೊಡ್ಡ ನೀರಾವರಿ ಯೋಜನೆಗಳ ವರೆಗೆ, ಸರ್ಕಾರಿ ಶಾಲೆ ಕಾಲೇಜುಗಳ ಸ್ಥಾಪನೆಯಿಂದ ಹಿಡಿದು ಮಹಿಳಾ ಸಬಲೀಕರಣದ ವರೆಗೆ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಜನತಾ ದರ್ಶನದ ಮೂಲಕ ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಆರಿಸಿ ಪರಿಹರಿಸುವ ಅತ್ಯದ್ಭುತ ಕಾರ್ಯಕ್ರಮ ಹಮ್ಮಿಕೊಂಡರು. ಇದರಿಂದ ಅದೆಷ್ಟೋ ನೊಂದವರಿಗೆ ನ್ಯಾಯದ ಪರಿಹಾರ ಸಿಕ್ತು. ಇನ್ನು ಗ್ರಾಮವಾಸ್ತವ್ಯದ ಮೂಲಕ ಜನರಿದ್ದಲ್ಲಿಗೆ ದೊರೆ ಹೋಗಿ ಅವರ ಮನೆಯಲ್ಲಿ ವಾಸಿಸಿ ಆ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ವಿನೂತನ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಸಿದರು. ಗ್ರಾಮವಾಸ್ತವ್ಯ ಇಡೀ ದೇಶಕ್ಕೆ ಮಾದರಿಯಾಯಿತು, ಎಷ್ಟೋ ಗ್ರಾಮಗಳು ಹೊಸತನವನ್ನು ಕಂಡವು. ಸಮಸ್ಯೆಗಳಿಂದ ಮುಕ್ತವಾದವು. ಹೀಗೆ ಕುಮಾರಸ್ವಾಮಿಯವರು ಕೆಲವೇ ತಿಂಗಳ ತಮ್ಮ ಅಧಿಕಾರವಧಿಯಲ್ಲಿ ಅತ್ಯದ್ಭುತ ಕೆಲಸ ಮಾಡಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದರು. ಯುವಕರಿಗೆ ಕುಮಾರಣ್ಣನಾಗಿ ಸ್ಫೂರ್ತಿಯಾದರು.

ಎರಡನೇ ಬಾರಿ ಮುಖ್ಯಮಂತ್ರಿ: 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ಪಡೆಯಲೇ ಬೇಕಾಯಿತು. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ನೇತೃತ್ವದ ಹೊಣೆಯನ್ನು ಹೆಚ್.ಡಿ ಕುಮಾರಸ್ವಾಮಿ ವಹಿಸಿಕೊಂಡರು. 2018 ಮೇ 23ರಂದು ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ತಮ್ಮ ಆಡಳಿತಾವಧಿಯಲ್ಲಿ ಮತ್ತಷ್ಟು ಜನಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದರು. ರೈತ ಪರ ಯೋಜನೆಗಳನ್ನು ರೂಪಿಸಿ ಜನಮನಗೆದ್ದರು. ಆದ್ರೆ ಆಪರೇಷನ್ ಕಮಲದ ಅಬ್ಬರದಿಂದಾಗಿ 23 ಜುಲೈ 2019ರಲ್ಲಿ ರಾಜೀನಾಮೆ ನೀಡಬೇಕಾಯಿತು.

ಜೆಡಿಎಸ್ ಪಕ್ಷದ ದಕ್ಷ ಸಾರಥಿ: ಹೆಚ್.ಡಿ ಕುಮಾರಸ್ವಾಮಿ ಒಬ್ಬ ಹೋರಾಟಗಾರ. ಛಲದಂಕ ಮಲ್ಲ. ಸೋಲನ್ನು ಗೆಲುವಾಗಿ ಪರಿವರ್ತಿಸಿ ಫೀನಿಕ್ಸ್ನಂತೆ ಎದ್ದು ಬರುವ ಛಾತಿಯುಳ್ಳವರು. ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಕ್ಷಕ್ಕೆ ಹೊಸತನ ತಂದ್ರು. ಯುವನಾಯಕರಿಗೆ ಅವಕಾಶ ನೀಡಿದ್ರು. ಹೊಸ ನಾಯಕತ್ವ ಹುಟ್ಟು ಹಾಕಿದ್ರು. ತಮ್ಮ ನಾಯಕತ್ವದಲ್ಲಿ ಅನೇಕ ಚುನಾವಣೆಗಳನ್ನು ಎದುರಿಸಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಿದ್ರು. ತಮ್ಮ ದಕ್ಷ ಸಾರಥ್ಯದಲ್ಲಿ ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸಿದ್ರು. ಪಕ್ಷದ ಬಲವರ್ಧನೆಗೆ ಅವಿರತವಾಗಿ ಶ್ರಮಿಸಿ, ನಾಡಿನಾದ್ಯಂತ ಪ್ರವಾಸ ಕೈಗೊಂಡು ಜಿಲ್ಲೆ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷವನ್ನು ಹುಟ್ಟು ಹಾಕಿದವು. ಕಾರ್ಯಕರ್ತರನ್ನು ತನ್ನತ್ತ ಸೆಳೆದು ಪಕ್ಷವನ್ನು ಉಳಿಸಿ, ಬೆಳೆಸಿದರು.

ಹೊಸ ಗುರಿ, ಸ್ಪಷ್ಟ ನಡೆ: ಕುಮಾರಸ್ವಾಮಿ ಅವರು ಹೊಸ ಗುರಿಯನ್ನಿಟ್ಟುಕೊಂಡ ಸ್ಪಷ್ಟ ಹೆಜ್ಜೆ ಇಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸುವ ಛಲದೊಂದಿಗೆ ಹೊಸ ಹೊಸ ಕಾರ್ಯತಂತ್ರವನ್ನು ಮಾಡುತ್ತಿದ್ದಾರೆ. `ಪಂಚರತ್ನ' ಯೋಜನೆಯನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಸಾಗಿಸುವ ಮಹತ್ತರ ಕನಸು ಹೊಂದಿದ್ದಾರೆ. ಯುವಕರಿಗೆ. ಮಹಿಳೆಯರಿಗೆ ಅವಕಾಶ ನೀಡಿ, ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದವರಿಗೆ ಪ್ರಮುಖ ಆದ್ಯತೆ ನೀಡಲು ಬದ್ಧರಾಗಿದ್ದಾರೆ. ಜೆಡಿಎಸ್ ಪಕ್ಷವನ್ನು ಕಾರ್ಯಕರ್ತರ ಪಕ್ಷವನ್ನಾಗಿಸುವ ಮಹತ್ವದ ಯೋಚನೆಯನ್ನಿಟ್ಟುಕೊಂಡು ಈಗಾಗಲೇ ಸದಸತ್ವ ನೋಂದಾವಣಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಒಟ್ಟಾರೆ ಹೆಚ್.ಡಿ ಕುಮಾರಸ್ವಾಮಿಯವರ ಸಮರ್ಥ ನಾಯಕತ್ವ ಹಾಗೂ ಹೆಚ್.ಡಿ ದೇವೇಗೌಡ ಅವರ ಮಾರ್ಗದರ್ಶನ ಜೆಡಿಎಸ್ ಪಕ್ಷವನ್ನು ರಾಜ್ಯದ ಬಲಿಷ್ಟ ರಾಜಕೀಯ ಪಕ್ಷವಾಗಿ ಉಳಿಸಿದೆ. ಕನ್ನಡಿಗರ ದನಿಯಾಗಿ, ಕನ್ನಡಿಗರ ಪಕ್ಷವಾಗಿ ಜೆಡಿಎಸ್ ಕಾರ್ಯನಿರ್ವಹಿಸುತ್ತಿದೆ. ಜನರಿಗೆ ಸೇವೆ ಸಲ್ಲಿಸುತ್ತಿದೆ.

ACHIEVEMENTS

The Karnataka government under Shri. H D Kumaraswamy, earned many plaudits on the economic front, including for its success in bringing down the fiscal deficit.